ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡ್ಕರಿಗೆ ಮುಗ್ಗುಲಮುಳ್ಳಾದ ಪಕ್ಷದ ಹಿರಿಯ ತಲೆಗಳು

|
Google Oneindia Kannada News

ಪೂರ್ತಿ ಹಗರಣದ ಸಂಬಂಧ ಆದಾಯ ಇಲಾಖೆಯ ಅಧಿಕಾರಿಗಳು ಸತತ ದಾಳಿ ನಡೆಸುತ್ತಿದ್ದರೂ ನಿತಿನ್ ಗಡ್ಕರಿ ಎರಡನೇ ಅವಧಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗುವುದು ನಿಶ್ಚಿತ ಎನ್ನಲಾಗಿತ್ತು. ಗಡ್ಕರಿ ಆಯ್ಕೆಯ ವಿರುದ್ದ ಯಾರ ವಿರೋಧವಿದ್ದರೂ ಪಕ್ಷದ ಬೆನ್ನೆಲುಬಾಗಿರುವ RSS ಶ್ರೀರಕ್ಷೆ ಗಡ್ಕರಿ ಪರವಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಬಿಜೆಪಿ ಕೋರ್ ಕಮಿಟಿ ರಾಜನಾಥ್ ಸಿಂಗ್ ಅವರಿಗೆ ಮಣೆ ಹಾಕಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು.

ಗಡ್ಕರಿಗೆ ಹುದ್ದೆ ತಪ್ಪಿದ್ದು ಹೇಗೆ ಮತ್ತು ಯಾರಿಂದ? RSS ಸಿದ್ದಾಂತ ವಾದಿಯಾಗಿರುವ ಎಂ ಜಿ ವೈದ್ಯ ಅಭಿಪ್ರಾಯ ಪಡುವ ಪ್ರಕಾರ ಪಕ್ಷದ ಹಿರಿಯ ಮುಖಂಡರೇ ಗಡ್ಕರಿ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಲು ಕಾರಣ. ಗಡ್ಕರಿ ವಿರುದ್ದ ವ್ಯವಸ್ಥಿತ ಪಿತೂರಿ ನಡೆಸಿದ ಪಕ್ಷದ ಹಿರಿಯ ನಾಯಕರುಗಳು ಅವರ ವಿರುದ್ದದ ದಾಖಲೆಗಳನ್ನು ಮಾಧ್ಯಮಕ್ಕೆ ಒದಗಿಸಿದರು.

ಎರಡನೇ ಅವಧಿಗೆ ಗಡ್ಕರಿ ಆಯ್ಕೆ ರುಚಿಸದ ಇವರು ಅದನ್ನು ಸಭೆಯಲ್ಲಿ ವಿರೋಧಿಸುವ ಧೈರ್ಯ ತೋರದೇ ತೆರೆಮೆರೆಯಲ್ಲಿ ಸಂಚು ರೂಪಿಸಿದರು ಎಂದು ವೈದ್ಯ ಬೇಸರ ವ್ಯಕ್ತ ಪಡಿಸುತ್ತಾರೆ. ಹಾಗಿದ್ದರೆ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಗಡ್ಕರಿಗೆ ತಪ್ಪಿದ್ದು ಯಾರಿಂದ ? ಮುಂದೆ ಸ್ಲೈಡಿನಲ್ಲಿ ನೋಡಿ..

ಎಲ್ ಕೆ ಆಡ್ವಾಣಿ

ಎಲ್ ಕೆ ಆಡ್ವಾಣಿ

ಪಕ್ಷದ ಹಿರಿಯರಾದ ಲಾಲ್ ಕೃಷ್ಣ ಆಡ್ವಾಣಿ, ನಿತಿನ್ ಗಡ್ಕರಿ ಎರಡನೇ ಅವಧಿಗೆ ಆಯ್ಕೆಯಾಗುವುದಕ್ಕೆ ವೈಯಕ್ತಿಕವಾಗಿ ಭಾರೀ ವಿರೋಧ ವ್ಯಕ್ತ ಪಡಿಸಿದ್ದರು. RSS ಬೆಂಬಲ ಗಡ್ಕರಿ ಪರವಿದ್ದರೂ ಕೊನೇ ಕ್ಷಣದವರೆಗೂ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ.

ರಾಮ್ ಜೇಠ್ಮಲಾನಿ

ರಾಮ್ ಜೇಠ್ಮಲಾನಿ

ಪಕ್ಷದ ಇನ್ನೊಬ್ಬ ಹಿರಿಯ ನಾಯಕ ಮತ್ತು ಖ್ಯಾತ ನ್ಯಾಯವಾದಿ. ಸ್ಪೂರ್ತಿ ಹಗರಣದಿಂದ ಪಕ್ಷ ತಲೆತಗ್ಗಿಸುವಂತಾಗಿದೆ. ಅವರನ್ನು ಮುಂದುವರಿಸುವುದು ಹಾಗಿರಲಿ, ಗಡ್ಕರಿ ರಾಜೀನಾಮೆ ನೀಡಬೆಕೆಂದು ಹಠ ಹಿಡಿದಿದ್ದರು.

ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ

ಭ್ರಷ್ಟಾಚಾರ ಆರೋಪ ಹೊತ್ತಿರುವ ಗಡ್ಕರಿ ಎರಡನೇ ಅವಧಿಗೆ ಯಾವುದೇ ಕಾರಣಕ್ಕೂ ಮುಂದುವರಿಯ ಬಾರದು. ಒಂದು ವೇಳೆ ಸಂಸದೀಯ ಮಂಡಳಿ ಅವಿರೋಧ ಆಯ್ಕೆಗೆ ಮುಂದಾದರೆ ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದಿದ್ದರು.

ಮಹೇಶ್ ಜೇಠ್ಮಲಾನಿ

ಮಹೇಶ್ ಜೇಠ್ಮಲಾನಿ

ರಾಮ್ ಜೇಠ್ಮಲಾನಿ ಮತ್ತು ಪಕ್ಷದ ಪ್ರಭಾವಿ ನಾಯಕ. ನಿತಿನ್ ಗಡ್ಕರಿ ಆಯ್ಕೆ ವಿರುದ್ದ ಮಾಧ್ಯಮದ ಮುಂದೆಯೇ ಪಕ್ಷವನ್ನು ತರಾಟೆಗೆ ತೆಗೆದು ಕೊಂಡಿದ್ದರು.

ಜಸ್ವಂತ್ ಸಿಂಗ್

ಜಸ್ವಂತ್ ಸಿಂಗ್

ಮೃದು ಸ್ವಭಾವದ ಜಸ್ವಂತ್ ಗಡ್ಕರಿ ಆಯ್ಕೆ ವಿರೋಧಿಸಿ ಆಡ್ವಾಣಿಗೆ ತನ್ನ ಸಂಪೂರ್ಣ ಬೆಂಬಲ ಸೂಚಿಸಿದ್ದರು.

English summary
BJP seniror leaders behind exit of Nitin Gadkari from second term as National President post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X