• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಧನಕ್ಕೆ ತಯಾರಿ; KJP ಪದ್ಮನಾಭ ಪರಾರಿ

By Srinath
|

ಬೆಂಗಳೂರು, ಫೆ.01: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೇ ಚಳ್ಳೆಹಣ್ಣು ತಿನ್ನಿಸಲು ಹೋಗಿ ಖುದ್ದು ಪ್ರಪಾತಕ್ಕೆ ಬಿದ್ದಿರುವ KJP ಸಂಸ್ಥಾಪಕ ಪದ್ಮನಾಭಗೆ ಈಗ ಮತ್ತೊಂದು ಸಂಕಟ ಎದುರಾಗಿದೆ. ಬಳ್ಳಾರಿ ಬ್ರೂಸ್ ಟೌನ್ ಪೊಲೀಸರು ರಾಜಧಾನಿಯಲ್ಲಿರುವ ಕೋಣನಕುಂಟೆ ವಾಸಿ ಪದ್ಮನಾಭ ಪ್ರಸನ್ನ ಕುಮಾರ್ ಅವರನ್ನು ಬಂಧಿಸಲು ಬಳ್ಳಾರಿಯಿಂದ ಹೊರಟಿದ್ದಾರೆ.

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮನಾಭರನ್ನು ಬಂಧಿಸುವ ಸಲುವಾಗಿ ಬಳ್ಳಾರಿಯ ಪೊಲೀಸರು ಗುರುವಾರ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಬ್ರೂಸ್‌ ಪೇಟೆ ಸಿಪಿಐ ಬೂಪಯ್ಯ ಅವರು ಪೊಲೀಸರ ತಂಡವೊಂದನ್ನು ರಚಿಸಿದ್ದು, ಪ್ರಸನ್ನ ಕುಮಾರ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವ ಸಲುವಾಗಿ ತಂಡವನ್ನು ಬೆಂಗಳೂರಿಗೆ ಕಳಿಸಿದ್ದಾರೆ.

ಪದ್ಮನಾಭ ಪ್ರಸನ್ನ ಹೊರ ರಾಜ್ಯಕ್ಕೆ ಪರಾರಿ:

ಆದರೆ, ಯಡಿಯೂರಪ್ಪ ಅವರನ್ನು ಉಚ್ಛಾಟಿಸಿ ಎಡವಟ್ಟುಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಲು ಪದ್ಮನಾಭ ಪ್ರಸನ್ನ ಗುರುವಾರ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದರು. ಆದರೆ ಅದನ್ನು ದಿಢೀರ್ ರದ್ದುಗೊಳಿಸಿ, ತನಗೆ ಜೀವ ಬೆದರಿಕೆಯಿರುವ ಕಾರಣ ಹೊರ ರಾಜ್ಯದಲ್ಲೇ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಏನಿದು ಪ್ರಕರಣ: ಸುಮಾರು 6 ತಿಂಗಳ ಹಿಂದೆ ಪ್ರತಾಪ ರೆಡ್ಡಿ ಎಂಬುವರು ಪರಮ ದೇವನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಹೊಸ ಪಕ್ಷ ಕೆಜೆಪಿಗೆ ಸೇರಿಸಿಕೊಳ್ಳಲು ಪ್ರಸನ್ನ ಕುಮಾರ ಅವರು ಪ್ರತಾಪ ರೆಡ್ಡಿ ಸೇರಿದಂತೆ ಜನರಿಂದ ಹಣ ಸಂಗ್ರಹಿಸಿದ್ದರು. ನಂತರ ಪ್ರಸನ್ನ ಕುಮಾರ ಅವರು ಕೆಜೆಪಿಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟುಕೊಟ್ಟಿದ್ದರು.

ಈ ಮಧ್ಯೆ ಪ್ರತಾಪ ಸೇರಿದಂತೆ ಅನೇಕರು ಹಣ ವಾಪಸ್ ಕೊಡುವಂತೆ ಪ್ರಸನ್ನ ಕುಮಾರ ಅವರಿಗೆ ಆಗ್ರಹಿಸಿದರು. ಆಗ ಪ್ರಸನ್ನ ಅವರು ಪ್ರತಾಪ ಅವರಿಗೆ ಚೆಕ್ ನೀಡಿದ್ದರು. ಆ ಚೆಕ್ ಬೌನ್ಸ್ ಆದಾಗ ಪ್ರತಾಪ ಅವರು ಪ್ರಸನ್ನ ಅವರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು. ಕೆಲವು ದಿನಗಳ ಹಿಂದೆ ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಬಂದಾಗ, ಪ್ರಸನ್ನ ಕುಮಾರ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಲಾಗಿತ್ತು.

English summary
The expelled founder of KJP Padmanabha Prasanna Kumar faces imminent arrest by Bellary police in a cheque bounce case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more