• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಲ್ಮಾನ್ ರಶ್ದಿಯನ್ನು ದ್ವೇಷಿಸಲು ನಾನಾ ಕಾರಣ

By ವಿಜಯೇಂದ್ರ ಮೋಹಾಂತಿ
|
The barely tolerable Mr Rushdie
'ಸಟಾನಿಕ್ ವರ್ಸಸ್' ಕಾದಂಬರಿ ಬರೆದು ಮುಸ್ಲಿಂರ ದ್ವೇಷವನ್ನು ಕಟ್ಟಿಕೊಂಡಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಕೋಲ್ಕತಾ ಭೇಟಿಯ ಕುರಿತು ಅಸಹನೀಯ ಎನ್ನುವಷ್ಟು ಚರ್ಚೆಯಾಗಿದೆ. ಆ ಕುರಿತು ಅವರು ಕೂಡ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಸಂದರ್ಭ ಏನೇ ಇರಬಹುದು. ಆದರೆ, ಈ ಸೆಲೆಬ್ರಿಟಿ ಲೇಖಕರನ್ನು 'ದ್ವೇಷಿಸಲಿಕ್ಕೆ' ಇನ್ನೂ ಅನೇಕ ಕಾರಣಗಳಿವೆ.

ಅವರು ಬರೆದಿರುವ ಕಾದಂಬರಿಗಳನ್ನು ಓದುವುದು ಬಲು ಕಷ್ಟ. ಈ ಮಾತನ್ನು ಅವರನ್ನು ಆರಾಧಿಸುವ ಅನೇಕರು ಒಪ್ಪದಿದ್ದರೂ, ಅವರ ಕಾದಂಬರಿಗಳನ್ನು ಓದಿ ಅರಗಿಸಿಕೊಳ್ಳಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮೊದಲ ಬಾರಿ ಓದುತ್ತಿರುವವರಂತೂ ಓದನ್ನು ಅರ್ಧಕ್ಕೇ ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಇದರರ್ಥ, ರಶ್ದೀಯ ಬರವಣಿಗೆಯ ಆಳ, ಅಗಲ, ಸಾಹಿತ್ಯಿಕ ಸಾರವನ್ನು ಸವಿಯಲು ಓದುಗರು ಸೋತಿದ್ದಾರೆ ಎಂದರ್ಥವೆ? ಇದ್ದರೂ ಇರಬಹುದು. ಆದರೆ, ರಶ್ದಿ ಕಾದಂಬರಿಗಳನ್ನು ಓದದೆ ಸೋತ ಓದುಗರಲ್ಲಿ ನಾನೂ ಒಬ್ಬ.

ಇಂದಿನ ಗಂಭೀರ ಬರವಣಿಗೆಗಳು ಓದುಗರಲ್ಲಿ ಅಸಹನೀಯತೆ ಹೆಚ್ಚಿಸುತ್ತಿವೆ. ಓದುಗರನ್ನು ತೀವ್ರ ಗೊಂದಲಕ್ಕೆ ದೂಡಿ, ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದುವಂಥವು ಅತ್ಯುತ್ತಮ ಕಾದಂಬರಿಗಳು ಎಂಬಂತಹ ಅಭಿಪ್ರಾಯ ಮೂಡಿದೆ. ಭಾರತದ ಬಗ್ಗೆ ಬರೆದಂಥ ಪುಸ್ತಕಗಳು ಪಾಶ್ಚಾಮಾತ್ಯರಿಗಾಗಿಯೇ ಬರೆದಂತಿರುವುದರಿಂದ ಇಲ್ಲಿನ ಸರಳ ಮಧ್ಯಮ ವರ್ಗದ ಓದುಗರಿಗಾಗಿ ಇರುವ ಸರಳ ಕಥೆಗಳು, ಕಾದಂಬರಿಗಳು ಧೂಳು ತಿನ್ನುತ್ತಿವೆ.

ನಮ್ಮ ಆಂಗ್ಲ ಲೇಖಕರು ಬರೆದು ಬರೆದು ಬಿಸಾಕುತ್ತಿದ್ದಾರೆ. ಆದರೆ, ಓದುವವರೇ ಇಲ್ಲವಾಗಿದ್ದಾರೆ. ಭಾರತೀಯ ಪುಸ್ತಕಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಭಾರತೀಯರು ಪುಸ್ತಕಗಳನ್ನು ಓದುವುದಿಲ್ಲ ಅಂತಲ್ಲ, ಇಲ್ಲಿ ಬರೆಯಲಾದ ಪುಸ್ತಕಗಳು ಭಾರತೀಯರಿಗಾಗಿ ಇರುವುದಿಲ್ಲ, ಅಷ್ಟೆ. ಇಂಥವರಲ್ಲಿ ಅಪರೂಪದ ಲೇಖಕ ಅಂದರೆ, ಅವರು ಚೇತನ್ ಭಗತ್. ಅವರು ಭಾರತೀಯರ ಕಥೆಗಳನ್ನು ಭಾರತೀಯರಿಗಾಗಿ ನೀಡಿದ್ದಾರೆ. ಈ ಚಿಂತನೆಯನ್ನು ಇನ್ನಷ್ಟು ಆಳವಾಗಿ ತಿಳಿಯಬೇಕಿದ್ದರೆ ನಿಟಿ ಸೆಂಟ್ರಲ್‌ನಲ್ಲಿ ಈ ಲೇಖನವನ್ನು ಓದಿರಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In light of all that has been said this past week about the intolerance on display against acclaimed author Salman Rushdie and the opinions he has expressed in his unfortunately banned book Satanic Verses, it is perhaps worth mentioning that there can be more than one reason to ‘hate’ Rushdie.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more