ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KJP ಸಂಸ್ಥಾಪಕ ಪದ್ಮನಾಭ ಕಿಕ್ಡ್ ಔಟ್

By Srinath
|
Google Oneindia Kannada News

KJP president Yeddyurappa expel Padmanabha Prasanna Kumar
ಬೆಂಗಳೂರು, ಜ.30: ಇದ್ದಿದ್ದೊಂದು ಇಲಿ ಕಚ್ಕೊಂಡು ಹೋಯ್ತು ಎಂಬ ಪ್ರಸಂಗ ಪ್ರಸನ್ನ ಅವರದ್ದಾಗಿದೆ. ಹೌದು Karnataka Janata Party ಎಂಬ ಚಲಾವಣೆಯಲ್ಲಿಲ್ಲದ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೀವತುಂಬಿದ್ದೇ ತಡ, ಸದ್ಯೋಭವಿಷ್ಯತ್ತಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪಕ್ಷದ ಭವಿಷ್ಯದ ಬಗ್ಗೆ ಪದ್ಮನಾಭ ಪ್ರಸನ್ನ ಕುಮಾರ್ ಮಹತ್ವಾಕಾಂಕ್ಷಿಯಾಗಿದ್ದರು.

ಹಾಗಾಗಿ ಕೇಂದ್ರ ಚುನಾವಣೆ ಆಯೋಗದ ಜತೆ ಕಣ್ಣಾಮುಚ್ಚಾಲೆಯಾಡುತ್ತಾ ಪಕ್ಷದ ಅಧ್ಯಕ್ಷ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಆಟಕ್ಕಿಳಿದರು. ಒಮ್ಮೆ ತಾವೇ ಅಧ್ಯಕ್ಷರು ಅಂದರು. ಮಗದೊಮ್ಮೆ ಅಲ್ಲಲ್ಲ ತಾವು ಸಂಸ್ಥಾಪಕ ಅಧ್ಯಕ್ಷರು ಅಂದರು. ನಿಮ್ಮ ಪಕ್ಷದಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂಬೊ ಸ್ಥಾನವೇ ಇಲ್ಲ. ಸರಿಯಾಗಿ ಹೇಳಿ ಯಾರು ಅಧ್ಯಕ್ಷರು ಎಂದು ಆಯೋಗ ಗರಂ ಆಯಿತು.

ಈ ಮಧ್ಯೆ, ವೇಣೂರು ಧನಂಜಯ ಕುಮಾರ್ ಆಳ್ವಾ ಹಂಗಾಮಿಯಾಗಿ ಅಧ್ಯಕ್ಷರಾದ ಬಳಿಕ ಪಕ್ಷವನ್ನು ತಮ್ಮ ಸ್ವಂತ ಆಸ್ತಿಯನ್ನಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಾವೇರಿಯ ತುಂಬು ಸಭೆಯಲ್ಲಿ ಪಟ್ಟಾಭಿಷೇಕ ಮಾಡಿಸಿಕೊಂಡರು.

ಪಕ್ಕದಲ್ಲೇ ವಿರಾಜಮಾನರಾಗಿದ್ದ ಪದ್ಮನಾಭ 'ಯಡಿಯೂರಪ್ಪ ಅವರು ಸಿಕ್ಕಿದ್ದು ನನ್ನ ಪುಣ್ಯ. ಅಧ್ಯಕ್ಷ ಸ್ಥಾನವನ್ನು ಅವರಿಗೆ ಧಾರೆಯೆರೆಯುತ್ತಾ ನಾನು ಕೃತಾರ್ಥನಾಗಿದ್ದೇನೆ' ಎಂದು ಘಂಟಾಘೋಷವಾಗಿ ಹೇಳಿದಾಗ ಸಭೆಯಲ್ಲಿದ್ದ 2 ಲಕ್ಷ ಮಂದಿ ಭಾರಿ ಕರತಾಡನ ಮಾಡಿ, ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಕ್ಕೆ ಸಾಕ್ಷೀಭೂತರಾದರು.

ಆ ಬಳಿಕ, ತಾಂತ್ರಿಕವಾಗಿಯೂ ಅದನ್ನು ಕಾನೂನುಬದ್ಧಗೊಳಿಸಲು ಒಂದು ಕಾರ್ಯಕಾರಿಣಿ ಸಭೆ ಅಂತ ಮಾಡಿ, ಯಡಿಯೂರಪ್ಪ ಅಧಿಕಾರ ವಹಿಸಿಕೊಂಡರು. ಮತ್ತು ಆ ಬಗ್ಗೆ ಆಯೋಗದಿಂದ ಅದಕ್ಕೆ ಅಧಿಕೃತ ಮುದ್ರೆಯನ್ನೂ ಒತ್ತಿಸಿಕೊಂಡರು.

ಈ ಮಧ್ಯೆ, ಮಹತ್ವಾಕಾಂಕ್ಷೆಗೆ ಬಿದ್ದ ಪದ್ಮನಾಭ ಆ-ಈ ಪಕ್ಷಗಳ ಮಾತು ಕೇಳಿ ನಿನ್ನೆ ದಿಢೀರನೆ ಯಡಿಯೂರಪ್ಪ ಉಚ್ಛಾಟನೆ ಎಂಬ ಸುದ್ದಿಗೆ ಗುದ್ದುಕೊಟ್ಟರು. ಆದರೆ ಅಷ್ಟೇ ವೇಗದಲ್ಲಿ ಎಚ್ಚೆತ್ತ ಯಡಿಯೂರಪ್ಪ ಅಂಥದ್ದೇನೂ ಇಲ್ಲ. ನಾನೇ ಇಲ್ಲಿ ಸರ್ವಾಧಿಕಾರಿ. ನೀನ್ಯಾರೋ ನನಗೆ ಗೊತ್ತಿಲ್ಲ' ಎಂದು ಪ್ರತಿಕ್ರಿಯಿಸಿದರು.

ಕೆಜೆಪಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಮುಖಾಂತರ ಪ್ರಸನ್ನ ಕುಮಾರ್ ಪದ್ಮನಾಭ ಅವರನ್ನೇ ಉಚ್ಚಾಟಿಸಿಬಿಟ್ಟರು. ಪ್ರತಿಪಕ್ಷಗಳ ರಾಜಕೀಯ ಹುನ್ನಾರದೊಂದಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಪ್ರಸನ್ನ ಕುಮಾರ್ ಸದ್ಯಕ್ಕೆ hit wicket ಆಗಿದ್ದಾರೆ.

'ಪದ್ಮನಾಭ ಪ್ರಸನ್ನ ಕುಮಾರ್ ಅವರು ನ. 9ರಂದು ಕೆಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ನಂತರ ಧನಂಜಯಕುಮಾರ್ ಅವರು ಈ ಸ್ಥಾನಕ್ಕೆ ನೇಮಕಗೊಂಡಿದ್ದರು. ಅಲ್ಲದೆ, ಮಾರನೇ ದಿನ ಅವರು ತಾವು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಗ್ಗೆಯೂ' ಗೋಖಲೆ ಆಯೋಗಕ್ಕೆ ತಿಳಿಸಿದ್ದಾರೆ.

'ಜತೆಗೆ ಯಡಿಯೂರಪ್ಪ ಅವರು ಡಿ. 9ರಂದು ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಗ್ಗೆಯೂ ವಿವರಣೆ ನೀಡಿದ್ದಾರೆ. ಹೀಗಾಗಿ ಪ್ರಸನ್ನ ಕುಮಾರ್ ಅವರು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಯಾವುದೇ ಹುರುಳಿಲ್ಲ'.

'ಮೇಲಾಗಿ ಕೆಜೆಪಿ ಪಕ್ಷದಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂಬ ಸ್ಥಾನವೇ ಇಲ್ಲ ಎಂಬುದನ್ನೂ ಆಯೋಗ ಸ್ಪಷ್ಟಪಡಿಸಿದೆ. ಹೀಗಾಗಿ ಪಕ್ಷದ ಅಧ್ಯಕ್ಷರಾಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ' ಎಂದೂ ಗೋಖಲೆ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.

English summary
The Former Karnataka chief minister and Karnataka Janata Party (KJP) BS Yeddyurappa has expelled the founder and title holder of KJP Padmanabha Prasanna Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X