ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಮೇಳಕ್ಕೆ ನಿತ್ಯಾನಂದ ; ಭಕ್ತಾದಿಗಳ ಭಾರೀ ವಿರೋಧ

By Prasad
|
Google Oneindia Kannada News

Nithyananda not welcome to Kumbh Mela
ಅಲಹಾಬಾದ್, ಫೆ. 2 : ಕಾಕತಾಳೀಯವೋ ಏನೋ ಲೈಂಗಿಕ ವಿಡಿಯೋದಲ್ಲಿ ಕಾಣಿಸಿಕೊಂಡು ಜೈಲು ಕಂಡ ವಿವಾದಾತ್ಮಕ ಸ್ವಾಮಿ ಬಿಡದಿ ಧ್ಯಾನಪೀಠಂನ ನಿತ್ಯಾನಂದ ಮತ್ತು ಆತನ ವಿರುದ್ಧ ಇರುವ ಎಲ್ಲ ಚಾನಲ್ಲುಗಳಲ್ಲಿ ದನಿಯೆತ್ತಿದ ಮತ್ತೊಬ್ಬ ವಿವಾದಾತ್ಮಕ ಸ್ವಾಮಿ ಕಾಳಿಮಠದ ಋಷಿಕುಮಾರ ಸ್ವಾಮಿ ಒಂದೇ ದಿನ ಸುದ್ದಿಯಲ್ಲಿದ್ದಾರೆ.

ಮೂರು ತಿಂಗಳು ಭೂಗತರಾಗಿದ್ದು ಇಂದು ಕಾಣಿಸಿಕೊಂಡಿರುವ 'ಡೀಲ್' ಸ್ವಾಮಿ ಋಷಿಕುಮಾರ ಕಡೂರಿನ ಬಳಿ 'ಲೋಕ ಕಲ್ಯಾಣ'ಕ್ಕಾಗಿ ಹೋಮ ಹವನ ನಡೆಸುತ್ತಿದ್ದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಾವಿಸ್ವಾಮಿ ನಿತ್ಯಾನಂದ ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಅಲಹಾಬಾದ್‌ನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ತ್ರಿವೇಣಿ ಸಂಗಮದ ಜಾಗದಲ್ಲಿ ನಿತ್ಯಾನಂದನ ಕಟ್ಟಾ ಭಕ್ತರು ದೊಡ್ಡ ಪೆಂಡಾಲನ್ನು ಹಾಕಿದ್ದು, ಅದರಲ್ಲಿ ನಿತ್ಯಾನಂದನ 8 ಅಡಿ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಷ್ಟು ಮಾತ್ರವಲ್ಲ, ಆ ಮೂರ್ತಿಗೆ ಹಾರ ಹಾಕಿ ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದೆ.

ಕೆರಳಿದ ಭಕ್ತಾದಿಗಳು : ಫೆ.4ರಂದು ಸ್ವತಃ ನಿತ್ಯಾನಂದ ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಫೆ. 14ರವರೆಗೆ ಹತ್ತು ದಿನಗಳ ಕಾಲ ಪ್ರತಿನಿತ್ಯ ಪ್ರವಚನ, ದಿನಕ್ಕೆರಡು ಯಜ್ಞಯಾಗ, ಯೋಗ ಧ್ಯಾನ ಶಿಬಿರಗಳನ್ನು ನಡೆಸಲಿದ್ದಾರೆ. ಕುಂಭಮೇಳಕ್ಕೆ ಆಗಮಿಸಿರುವ ಸಹಸ್ರಾರು ಭಕ್ತರನ್ನು ಕೆರಳಿಸಿರುವುದು ಇದೇ ಸಂಗತಿ.

ಒಬ್ಬ ಪೀಠಾಧಿಪತಿಯಾಗಿದ್ದುಕೊಂಡು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ನಿತ್ಯಾನಂದ ಪವಿತ್ರವಾದ ಮಹಾ ಕುಂಭಮೇಳಕ್ಕೆ ಬರುವುದು ಭಕ್ತಾದಿಗಳಿಗೆ ಬೇಡವಾಗಿದೆ. ಇಂಥ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವುದು ಬೇಡವೆಂದು ಭಕ್ತರ ನಿಯೋಗವೊಂದು ಜಿಲ್ಲಾ ಆಡಳಿತಾಧಿಕಾರಿಗಳಿಗೆ ದೂರು ನೀಡಿದೆ.

ಈಗಾಗಲೆ ಕುಂಭಮೇಳದಲ್ಲಿ ನಿತ್ಯಾನಂದನ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ನಿತ್ಯಾನಂದನ ಪ್ರತಿಮೆ ಸ್ಥಾಪಿಸಿ ಅದಕ್ಕೆ ಪೂಜೆ ಮಾಡುತ್ತಿರುವ ಅಸಹಜ, ವಿಕೃತ ನಡವಳಿಗೆ ಭಕ್ತಾದಿಗಳನ್ನು ಕೆರಳಿಸಿದೆ. ನಿತ್ಯಾನಂದನನ್ನು ಕುಂಭಮೇಳಕ್ಕೆ ಬರಲು ಅವಕಾಶ ಮಾಡಿಕೊಡಬಾರದು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುಂಭಮೇಳಕ್ಕೆ ರಾಜಕಾರಣಿಗಳ ದಂಡು : ಮುಂದಿನ ವಾರದಲ್ಲಿ ರಾಷ್ಟ್ರ ರಾಜಕಾರಣಿಗಳ ದಂಡೇ ಕುಂಭಮೇಳಕ್ಕೆ ಆಗಮಿಸಲಿದೆ. ಬಿಜೆಪಿಯ ಹೊಸ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪುಣ್ಯಕ್ಷೇತ್ರದಲ್ಲಿ ಮಿಂದೇಳಲಿದ್ದಾರೆ. ಕಾಂಗ್ರೆಸ್‌ನ ಪ್ರಧಾನಿ ಅಧ್ಯರ್ಥಿ ಎಂದೇ ಬಿಂಬಿತವಾಗಿರುವ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಕುಂಭಮೇಳಕ್ಕೆ ಬರುವುದು ಖಚಿತವಾಗಿದೆ. ಈ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಆಗಮಿಸಿ ಪೂಜೆ ಸಲ್ಲಿಸಿದರು.

English summary
Controversial swamy of Bidadi Dhyanapeetham Nithyananda is facing opposition from pilgrims in Allahabad Maha Kumbh Mela. Nithyananda's devotees have set up a pendal and have installed his idol in it. Nithya is arriving to Kumbh Mela on Feb 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X