ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ ಮೇಲೆ ಬಿಎಸ್ಎಫ್ ಯೋಧನ ಅತ್ಯಾಚಾರ

By Srinath
|
Google Oneindia Kannada News

kolkata-bsf-personnel-manish-rajinder-molest-tv-journo
ಕೋಲ್ಕೊತಾ, ಜ.29: ಗಡಿ ಭದ್ರತಾ ಪಡೆಯ (BSF) ಯೋಧನೊಬ್ಬ ಪತ್ರಕರ್ತೆಯ ಮೇಲೆ ಅತ್ಯಾಚಾರವೆಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಜನದಟ್ಟಣೆಯ ಶ್ಯಾಂಬಜಾರ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿ ಯೋಧನನ್ನು ಮನೀಶ್ ರಾಜಿಂದರ್ ಎಂದು ಗುರುತಿಸಲಾಗಿದೆ ಎಂದು ಉತ್ತರ ಕೋಲ್ಕೊತ್ತಾದ ಉಪ ಪೊಲೀಸ್ ಆಯುಕ್ತ ಗೌರವ್ ಶರ್ಮಾ ತಿಳಿಸಿದ್ದಾರೆ ಎಂದು IBN LIVE ವರದಿ ಮಾಡಿದೆ.

ಬಾಧಿತ ಮಹಿಳಾ ಪತ್ರಕರ್ತೆಯು ನ್ಯೂಸ್ ಚಾನೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ಸದರಿ ಮಹಿಳೆಯು ತನ್ನ ಸಂಗಾತಿಯೊಂದಿಗೆ ರೆಸ್ಟೋರೆಂಟ್ ಒಳಕ್ಕೆ ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಸಮವಸ್ತ್ರ ಧರಿಸಿದ ಕೆಲವರು ರೆಸ್ಟೋರೆಂಟಿನಿಂದ ಹೊರಬರುತ್ತಿದ್ದರು. ಆಮೇಲೆ ತಿಳಿಯಿತು ಅವರು BSF ಯೋಧರು ಎಂದು. ಒಬ್ಬ ಯೋಧ ನಾನು ಒಳಹೋಗಲು ಯತ್ನಿಸಿದಾಗ ನನ್ನತ್ತ ಕಾಕದೃಷ್ಟಿ ಬೀರಿದ. ಮತ್ತೆ ನನ್ನ ಮೈಮುಟ್ಟಿದ. ನಿಜಕ್ಕೂ ನನಗೆ ಆಘಾತವಾಯಿತು. ಅವನು ಹೊರಹೋಗುತ್ತಿದ್ದಂತೆ ಅವನ ಬೆನ್ನುಹತ್ತಿ, ಹಿಡಿದುಬಿಟ್ಟೆ. ಪೊಲೀಸರು ಅಷ್ಟೊತ್ತಿಗೆ ನನಗೆ ನೆರವಾದರು. ಸ್ಥಳದಲ್ಲಿದ್ದ ಜನರೂ ನೆರವಾದರು' ಎಂದು ಬಾಧಿತ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಶ್ಯಾಂಪುಕೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸ್ಥಳೀಯ ಜನರು ಹೇಳುವಂತೆ ಅವನು ಮದ್ಯಪಾನ ಸೇವಿಸಿದ್ದ ಎಂದು ಆಕೆ ತಿಳಿಸಿದ್ದಾರೆ.

English summary
Kolkata BSF personnel Manish Rajinder molest tv journalist. A Border Security Force (BSF) trooper was arrested Monday night for allegedly molesting a woman journalist near the busy Shyambazar crossing, Deputy Commissioner of Police (North) Gaurav Sharma said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X