ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಸಾಲ ನಿಜಕ್ಕೂ ಚಿನ್ನದಂತಹದ್ದು, ಯಾಕೆ ಗೊತ್ತಾ?

By Srinath
|
Google Oneindia Kannada News

ಬೆಂಗಳೂರು: 12 ವರ್ಷಗಳಿಂದ ಒಂದೇ ಸಮನೆ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಿದೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 30 ಸಾವಿರ ರೂ.ಗಿಂತ ಕಡಿಮೆಯಾಗಿದೆ.

ಈ ಸಂದರ್ಭದಲ್ಲಿ, ಒಂದಷ್ಟು ಚಿನ್ನದ ಹಣಕಾಸು ವಿಷಯಗಳು ಇಲ್ಲಿವೆ. ಚಿನ್ನ ನಿಜಕ್ಕೂ ಆಪತ್ಪಾಂಧವನೇ ಸರಿ. ಕೆಳ ಮತ್ತು ಮಧ್ಯಮ ವರ್ಗದವರಿಗೆ ಚಿನ್ನ ಅಲಂಕಾರ ಭೂಷಣಕ್ಕಿಂತ ಎಂದಿಗೂ ಆಪತ್ಕಾಲದಲ್ಲಿ ಕೈಹಿಡಿಯುವ ಸಾಧನವೇ ಸರಿ.

ಮೊದಲೆಲ್ಲ ತಮ್ಮ ಬಳಿಯಿರುವ ಅಷ್ಟೋ ಇಷ್ಟೋ ಚಿನ್ನವನ್ನೂ ಸಾಲಕ್ಕಾಗಿ ಅಡ ಇಡುವುದೆಂದರೆ ಅಶುಭ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸರಕಾರಿ ಬ್ಯಾಂಕುಗಳೇ ಪಕ್ಕಾ ಲೇವಾದೇವಿ ಸಂಸ್ಥೆಗಳಾಗಿದ್ದು, ಚಿನ್ನದ ಮೇಲೆ ಸಾಲ ಕೊಡಲು ಸದಾ ಬಾಗಿಲು ತೆರೆದುಕೊಂಡು ಗ್ರಾಹಕನಿಗಾಗಿ ಕಾಯುತ್ತಿವೆ.

ಹಾಗಾಗಿ, ನಿಮಗೆ ಸಾಲದ ಜರೂರತ್ತು ಹೆಚ್ಚಾಗಿದ್ದಾಗ ಖಂಡಿತ ಚಿನ್ನದತ್ತ ಕಣ್ಣುಹಾಯಿಸಬಹುದು. ವೈಯಕ್ತಿಕ ಸಾಲಕ್ಕಿಂತ ಚಿನ್ನದ ಮೇಲಿನ ಸಾಲ ಅಗ್ಗವಾಗಿರುತ್ತದೆ. ಹೇಗೆಂದರೆ...

ಚಿನ್ನದ ಮೌಲ್ಯದ ಶೇ.80ರಷ್ಟು ಸಾಲ:

ಚಿನ್ನದ ಮೌಲ್ಯದ ಶೇ.80ರಷ್ಟು ಸಾಲ:

ಹಣದ ಅವಶ್ಯಕತೆ ಇದ್ದಾಗ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವ ಕ್ರಮ ಹಿಂದಿನಿಂದಲೂ ಬೆಳೆದುಬಂದಿದೆ. ಆರ್ಥಿಕವಾಗಿ ಬಲಿಷ್ಠವಾದ ವ್ಯಕ್ತಿಯು ಇಂತಹ ಸಾಲ ನೀಡುವ ಮೂಲಕ ತನ್ನ ವಹಿವಾಟನ್ನೂ ಹೆಚ್ಚಿಸಿಕೊಳ್ಳುತ್ತಿದ್ದ. ಈ ಸಾಲದ ಅನ್ವಯ, ಹಣದ ಅವಶ್ಯಕತೆಯಿರುವವರು ಆಭರಣದ ರೂಪದಲ್ಲಿರುವ ಚಿನ್ನವನ್ನು ಬ್ಯಾಂಕ್ ಅಥವಾ ಇತರೆ ಸಂಸ್ಥೆಯಲ್ಲಿ ಅಡವಿಡಬೇಕಾಗುತ್ತದೆ. ಅಡವಿಟ್ಟ ಚಿನ್ನದ ಮೌಲ್ಯದ ಶೇ. 80ರಷ್ಟನ್ನು ನಗದು ರೂಪದಲ್ಲಿ ಸಾಲವನ್ನಾಗಿ ಪಡೆಯಬಹುದು.

ಚಿನ್ನ ಅಡಮಾನ: ವ್ಯತ್ಯಾಸವೇನು?

ಚಿನ್ನ ಅಡಮಾನ: ವ್ಯತ್ಯಾಸವೇನು?

1. ಚಿನ್ನವನ್ನು ಬ್ಯಾಂಕ್‌ನಲ್ಲಿ ಇಡುವ ಕಾರಣ ಇದೊಂದು ಸುರಕ್ಷಿತ ಸಾಲವಾಗಿರುತ್ತದೆ.
2. ಚಿನ್ನದ ಅಡಮಾನ ಸಾಲದ ಮರುಪಾವತಿ ಅವಧಿಯು ಕಡಿಮೆ ಇರುತ್ತದೆ. ಅಂದರೆ ಗರಿಷ್ಠ 12 ತಿಂಗಳುಗಳಾಗಿರುತ್ತದೆ.
3. ಇಲ್ಲಿ ಸಾಲದ ಮೊತ್ತವು ಸಾಲಗಾರ ಅಡವಿಟ್ಟ ಚಿನ್ನದ ಮೌಲ್ಯವನ್ನು ಅವಲಂಬಿಸಿರುತ್ತದೆಯೇ ವಿನಾ ಆತನ ಮರುಪಾವತಿ ಸಾಮರ್ಥ್ಯದ ಮೇಲಲ್ಲ.
4. ಮಧ್ಯಂತರ ಅವಧಿಯಲ್ಲಿ ಚಿನ್ನದ ಮೌಲ್ಯ ವ್ಯತ್ಯಾಸವಾದರೆ ಸ್ವಲ್ಪ ಮಟ್ಟಿನ ರಿಸ್ಕ್ ಎದುರಾಗುತ್ತದೆ.

ಚಿನ್ನದ ಸಾಲದ ಲಾಭವೇನು?

ಚಿನ್ನದ ಸಾಲದ ಲಾಭವೇನು?

1. ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಚಿನ್ನದ ಮೇಲಿನ ಸಾಲದ ಪ್ರಕ್ರಿಯೆ ಕಡಿಮೆ. ಹಾಗಾಗಿ ಬೇಗನೆ ಸಾಲ ದೊರೆಯುತ್ತದೆ.
2. ಸಾಲಕ್ಕಾಗಿ ನೀಡುವ ದಾಖಲೆಗಳೂ ಕಡಿಮೆ.
3. ಇಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಯಾಗುತ್ತದೆ ಎಂಬ ನಂಬಿಕೆ ಬ್ಯಾಂಕಿನವರಿಗಿರುತ್ತದೆ. ಏಕೆಂದರೆ, ಮರುಪಾವತಿ ತಪ್ಪಿಸುವ ಮೂಲಕ ಚಿನ್ನಾಭರಣವನ್ನು ಕಳೆದುಕೊಳ್ಳಲು ಯಾರೂ ಇಚ್ಛಿಸುವುದಿಲ್ಲ.

ಚಿನ್ನ ಸಾಲದ ಬಡ್ಡಿ ದರ ಕಡಿಮೆ

ಚಿನ್ನ ಸಾಲದ ಬಡ್ಡಿ ದರ ಕಡಿಮೆ

1 ಮರುಪಾವತಿ ಅವಧಿಯಲ್ಲಿ ಕೇವಲ ಬಡ್ಡಿಯನ್ನು ಮಾತ್ರ ಪಾವತಿಸುವಂತಹ ಅವಕಾಶವನ್ನೂ ಕೆಲವು ಸಂಸ್ಥೆಗಳು ನೀಡುತ್ತವೆ. ಅವಧಿ ಪೂರ್ಣಗೊಳ್ಳುವ ವೇಳೆ ಸಾಲದ ಪೂರ್ಣ ಮೊತ್ತ ಪಾವತಿಸಬೇಕು. ಹೀಗಾಗಿ ಸಾಲಗಾರನ ಮೇಲೆ ಹೊರೆಬೀಳುವುದು ತಪ್ಪುತ್ತದೆ.
2 ಈ ಸಾಲ ಪಡೆಯಲು ಸಾಲಗಾರ ತನ್ನ ಚಿನ್ನವನ್ನು ಅಡಮಾನವಿಡುವ ಕಾರಣ ಈ ಸಾಲದ ಮೇಲಿನ ಬಡ್ಡಿ ದರವು ವೈಯಕ್ತಿಕ ಸಾಲಕ್ಕಿಂತ ಕಡಿಮೆಯಾಗಿರುತ್ತದೆ. ಇದು ಸುಮಾರು ಶೇ. 11ರಿಂದ 15 ರಷ್ಟಿರುತ್ತದೆ.

English summary
Gold loan is better than personal loan. Gold has a certain element of emotional value for all Indians. Taking personal loans against family gold had not been considered a preferable option till late, though the tradition of loan against gold had been in practice for centuries through unorganized money lenders. So, gold loan is better than personal loan Why.... Read.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X