ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಮ್ಸ್ ಅಪ್ ಹಿಂದಿಕ್ಕಿ ಮುನ್ನುಗ್ಗಿದ ಸ್ಪ್ರೈಟ್

By Mahesh
|
Google Oneindia Kannada News

Sprite India's No.1 Soft Drink
ನವದೆಹಲಿ, ಜ.31: ಬೇಸಿಗೆಯ ಬಿಸಿಲಲ್ಲಿ ದೇಹ ತಂಪಾಗಿಸಿಕೊಳ್ಳಲು ಎಳೆನೀರು, ನಿಂಬೆ ಷರಬತ್ತಿಗೆ ಮೊರೆ ಹೋಗುವ ಕಾಲ ಎಂದೋ ಮುಗಿದಿದೆ. ಪೆಪ್ಸಿ ಹಾಗೂ ಕೋಕಾ ಕೋಲಾ ಈಗ ತಂಪು ಪಾನೀಯ ಮಾರುಕಟ್ಟೆಯನ್ನು ಆಳುತ್ತಿದ್ದು, ಸದ್ಯಕ್ಕೆ ಬ್ರ್ಯಾಂಡ್ ಸ್ಪ್ರೈಟ್ ಮುಂಚೂಣಿಯಲ್ಲಿದೆ.

ಕಾರ್ಬನೇಟೆಡ್ ಸಾಫ್ಟ್ ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ಇದುವರೆವಿಗೂ ಟಾಪ್ ಸ್ಥಾನದಲ್ಲಿದ್ದ ಥಮ್ಸ್ ಅಪ್ ಅನ್ನು ಡೌನ್ ಮಾಡಿ ಸ್ಪ್ರೈಟ್ ಮುನ್ನುಗ್ಗುತ್ತಿದೆ. ಈ ಎರಡೂ ಕೂಡಾ ಪಾರ್ಲೆಯಿಂದ ಕೋಕಾ ಕೋಲಾ ಪಡೆದ ಬ್ರ್ಯಾಂಡ್ ಗಳಿರುವುದು ವಿಶೇಷ.

ಬೇಸಿಗೆಗಾಗಿ ವಿಶೇಷವಾಗಿ sprite ಮಾರಾಟದಲ್ಲಿ ಕೋಕಾ ಕೋಲಾ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯಕ್ಕೆ ಶೇ 16 ರಷ್ಟು sprite ಪಾಲು ಹೊಂದಿದ್ದರೆ, ಥಮ್ಸ್ ಅಪ್ ಶೇ 15 ರಷ್ಟು ಪಾಲು ಪಡೆದಿದೆ.

ಕೊಕ್ ಗೆ ಪೈಪೋಟಿ ನೀಡುತ್ತಿರುವ ಪೆಪ್ಸಿ ಶೇ 11.3 ರಷ್ಟು ಪಾಲು ಹೊಂದಿದೆ. ಭಾರತದಷ್ಟೇ ಅಲ್ಲದೆ ಚೀನದಲ್ಲೂ ಅತ್ಯಂತ ಹೆಚ್ಚು ಮಾರಾಟವಾಗುವ ತಂಪು ಪಾನೀಯ ಉತ್ಪನ್ನವಾಗಿ sprite ಬೆಳೆಯುತ್ತಿದೆ.

ಅಚ್ಚರಿ ಎಂಬಂತೆ ಕೋಕಾ ಕೋಲಾ ಬ್ರ್ಯಾಂಡ್ ಪೆಪ್ಸಿಗಿಂತ ಹಿಂದೆ ಇದ್ದು ಶೇ 7.5 ರಷ್ಟು ಮಾತ್ರ ಪಾಲು ಹೊಂದಿದೆ. ಉಳಿದಂತೆ ಫಾಂಟಾ ಹಾಗೂ ಮಿರಿಂಡಾ ಕೂಡಾ ಕೊಕ್ ಹಿಂದಿನ ಸ್ಥಾನದಲ್ಲಿದ್ದು ಪೈಪೋಟಿಯಿಂದ ಹೊರಗುಳಿದಿದೆ.

ಕೋಲಾ ವಿಭಾಗ ಮಾರುಕಟ್ಟೆ ಸುಮಾರು 5,000 ಕೋಟಿ ವಹಿವಾಟು ನಡೆಸಿದ್ದರೆ, ನಿಂಬೆ ರಸದ ಮಾರುಕಟ್ಟೆ 6,500 ಕೋಟಿ ರು ವಹಿವಾಟು ಕಂಡಿದೆ. ಕಿತ್ತಲೆ ರಸದ ಮಾರುಕಟ್ಟೆ ಸುಮಾರು 2,700 ಕೋಟಿ ರು ನಷ್ಟಿದೆ. ಒಟ್ಟಾರೆ 14,000 ಕೋಟಿ ರು ಮಾರುಕಟ್ಟೆ ತಂಪು ಪಾನೀಯ ಗ್ರಾಹಕರನ್ನು ನೆಚ್ಚಿಕೊಂಡಿದೆ.

Sprite ತನ್ನ ಟ್ಯಾಗ್ ಲೈನ್ 'chalo apni chaal' ಮುಂದುವರೆಸಲಿದ್ದು, ಬೇಸಿಗೆ ಇನ್ನಷ್ಟು ಗ್ರಾಹಕರ ದಣಿವಾರಿಸಲು ಸಿದ್ಧವಾಗಿದೆ ಎಂದು ಕೊಕ್ ವಕ್ತಾರರು ಹೇಳಿದ್ದಾರೆ.

English summary
After Thumbs Up, Brand Sprite, also a Coca Cola brand, is likely to be India’s largest selling soft drink brand by the middle of the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X