ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಚಿನ್ನದ ಖಜಾನೆಗಳು: ಭಾರತದಲ್ಲಿ ಎಷ್ಟು ಚಿನ್ನವಿದೆ?

By Srinath
|
Google Oneindia Kannada News

World Gold Council ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ಖಜಾನೆಗಳನ್ನು ಹೊಂದಿರುವ ರಾಷ್ಟ್ರಗಳತ್ತ ಒಂದು ಕಿರು ನೋಟ ಇಲ್ಲಿದೆ. 2012 ಡಿಸೆಂಬರ್ ವೇಳೆಗೆ ವಿಶ್ವದಲ್ಲಿ ಚಿನ್ನದ ಮೀಸಲು ಪ್ರಮಾಣ 31,491 ಟನ್ ಇತ್ತು.

ಅಂದಹಾಗೆ 2012ನೇ ಸಾಲಿನಲ್ಲಿ ಆಯಾ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕುಗಳು ಅಂದರೆ (ಭಾರತದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಾದರಿಯಲ್ಲಿ) 500 ಟನ್ ಚಿನ್ನ ಖರೀದಿಸಿಟ್ಟುಕೊಂಡಿವೆ. ಅದರ ಹಿಂದಿನ ವರ್ಷ 465 ಟನ್ ಖರೀದಿಸಿದ್ದವು.

ಬ್ರಿಟನ್ ನಲ್ಲಿ ಕೇವಲ 310 ಟನ್ ಚಿನ್ನವಿದ್ದು ಅದರ ಮೌಲ್ಯ 13.8 ಶತಕೋಟಿ ಡಾಲರ್ ಆಗಿದೆ. ಅಂದರೆ ಬ್ರಿಟನ್ 17ನೆಯ ಸ್ಥಾನದಲ್ಲಿದೆ. ಇದರಿಂದ ವಿಶ್ವದಲ್ಲಿ ಹೆಚ್ಚು ಚಿನ್ನದ ಖಜಾನೆ ಹೊಂದಿರುವ ಟಾಪ್ 10 ರಾಷ್ಟ್ರಗಳು ಯಾವುವು ಎಂಬುದನ್ನು ಗುರುತಿಸಲು ಇದೊಂದು ಅಳತೆಗೋಲು ಆಗುತ್ತದೆ.

ಕುತೂಹಲದ ಸಂಗತಿಯೆಂದರೆ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ವ್ಯಾಮೋಹ ಹೊಂದಿರುವ ಭಾರತ ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂದರೆ 187 ರಾಷ್ಟ್ರಗಳ ಚಿನ್ನದ ನಿಧಿಯನ್ನು (IMF) ಗಣನೆಗೆ ತೆಗೆದುಕೊಳ್ಳದಿದ್ದರೆ ಭಾರತ 10ನೆಯ ರಾಷ್ಟ್ರವಾಗಿ ಚಿನ್ನದ ಹೊಳಪನ್ನು ಪಡೆಯುತ್ತದೆ.

ಅಮೆರಿಕಕ್ಕೆ ಅಗ್ರ ತಾಂಬೂಲ

ಅಮೆರಿಕಕ್ಕೆ ಅಗ್ರ ತಾಂಬೂಲ

ಒಟ್ಟು ಚಿನ್ನದ ಸಂಗ್ರಹ: 8,133 ಟನ್.

ಮೌಲ್ಯ: 361.8 ಶತಕೋಟಿ ಡಾಲರ್.

ದ್ವಿತೀಯ ಸ್ಥಾನದಲ್ಲಿ ಜರ್ಮನಿ ಜಗಮಗ

ದ್ವಿತೀಯ ಸ್ಥಾನದಲ್ಲಿ ಜರ್ಮನಿ ಜಗಮಗ

ಒಟ್ಟು ಚಿನ್ನದ ಸಂಗ್ರಹ: 3,402 ಟನ್.

ಮೌಲ್ಯ: 151.3 ಶತಕೋಟಿ ಡಾಲರ್.

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)

ಮೂರನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 2,827.2 ಟನ್.

ಮೌಲ್ಯ: 125.7 ಶತಕೋಟಿ ಡಾಲರ್.

ಇಟಲಿಯ ಕರಾಮತ್ತು

ಇಟಲಿಯ ಕರಾಮತ್ತು

ನಾಲ್ಕನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 2,451.8 ಟನ್.

ಮೌಲ್ಯ: 109 ಶತಕೋಟಿ ಡಾಲರ್.

ಅರ್ಧ ಹಾದಿಯಲ್ಲಿ ಫ್ರಾನ್ಸ್

ಅರ್ಧ ಹಾದಿಯಲ್ಲಿ ಫ್ರಾನ್ಸ್

ಐದನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 2,435.4 ಟನ್.

ಮೌಲ್ಯ: 108.3 ಶತಕೋಟಿ ಡಾಲರ್.

ಚೀನಾ

ಚೀನಾ

ಆರನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 1,054.1 ಟನ್.

ಮೌಲ್ಯ: 46.9 ಶತಕೋಟಿ ಡಾಲರ್.

ಸ್ವಿಟ್ಸರ್ಲೆಂಡ್

ಸ್ವಿಟ್ಸರ್ಲೆಂಡ್

ಏಳನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 1,040.1 ಟನ್.

ಮೌಲ್ಯ: 46.3 ಶತಕೋಟಿ ಡಾಲರ್.

ರಷ್ಯಾ

ರಷ್ಯಾ

ಎಂಟನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 934.1 ಟನ್.

ಮೌಲ್ಯ: 34.9 ಶತಕೋಟಿ ಡಾಲರ್

ಜಪಾನ್

ಜಪಾನ್

ಒಂಬತ್ತನೆಯ ಸ್ಥಾನ

ಒಟ್ಟು ಚಿನ್ನದ ಸಂಗ್ರಹ: 765.2 ಟನ್.

ಮೌಲ್ಯ: 34 ಶತಕೋಟಿ ಡಾಲರ್

ನೆದರ್ ಲ್ಯಾಂಡ್ಸ್

ನೆದರ್ ಲ್ಯಾಂಡ್ಸ್

10ನೆಯ ಸ್ಥಾನ

ಒಟ್ಟು ಚಿನ್ನದ ಸಂಗ್ರಹ: 612.5 ಟನ್.

ಮೌಲ್ಯ: 27.2 ಶತಕೋಟಿ ಡಾಲರ್

ಭಾರತ

ಭಾರತ

11ನೆಯ ಸ್ಥಾನ:

ಒಟ್ಟು ಚಿನ್ನದ ಸಂಗ್ರಹ: 557.7 ಟನ್.

ಮೌಲ್ಯ: 24.76 ಶತಕೋಟಿ ಡಾಲರ್

English summary
Top 10 central banks gold holdings- World Gold Council estimation. Global gold reserves total 31,491 tonnes as of December 2012. The WGC estimates that central banks have purchased 500 tonnes of gold in 2012, up from 465 tonnes last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X