ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಪ್ರವೇಶಕ್ಕೆ ವಾಲ್ಮಾರ್ಟ್ 'ಚಿಲ್ಲರೆ' ವ್ಯವಹಾರ

By Mahesh
|
Google Oneindia Kannada News

Wal-Mart continues lobbying in US for India entry
ಬೆಂಗಳೂರು, ಫೆ.4: ಯಾವುದನ್ನು ಅಮೆರಿಕದಲ್ಲಿ ಅಧಿಕೃತವಾಗಿ 'ಕಾರ್ಪೊರೇಟ್ ಲಾಬಿ' ಎನ್ನುತ್ತಾರೋ ಅದನ್ನು ಭಾರತಕ್ಕೆ ಡೀಲ್ ಕುದುರಿಸಲು ಲಂಚ ಕೊಟ್ಟ ಎನ್ನುತ್ತಾರೆ. ಚಿಲ್ಲರೆ ಮಾರುಕಟ್ಟೆ ದೈರ್ತ ವಾಲ್ಮಾರ್ಟ್ ಕಥೆಯೂ ಹಾಗೆ ಆಗಿದೆ.

ಜಾಗತಿಕ ಚಿಲ್ಲರೆ ದೈತ್ಯ ವಾಲ್‌ಮಾರ್ಟ್ ಭಾರತ ಪ್ರವೇಶಕ್ಕಾಗಿ ಅಮೆರಿಕದಲ್ಲಿ ಲಾಬಿ ಮುಂದುವರೆಸಿದೆ. ವಾಲ್‌ಮಾರ್ಟ್ 2012ರಲ್ಲಿ ಅಮೆರಿಕದ ಸಂಸದೀಯ ಪಟುಗಳ ಜತೆ ವ್ಯವಹಾರ ಕುದುರಿಸಲು 33 ಕೋಟಿ ರೂ.(6.13 ಮಿಲಿಯನ್ ಯುಎಸ್‌ಡಿ) ಖರ್ಚುಮಾಡಿದೆ. ಈ ಮಧ್ಯೆ, 2008ರಿಂದ ಲಾಬಿಗಾಗಿ ವಾಲ್‌ಮಾರ್ಟ್ ಖರ್ಚು ಮಾಡಿರುವುದು ಬರೋಬ್ಬರಿ 180 ಕೋಟಿ ರು ಎಂದು ತಿಳಿದು ಬಂದಿದೆ.

ಅಮೆರಿಕದ ಶಾಸನ ಸಭೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2012 ರ ಡಿ.31ಕ್ಕೆ ಅಂತ್ಯ ಕಂಡ ಕೊನೆಯ ತ್ರೈಮಾಸಿಕದಲ್ಲಿ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತ ಚರ್ಚೆ ಸೇರಿದಂತೆ ವಿವಿಧ ವಿಷಯ ಲಾಬಿಗಾಗಿ ಅಮೆರಿಕ ಮೂಲದ ವಾಲ್ ಮಾರ್ಟ್ ಮಳಿಗೆಗಳು ಒಟ್ಟು 8 ಕೋಟಿ ರೂ.(1.48 ಮಿಲಿಯನ್ ಯುಎಸ್‌ಡಿ) ವೆಚ್ಚಮಾಡಿವೆ. 2012ನೇ ವರ್ಷದಲ್ಲಿ ಕಂಪನಿ ನಡೆಸಿದ ಲಾಬಿಯ ಮೊತ್ತ ಒಟ್ಟು 33 ಕೋಟಿ ರೂ. ಎಂದು ಅಮೆರಿಕದ ಸೆನೆಟ್ ಬಹಿರಂಗಪಡಿಸಿದೆ.

ಅಮೆರಿಕದ ಸಂಸತ್ ಸದಸ್ಯರ ಜತೆ ವಾಲ್ ಮಾರ್ಟ್ ಪ್ರತಿ ತ್ರೈಮಾಸಿಕದಲ್ಲೂ ಹತ್ತಾರು ವಿಷಯಗಳ ಬಗ್ಗೆ ಲಾಬಿ ನಡಸುತ್ತದೆ. ಆದರೆ, ಅಮೆರಿಕದ ಕಾನೂನಿನ ಅಡಿಯಲ್ಲೇ ಆ ಮಾಹಿತಿಯನ್ನು ಬಹಿರಂಗ ಪಡಿಸಲಾಗುತ್ತದೆ.

ತನಿಖೆ ಆರಂಭ :ಇತ್ತೀಚೆಗಷ್ಟೆ, ದೇಶದ ಮಾರುಕಟ್ಟೆ ಪ್ರವೇಶಿಸಲು ಅಮೆರಿಕದಲ್ಲಿ ವಾಲ್‌ಮಾರ್ಟ್ ನಡೆಸಿದ ಲಾಬಿ ಚಟುವಟಿಕೆಗಳ ಬಗ್ಗೆ ಭಾರತದ ತನಿಖೆ ಆರಂಭಿಸಲಾಗಿದೆ. ಲಾಬಿ ಸಂಬಂಧ ಈ ಹಿಂದೆ ಮಾಹಿತಿ ಬಹಿರಂಗವಾದಾಗ ವಾಲ್‌ಮಾರ್ಟ್ ವ್ಯವಹಾರದ ದೇಶದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಯಿತು.

ಅಮೆರಿಕ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ವಾಲ್‌ಮಾರ್ಟ್ ಭಾರತದಲ್ಲಿ ವ್ಯಾಪಾರ ನಡೆಸಲು ಮತ್ತು ಇತರೆ ವಿಷಯಗಳ ಬಗ್ಗೆ ಸೆನೆಟ್ ಸದಸ್ಯರ ಜತೆ ಚರ್ಚಿಸಲು ಮಾತ್ರ ಲಾಬಿ ನಡೆಸಿದೆ. ಆದರೆ, ಈ ಸಂಬಂಧ ಭಾರತ ಸರ್ಕಾರದ ಅಧಿ ಕಾರಿಗಳ ಜತೆ ಮತ್ತು ರಾಜಕಾರಣಿಗಳ ಜತೆ ಕಂಪನಿವ್ಯವಹಾರ ನಡೆಸಿಲ್ಲ.

ವಾಲ್‌ಮಾರ್ಟ್, ಅತ್ಯಂತ ಲಾಭದಾಯಕ ಭಾರತದ ಮಾರುಕಟ್ಟೆ ಪ್ರವೇಶಿಸಲು 2008ರಿಂದ ಅಮೆರಿಕದ ಸಂಸತ್ ಸದಸ್ಯರೊಂದಿಗೆ ಲಾಬಿ ನಡೆಸುತ್ತಿದೆ. 2008 ರಿಂದ ಕಂಪನಿ ಲಾಬಿಗಾಗಿ ಒಟ್ಟು 180 ಕೋಟಿ ರೂ. ಖರ್ಚು ಮಾಡಿದೆ.

ದೇಶದ ಬಹು ಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ಪ್ರವೇಶಕ್ಕೆ ವಿಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ ಇತ್ತೀಚೆಗೆ ಅನುಮೋದನೆ ನೀಡಿದೆ. (ಪಿಟಿಐ)

English summary
As per the latest Congressional records of lobbying disclosure reports, the US-based Wal-Mart Stores spent a total amount of USD 1.48 million (about Rs eight crore) on lobbying for various issues, including on "discussions related to FDI in India", during the last quarter ended December 31, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X