• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಮಾಡಿ ವಿರುದ್ಧದ ಸಿಬಿಐ ಆರೋಪಪಟ್ಟಿಯಲ್ಲಿ ಏನಿದೆ?

By Mahesh
|

ನವದೆಹಲಿ, ಫೆ.4: ಕಾಮನ್ ವೆಲ್ತ್ ಹಗರಣದ ರುವಾರಿ ಸುರೇಶ್ ಕಲ್ಮಾಡಿ ಅವರಿಗೆ ಮತ್ತೊಮ್ಮೆ ಸಿಬಿಐ ಕಾಟ ಆರಂಭವಾಗಲಿದೆ. ಕಲ್ಮಾಡಿ ಸೇರಿದಂತೆ 9 ಜನರ ವಿರುದ್ಧ ಸಿಬಿಐ ತಂಡ ಸೋಮವಾರ (ಫೆ.4) ಹೊಸದಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿದೆ.

2010ರ ಕಾಮನ್ ವೆಲ್ತ್ ಆಯೋಜನಾ ಸಮಿತಿ ಅಧ್ಯಕ್ಷರಾಗಿ ಸುರೇಶ್ ಕಲ್ಮಾಡಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ನವದೆಹಲಿಯಲ್ಲಿ ಅಕ್ಟೋಬರ್ 2010ರಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ 90 ಕೋಟಿ ರು ಗೂ ಅಧಿಕ ಮೊತ್ತದ ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದಿತ್ತು.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟೈಮಿಂಗ್ ಸಿಸ್ಟಮ್(TSR) ಅಳವಡಿಸಲು ಸ್ವಿಸ್ ಟೈಮಿಂಗ್ ಕಂಪನಿಗೆ ಕಡಿಮೆ ಮೊತ್ತದಲ್ಲಿ ಬಿಡ್ ಮಂಜೂರು ಮಾಡಲಾಗಿತ್ತು. ಕಲ್ಮಾಡಿ ಹಾಗೂ ಇನ್ನಿತರ ಅಧಿಕಾರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸಿಬಿಐಗೆ ಸೂಚಿಸಲಾಗಿದೆ ಎಂದು ದೆಹಲಿ ಕೋರ್ಟ್ ಹೇಳಿತ್ತು.

ಕಲ್ಮಾಡಿ ವಿರುದ್ಧದ ಪ್ರಕರಣಗಳು:

* 120 (B)

* 120B (criminal conspiracy)

* 201 (destruction of evidence)

* 420 (cheating),

* 467, 468, 471 (relating to forgery),

* 506 (criminal intimidation) ಸೆಕ್ಷನ್ 13(2) (criminal misconduct by public servants)

ಪುಣೆಯ ಸಂಸದರಾಗಿರುವ ಸುರೇಶ್ ಕಲ್ಮಾಡಿ ಜೊತೆಗೆ 5 ಜನ ಪ್ರಮುಖ ಕಾಮನ್ ವೆಲ್ತ್ ಕ್ರೀಡಾಕೂಟ ಅಧಿಕಾರಿಗಳು ಸೇರಿದಂತೆ 9 ಜನರ ವಿರುದ್ಧ ಮೇಲ್ಕಂಡ ಆರೋಪಗಳನ್ನು ಹೊರೆಸಲಾಗಿದೆ. ಉಳಿದ ಆರೋಪಿಗಳು ಇಂತಿದ್ದಾರೆ:

* ಕಾಮನ್ ವೆಲ್ತ್ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೊಟ್

* CWG ಆಯೋಜನಾ ಸಮಿತಿ ಪ್ರಧಾನ ನಿರ್ದೇಶಕ ವಿಕೆ ವರ್ಮ

* CWG ಆಯೋಜನಾ ಸಮಿತಿ ಪ್ರಧಾನ ನಿರ್ದೇಶಕ(Procurement) ಸುರ್ಜೀತ್ ಲಾಲ್

* CWG ಆಯೋಜನಾ ಸಮಿತಿ ಜಂಟಿ ಪ್ರಧಾನ ನಿರ್ದೇಶಕ ಎಎಸ್ ವಿ ಪ್ರಸಾದ್

* CWG ಆಯೋಜನಾ ಸಮಿತಿ ಖಜಾಂಚಿ ಎಂ ಜಯಚಂದ್ರನ್

ಈ ಕ್ರೀಡಾಕೂಟದಲ್ಲಿ ನಡೆದ ಅವ್ಯವಹಾರದಿಂದ ಲಾಭ ಪಡೆದ ಸ್ವಿಸ್ ಮೂಲದ ಕಂಪನಿಯನ್ನು ಕೂಡಾ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಇದರ ಜೊತೆಗೆ ಜೆಮ್ ಇಂಟರ್ ನ್ಯಾಷನಲ್ ಹಾಗೂ ಎಕೆಆರ್ ಕನ್ಸ್ ಸ್ಟ್ರಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಗಳನ್ನು ಚಾರ್ಚ್ ಶೀಟ್ ನಲ್ಲಿ ಸೇರಿಸಲಾಗಿದೆ.

ಸುರೇಶ್ ಕಲ್ಮಾಡಿ ಜೊತೆಗೆ ಪ್ರಮುಖ ಆರೋಪಿಯಾಗಿರುವ ಲಲಿತ್ ಭಾನೋಟ್ ಅವರು ಈಗಾಗಲೆ ಒಂದು ವರ್ಷ ಜೈಲುವಾಸ ಅನುಭವಿಸಿದ್ದಾರೆ. ನಂತರ ಕಲ್ಮಾಡಿಯಂತೆ ಜಾಮೀನು ಪಡೆದು ಹೊರಬಿದ್ದಿದ್ದರು.

ಆದರೆ, ಭಾನೋಟ್ ಮೇಲೆ ದೊಡ್ಡ ಆರೋಪಗಳು ಕೇಳಿಬಂದರೂ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ಸ್(IOA) ಮುಖ್ಯಸ್ಥರಾಗಿ ಬಡ್ತಿ ನೀಡಿ ಯುಪಿಎ ಸರ್ಕಾರ ದೇಶದ ಜನತೆಗೆ ಅಚ್ಚರಿ ಮೂಡಿಸಿತ್ತು. ಸಿಬಿಐ ಚಾರ್ಜ್ ಶೀಟ್ ನಲ್ಲಿ ಹೆಸರು ಕಾಣಿಸಿಕೊಂಡಿರುವುದರಿಂದ ಭಾನೋಟ್ ಅವರ ಸ್ಥಾನ ಕೂಡಾ ಅಲ್ಲಾಡತೊಡಗಿದೆ.

English summary
Commonwealth Games (CWG) 2010 scam seems to have returned to haunt the country and its men. The investigative agency Central Bureau of Investigation (CBI) on Monday, Feb 4 framed charges against one of its prime accused Suresh Kalmadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X