ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಕೋಟಿ ಬಾಕಿ ಬೇಕಾ? ಕೋರ್ಟಿಗೆ ಬನ್ನಿ, ಗಂಗೂಲಿ

By Mahesh
|
Google Oneindia Kannada News

ಕೋಲ್ಕತ್ತಾ, ಫೆ.4: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸುಮಾರು 3 ಕೋಟಿ ರು ಪಾವತಿಸಬೇಕು ಶಾರುಖ್ ಖಾನ್ ಒಡೆತನದ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನೋಟಿಸ್ ನೀಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಬಿಟ್ಟು ಪುಣೆ ವಾರಿಯರ್ಸ್ ತಂಡ ಸೇರಿದ್ದ ಗಂಗೂಲಿ ಅವರು ಹಳೆ ಬಾಕಿ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವುದೇ ಬಾಕಿ ಮೊತ್ತ ಕೊಡಬೇಕಿಲ್ಲ. ಕೆಕೆಅರ್ ತಂಡದ ಸರ್ವೀಸ್ ತೆರಿಗೆ ಬಗ್ಗೆ ಹೈಕೋರ್ಟಿನಲ್ಲಿ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

Ganguly appeals against service tax claim of over Rs 3 crore

ಕೆಕೆಆರ್ ಹಾಗೂ ಗಂಗೂಲಿ ಕದನ ಈಗ ಮೈದಾನ ದಾಟಿ ಕೋರ್ಟ್ ಮೆಟ್ಟಿಲೇರಿದೆ. ಏಪ್ರಿಲ್ 2006 ರಿಂದ ಮಾರ್ಚ್ 2010ರ ತನಕ 1.51 ಕೋಟಿ ಬಾಕಿ ರು ಕೊಡಬೇಕಿದೆ ಎಂದು ಸಿನ್ಹಾ ಅಂಡ್ ಕಂಪನಿಯ ಪರ ಕೌನ್ಸಿಲ್ ಅಮಿತಾವ್ ಮಿತ್ರ ವಾದಿಸಿದ್ದಾರೆ.

ಮಂಗಳವಾರ(ಫೆ.5) ಪ್ರಕರಣ ಕೋಲ್ಕತ್ತಾ ಹೈಕೋರ್ಟಿನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಸರ್ವೀಸ್ ತೆರಿಗೆ ಆಯುಕ್ತ ಕೆಕೆ ಜೈಸ್ವಾಲ್ ಅವರು ಬಾಕಿ ಮೊತ್ತದ ಬಗ್ಗೆ ನವೆಂಬರ್ 2012ರಲ್ಲಿ ನೀಡಿದ ನಿರ್ಣಯ ಕೈಲಿ ಹಿಡಿದು ಕೊಂಡು ಗಂಗೂಲಿ ಕೋರ್ಟಿಗೆ ಕಾಲಿಡುವ ಸಾಧ್ಯತೆಯಿದೆ.

ಸೆಪ್ಟೆಂಬರ್ 2011ರಲ್ಲಿ ಬಾಕಿ ಮೊತ್ತದ ಬಗ್ಗೆ ಮೊದಲಿಗೆ ಸ್ವರ ಹೊರಡಿತ್ತು. business support service ಹಾಗೂ business auxilliary service ಎಂಬ ಸೆಕ್ಷನ್ ಅಡಿಯಲ್ಲಿ ಬಾಕಿ ಮೊತ್ತಕ್ಕಾಗಿ ನೋಟಿಸ್ ನೀಡಲಾಗಿತ್ತು.

ಗಂಗೂಲಿ ಅವರು ಕೆಕೆಆರ್ ತಂಡದಲ್ಲಿದ್ದಾಗ ಜಾಹೀರಾರು ಹಾಗೂ ಇನ್ನಿತರ ಪ್ರೊಮೋಗಳಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಗಳಿಸಿದ್ದ ಹಣದಲ್ಲಿ ಸುಮಾರು 2 ಕೋಟಿ ರು ತೆರಿಗೆ ರೂಪದಲ್ಲಿ ಗಂಗೂಲಿ ಪಾವತಿ ಮಾಡಿದ್ದರು.

ಆದರೆ, ಆರ್ಥಿಕ ಕಾಯ್ದೆ ಪ್ರಕಾರ ಆಟಗಾರರಿಗೆ ವಿಶೇಷವಾಗಿ ಟೀಂ ಇಂಡಿಯಾ ಪರ ಆಡುವ ಆಟಗಾರರಿಗೆ service tax ಅನ್ವಯವಾಗುವುದಿಲ್ಲ. ಹೀಗಾಗಿ ಸೌರವ್ ಗಂಗೂಲಿ ಅವರಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸೇವೆಗಾಗಿ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ.

English summary
Former India cricket captain Sourav Ganguly has challenged before the Calcutta High Court a service tax claim of over Rs three crore, which was charged during his term with the Kolkata Knight Riders for IPL and playing for Team India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X