ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಜೆಪಿ ಪಕ್ಷದ ಹಂಗೂ ಬೇಡ, ಕೆಜೆಪಿ ಸೇರುತ್ತೇವೆ'

By Srinath
|
Google Oneindia Kannada News

12-mla-join-yeddyurappa-kjp-on-jan-31-shobha-karnadlaje
ಬೆಂಗಳೂರು, ಜ.30: ನಿನ್ನೆ ಇಡೀ ದಿನ ಸ್ಪೀಕರ್ ಬೋಪಯ್ಯ ಎದುರು ರಾಜೀನಾಮೆಗೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಹೈರಾಣವಾಗೆದ್ದ 12 ಶಾಸಕರು ಇಂದು ದಣಿವಾರಿಸಿಕೊಂಡು ನಾಳೆ ಗುರುವಾರ ಬಿಜೆಪಿ ಪಕ್ಷವನ್ನೂ ತೊರೆಯಲು ನಿರ್ಧರಿಸಿದ್ದಾರೆ.

ನಿನ್ನೆ ರಾತ್ರಿ ಮಾಜಿ ಶಾಸಕರಾದ ಸಿಎಂ ಉದಾಸಿ, ಶೋಭಾ ಕರಂದ್ಲಾಜೆ, ಬಿಪಿ ಹರೀಶ್, ನೆಹರೂ ಓಲೇಕಾರ್, ಹರತಾಳು ಹಾಲಪ್ಪ, ಚಿಕ್ಕನಗೌಡರ್, ಬಸವರಾಜ ಪಾಟೀಲ್ ಅಟ್ಟೂರು, ತಿಪ್ಪೇಸ್ವಾಮಿ, ಸುರೇಶ ಗೌಡ, ಎಂ ಚಂದ್ರಪ್ಪ, ಜಿ ಶಿವಣ್ಣ ಮತ್ತು ಸುರೇಶ್ ವಲ್ಯಾಪುರೆ ಅವರುಗಳು ನಿರೀಕ್ಷೆಯಂತೆ ಬಿಜೆಪಿಗೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ.

ಬಿಜೆಪಿಗೆ ವಿದಾಯ: ಈ ಸಂಬಂಧ ಇಂದು ಬುಧವಾರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜೆಪಿ ಅನಧಿಕೃತ ವಕ್ತಾರೆ ಶೋಭಾ ಕರಂದ್ಲಾಜೆ ಅವರು ಶಾಸಕರ ಹಿಂದೆ ಗುಪ್ತಚರರನ್ನು ಬಿಡಲಾಗಿದೆ. ಕುಮಾರಕೃಪಾ ಗೆಸ್ಟ್ ಹೌಸಿನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ಸಂಬಂಧ ಗುಪ್ತ ನಡೆಸಿದ್ದಾರೆ. ಆದರೆ ಅದೆಲ್ಲ ನಮ್ಮ ಮೇಲೆ ಪರಿಣಾಮ ಬೀರಿಲ್ಲ. ನಮ್ಮ ರಾಜೀನಾಮೆಗಳನ್ನು ಅಂಗೀಕರಿಸಿ, ಬಿಜೆಪಿಯಿಂದ ನಮಗೆ ಮುಕ್ತಿ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಾಜಿ ಸಚಿವ ಸಿಎಂ ಉದಾಸಿ ಅವರು 'ಕರ್ನಾಟಕ ಜನತಾ ಪಕ್ಷ ಸೇರುವ ಉದ್ದೇಶಕ್ಕಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ' ನಿನ್ನೆ ರಾಜೀನಾಮೆ ಅಂಗೀಕೃತವಾಗುತ್ತಿದ್ದಂತೆ ಸ್ಪಷ್ಟಪಡಿಸಿದ್ದರು.

ಉದಾಸಿ ಇನ್ನೂ ಏನು ಹೇಳಿದರು?:
'ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಗಡುವುಗಳನ್ನು ನೀಡಿದಾಗ ಬಿಜೆಪಿಯವರು ಪದೇ ಪದೇ ಗೇಲಿ ಮಾಡಿದ್ದರು. ಈಗ ನಾವಾಗಿಯೇ ಶಾಸಕ ಸ್ಥಾನವನ್ನು ತೊರೆದಿದ್ದೇವೆ. ರಾಜೀನಾಮೆ ನೀಡಿದ ಬಳಿಕ ಅದನ್ನು ಅಂಗೀಕರಿಸದಂತೆ ತಡೆಯಲು ಬಿಜೆಪಿಯವರೇ ಪ್ರಯತ್ನಿಸಿದರು'.

'ಯಡಿಯೂರಪ್ಪ ಅವರ ಬೆಂಬಲಿಗ ಶಾಸಕರ ಸಹಾಯದಿಂದಲೇ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹುದ್ದೇಗೇರಿದರು. ಆದರೆ, ಕೆಲವು ತಿಂಗಳುಗಳಿಂದ ಯಡಿಯೂರಪ್ಪ ಅವರ ಬೆಂಬಲಿಗರನ್ನು ಕಡೆಗಣಿಸಿದರು. ಬಿಜೆಪಿಯ ಮೂವರು ನಾಯಕರ ಚಿತಾವಣೆಗೆ ಮಣಿದ ಮುಖ್ಯಮಂತ್ರಿಯವರು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ'.

English summary
The 12 MLAs who tendered resignations yesterday (Jan 29) will bid adieu to BJP tomorrow (Jan 31) to join KJP supporting BS Yeddyurappa said BJP Ex Minister Shobha Mandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X