ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್- ಅರಬ್ ರಾಷ್ಟ್ರಗಳಂತೆ ಶಿಕ್ಷೆ ವಿಧಿಸಿ: ಕಾಂಗ್ರೆಸ್

By Srinath
|
Google Oneindia Kannada News

adopt-arab-ways-on-molestaion-cong-secretary-alka-lamba
ನವದೆಹಲಿ, ಜ.30: ದೆಹಲಿ ಗ್ಯಾಂಗ್ ರೇಪ್-ಹತ್ಯೆ ಬಳಿಕ ಅತ್ಯಾಚಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಹ ಹಿಂದೆ ಬಿದ್ದಿಲ್ಲ.

ಅದರಲ್ಲೂ ನ್ಯಾ. ಜೆಎಸ್ ವರ್ಮಾ ಅವರು ಅತ್ಯಾಚಾರಿಗೆ ಮರಣದಂಡನೆ ಮತ್ತು ಪುರುಷತ್ವಹರಣ ಬೇಡವೆಂದ ಬಳಿಕ ಹಾಗೂ ಫಿಸಿಯೋಥೆರಪಿಸ್ಟ್ ಮೇಲೆ ಅಕ್ಷರಶಃ ರಾಕ್ಷಸನಂತೆ ವಿಜೃಂಭಿಸಿದ್ದವನಿಗೆ 'ಬಾಲ-ಅತ್ಯಾಚಾರಿ' ಪಟ್ಟ ಕಟ್ಟಿದ ಮೇಲೆ ಈ ಆಕ್ರೋಶಗಳು ಮತ್ತಷ್ಟು ತೀವ್ರವಾಗುತ್ತಿವೆ.

ಕಾಂಗ್ರೆಸ್ ನಾಯಕಿ ಅಲಕಾ ಲಂಬಾ ಅವರು ಮೂಳೆ ಪರೀಕ್ಷೆ ಮಾಡಿಸಿಯಾದರೂ ಅವನಿಗೆ ಹೆಚ್ಚು ಶಿಕ್ಷೆ ಆಗುವಂತೆ ಮಾಡಿ. ಇಲ್ಲಾಂದ್ರೆ ಘೋರ ಅನ್ಯಾಯವಾಗಿಬಿಡುತ್ತದೆ' ಎಂದು ಆಗ್ರಹಿಸಿದ್ದಾರೆ.

'ಕೆಲವು ಸಲ ಪೋಷಕರು ಮಗುವಿಗೆ ಒಂದು ವರ್ಷದ ಶಿಕ್ಷಣ ತಪ್ಪುತ್ತದೆ ಎಂದು ಶಾಲೆಗೆ ದಾಖಲಿಸುವಾಗ ಒಂದು ವರ್ಷ ಹೆಚ್ಚು ಬರೆಸಿ, ದಾಖಲು ಮಾಡಿಸಿರುತ್ತಾರೆ. ಇವನದೂ ಅಂತಹುದೇ ಕೇಸ್ ಇರಬಹುದು. ಯಾವುದಕ್ಕೇ ಆಗಲಿ ಒಂದು ಸಲ ಬೋನ್ ಟೆಸ್ಟ್ ಮಾಡಿಸಿ, ಅವನ ವಯಸ್ಸನ್ನು ಖಚಿತಪಡಿಸಿಕೊಳ್ಳಿ' ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅಲಕಾ ಲಂಬಾ ಅವರು ಕೋರಿದ್ದಾರೆ.

ಇದೇ ವೇಳೆ, ನ್ಯಾ. ಜೆಎಸ್ ವರ್ಮಾ ಸಮಿತಿ ವರದಿ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ಅರಬ್ ರಾಷ್ಟ್ರಗಳಲ್ಲಿರುವಂತೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಇತರೆ ರಾಷ್ಟ್ರಗಳಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿರುವಂತೆ ನಮ್ಮ ದೇಶದಲ್ಲೂ ಮಾಡಿಬಿಡಿ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Adopt Arab ways on molestaion demands Congress secretary Alka Lamba. Expressing disappointment over Justice J S Verma Committee's recommendations, Lamba said, "Either we should follow the Arab countries where stringent punishment is in place for the accused or else, we should legalise prostitution the way its been done in other countries."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X