ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.29ರಂದು ನುಡಿ 5.0 ಹೊಸ ತಂತ್ರಾಂಶ ಬಿಡುಗಡೆ

By Prasad
|
Google Oneindia Kannada News

KDA to release new software Nudi 5.0 on 29th Jan
ಬೆಂಗಳೂರು, ಜ. 28 : ಸುಲಭವಾಗಿ ಯೂನಿಕೋಡ್‌ಗೆ ಮಾರ್ಪಡಿಸಬಲ್ಲಂಥ, ಮೊಬೈಲಿನಲ್ಲಿ ಸರಾಗವಾಗಿ ಓದುಬಲ್ಲಂಥ 11 ಹೊಸ ಫಾಂಟ್‌ಗಳಿರುವ ನುಡಿ 5.0 ಹೊಸ ಸಾಫ್ಟ್‌ವೇರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜ.29ರಂದು ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತಿದೆ.

ಕೆಲ ಅಂತರ್ಜಾಲ ತಾಣಗಳಲ್ಲಿ ಮತ್ತು ಮೊಬೈಲಿನಲ್ಲಿ ಕನ್ನಡ ಓದುವುದು ಇನ್ನೂ ಅನೇಕರಿಗೆ ಕಷ್ಟಕರವಾಗಿದೆ. ಕೆಲ ವೆಬ್ ಸೈಟುಗಳು ಓಬೀರಾಯನ ಕಾಲದ ಫಾಂಟ್‌ಗಳನ್ನೇ ಇನ್ನೂ ಬಳಸುತ್ತಿವೆ. ಫಾಂಟ್‌ಗಳು ಯೂನಿಕೋಡ್ ಸ್ಟಾಂಡರ್ಡ್ ಹೊಂದಿಲ್ಲದಿರುವುದರಿಂದ ಎಲ್ಲಾ ಪ್ಲಾಟ್‌ಫಾರಂ ಮತ್ತು ಎಲ್ಲಾ ಆಪರೇಟಿಂಗ್ ಸಿಸ್ಟಂನಲ್ಲಿ ಕನ್ನಡ ಓದುವುದು ಸಾಧ್ಯವಾಗುತ್ತಿಲ್ಲ.

ಈ ಕೊರತೆಯನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿರುವ ನುಡಿ 5.0 ತಂತ್ರಾಂಶ ನೀಗಿಸಲಿದೆ ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು. ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ವಿಧಾನಸೌಧದಲ್ಲಿ ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಹೊಸ ತಂತ್ರಾಂಶವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು.

ಈ ತಂತ್ರಾಂಶವನ್ನು ಬಳಸಿಕೊಂಡು ಹಳೆ ಫಾಂಟ್‌ಗಳನ್ನು ಯೂನಿಕೋಡ್‌ಗೆ ಪರಿವರ್ತಿಸಬಹುದು. ಇದರಲ್ಲಿ ಇನ್ನೂ ಅನೇಕ ಹೊಸ ಫೀಚರ್‌ಗಳಿರುತ್ತವೆ. ಕನ್ನಡವನ್ನು ಸರಕಾರಿ ಕೆಲಸಗಳಲ್ಲಿ ಅಳವಡಿಸುವ ಮುಖ್ಯ ಉದ್ದೇಶದಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚಂದ್ರು ತಿಳಿಸಿದರು. ಬಿಡುಗಡೆಯಾದ ನಂತರ ಈ ಹೊಸ ತಂತ್ರಾಂಶವನ್ನು ಕರ್ನಾಟಕ ಸರಕಾರದ ಅಧಿಕೃತ ತಾಣದಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

English summary
Kannada Development Authority will be releasing new version of Nudi software (Nudi 5.0) on 29th January, Tuesday in Vidhana Soudha. He says the new software is developed to suit unicode standards and can be easily read on mobiles and internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X