ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಕೊನೆ ಬಜೆಟ್: ಭಾರದ್ವಾಜ್ ಭಾಷಣ ಸುಗಮ

By Srinath
|
Google Oneindia Kannada News

ktk-budget-session-2013-governor-hr-bhardwaj-speech
ಬೆಂಗಳೂರು, ಫೆ.4: ಸಾಕಷ್ಟು ಕಣ್ಣಾಮುಚ್ಚಾಲೆಯ ನಡುವೆ ಕೊನೆಗೂ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭಗೊಂಡಿದೆ. ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರು ಇದೀಗ ತಾನೆ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಭಾಷಣದ ನಂತರ ಅಧಿವೇಶಮವನ್ನು ನಾಳೆಗೆ ಮುಂದೂಡಲಾಗಿದೆ.

ಇದೀಗ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆದಿದೆ. ಫೆ. 8ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಂಡಿಸಲಿದ್ದಾರೆ. ಇದು ಬಿಜೆಪಿ ನೇತೃತ್ವದ ಸರಕಾರದ ಕೊನೆಯ ಬಜೆಟ್ ಸಹ ಆಗಿದೆ. ಒತ್ತಡಗಳ ಮಧ್ಯೆ ಸಿಲುಕಿರುವ ಶೆಟ್ಟರ್ ಸರಕಾರವು ಜನತೆಯಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಅವರು 16 ಪುಟಗಳ ಭಾಷಣ ಮಾಡಿದ್ದು, ಸರಕಾರದ ಜನಪರ ಕೆಲಸಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸುಮಾರು 2 ಗಂಟಗಳ ಕಾಲ ವಿಧಾನಸಭೆಯ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನವನ್ನು ಉದೇಶಿಸಿ ನಿರಂತರವಾಗಿ ಭಾಷಣ ಮಾಡಿದ ರಾಜ್ಯಪಾಲರು ತಮ್ಮ ಭಾಷಣದ ಉದ್ದಕ್ಕೂ ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.

ಭಾಷಣದ ಮುಖ್ಯಾಂಶ:

* ರಾಜ್ಯ ಸರಕಾರ ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿಪರ, ಜನಪರ ಆಡಳಿತಕ್ಕೆ ಸರಕಾರ ಒತ್ತು ನೀಡಿದೆ.
* ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾಗಿದ್ದು, ಬೆಳಗಾವಿ ಅಧಿವೇಶನದ ಮೂಲಕ ಐತಿಹಾಸಿಕ ಗಣನೀಯ ಸಾಧನೆ ಮಾಡಿದೆ.
* ಕರ್ನಾಟಕ ರಾಜ್ಯದಲ್ಲಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದ್ದು, 5 ವರ್ಷಗಳಲ್ಲಿ ತಲಾ 6,810 ರೂ. ಆದಾಯ ಏರಿಕೆಯಾಗಿದೆ.
* ಕೈಗಾರಿಕಾ ಅಭಿವೃದ್ಧಿ ಹಾಗೂ ಪ್ರವಾಸೋಧ್ಯಮಕ್ಕೆ ಹೆಚ್ಚು ನೀಡಲಾಗಿದೆ.
* ಸುಗಮ ಆಡಳಿತಕ್ಕೆ ಇ-ಗವರ್ನೆನ್ಸ್ ಜಾರಿ ಮಾಡಲಾಗಿದೆ. ರೈತರಿಗಾಗಿ ಭೂ-ಚೇತನಾ ಯೋಜನೆ ಜಾರಿ ಮಾಡಲಾಗಿದೆ.
* ರಾಜ್ಯದಲ್ಲಿ ನರೇಗಾ ಯೋಜನೆಯ ಅನುಷ್ಠಾನ ತೃಪ್ತಿಕರವಾಗಿದೆ.
* ರಾಜ್ಯದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಯೋಜನೆ ಜಾರಿಯಾಗಿದೆ.
* ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ.
* ಕಸ್ತೂರಿ ರಂಗನ್ ಸಮಿತಿಯ ಶಿಫಾರಸು ಅನುಷ್ಠಾನಗೊಳಿಸಲಾಗಿದೆ.
* ಬಡ ಮಕ್ಕಳ ವಸತಿ ಶಾಲೆ ಸ್ಥಾಪನೆ ಮಾಡಲಾಗಿದೆ. ಸ್ಕಾಲರ್ ಶಿಪ್ ನೀಡಿಕೆ.
* ಕಾವೇರಿ ಜಲಾನಯನದಲ್ಲಿ ಬರ ನಿರ್ವಹಣೆ
* ಬೆಂಗಳೂರು ಅಭಿವೃದ್ಧಿಗೆ ಗಮನ
* ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗಿದ್ದು, 'ನಮ್ಮ ಗ್ರಾಮ- ನಮ್ಮ ರಸ್ತೆ' ಯೋಜನೆಯನ್ನು ಜಾರಿ ಮಾಡಲಾಗಿದೆ.
* ರಾಜ್ಯದಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
* ಬೆಳಗಾವಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದೆ. 2ನೇ ಹಂತದ ಮೆಟ್ರೋ ಜೂನ್ 2013ರಿಂದ ಆರಂಭ.

English summary
Karnataka Budget Session 2013 Governor HR Bhardwaj speech. Governor H R Bhardwaj addressed both houses of the Karnataka legislature today (Feb 4), outlining the policy initiatives of the government for the year. Highlights...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X