ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಆದಿಚುಂಚನಗಿರಿಯಲ್ಲಿ ಸಂತ ಸಂಗಮ

By Mahesh
|
Google Oneindia Kannada News

ಬೆಂಗಳೂರು, ಜ.28: ಕಾಲಭೈರವನ ಆರಾಧಕರು ಕೋಟ್ಯಾಂತರ ಭಕ್ತರ ಆರಾಧ್ಯ ದೈವವಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ನಾಥ ಸಂಸ್ಕøತಿಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಕ್ಷೇತ್ರ ಅದಿಚುಂಚನಗಿರಿಯಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಸಾಧು ಸಂತರು, ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಆದಿಚುಂಚನಗಿರಿಯ ನೂತನ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಾಥ ಪಂಥದ ಧಾರ್ಮಿಕ ವಿಧಿವಿಧಾನಗಳ ಮೂಲಕ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಾರಾಧನೆಯನ್ನು ನೆರವೇರಿಸಲಾಯಿತು.

ಬಾಲಗಂಗಾಧರನಾಥಶ್ರೀಗಳು ಕಾಲಭೈರವೇಶ್ವರನಲ್ಲಿ ಲೀನವಾದ 16ನೇ ದಿನವಾದ ಇಂದು(ಸೋಮವಾರ) ನಡೆದ ಮಹಾ ಪುಣ್ಯಸ್ಮರಣೆ ಕಾರ್ಯಕ್ರಮ ನಿಜಕ್ಕೂ ಸಂತ ಸಂಗಮವಾಗಿತ್ತು. ಪುಣ್ಯಸರಣೆ ಸರ್ವ ಧರ್ಮೀಯ ಗುರುಗಳ ಸಂಗಮವಾಗಿದ್ದು, ಸ್ವಾಮೀಜಿ ಅವರ ಜ್ಯಾತ್ಯತೀತ ಭಾವನೆಯನ್ನು ಪ್ರತಿಬಿಂಬಿಸುವಂತಿತ್ತು.

ಪ್ರಖ್ಯಾತ ಯೋಗಗುರು ಬಾಬಾ ರಾಮ್ ದೇವ್, ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ, ಸಿರಿಗೆರೆ ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಪೇಜಾವರಮಠದ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದಂಗಳವರು, ಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಜೋಧಪುರದ ಶ್ರೀ ಆದಿತ್ಯನಾಥ್ ಮಹಾರಾಜ್ ಜೀ, ಶ್ರೀ ಯೋಗಿ ಶಾಂತನಾಥ ಮಹಾರಾಜ್, ಅಹಮದಾಬಾದ್‍ನ ಸಾಧುರಾಮ್ ಸುಖದಾಸ್ ಶ್ರೀ ಉಜ್ಜಯನಿ ಶ್ರೀಗಳು, ಮಹಾಂತಶಿವಯೋಗಿ ಸ್ವಾಮೀಜಿ,

ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಗಳು, ಉತ್ತರ ಭಾರತದ ಶ್ರೀ ಯೋಗಿಸಿದ್ಧಿನಾಥ ಸ್ವಾಮೀಜಿ, ಮಹಾನ್ ಗುಲಾಬ್‍ನಾಥ್ ಮಹಾರಾಜ್, ನರಹರಿನಾಥ್ ಮಹಾರಾಜ್, ಮುಂಬೈನ ಶ್ರೀ ವಿಶ್ವೇಶನಾಥ ಜೀ , ರಾಜ್ ಕೋಟ್ ಸ್ವಾಮಿ ಪರಮಾತ್ಮನಂದ ಮಹಾರಾಜ್, ಅವೈಧ್ಯನಾಥ ಶ್ರೀಗಳು, ಮೂಡಬಿದರೆಯ ಜೈನ ಮಠದ ಭಟ್ಟಾರಕಸ್ವಾಮೀಜಿ, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಕಾಗಿನೆಯ ನಿರಂಜನಾನಂದಪುರು ಸ್ವಾಮೀಜಿ, ತಮಿಳುನಾಡಿನ ಕೊಯಲೂರು ಮಠದ ಶ್ರೀ ಧವಳೇಂದ್ರಪುರಿ ಸ್ವಾಮೀಜಿ, ಬೆಳಗಾವಿಯ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ, ಬೀದರ್ ನ ಶ್ರೀ ಶಿವಕುಮಾರಸ್ವಾಮೀಜಿ, ಫಾದರ್ ನರೋನ, ನಾಗನೂರು ಮಠದ ಸಿದ್ಧರಾಮಸ್ವಾಮೀಜಿ ಸೇರಿದಂತೆ ನಾಡು ಹಾಗೂ ಹೊರರಾಜ್ಯಗಳಿಂದ ಆಗಮಿಸಿದ ಇನ್ನೂರೈವತ್ತಕ್ಕೂ ಹೆಚ್ಚು ಸಾಧುಸಂತರು ಸಂತಸಂಗಮದಲ್ಲಿ ಸಮಾವೇಶಗೊಂಡಿದರು.

ಕ್ಷೇತ್ರದ ಅಧಿದೇವತೆ ಶ್ರೀ ಕಾಲ ಭೈರವನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಬಾಲಗಂಗಾಧರ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿದರು. ಧಾರ್ಮಿಕ ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಲಾಯಿತು.

ಚಿತ್ರಗಳು: ಲೇಖನ: ಮೇಲುಕೋಟೆ ವಿಎನ್ ಗೌಡ

ಬಾಲಗಂಗಾಧರನಾಥ ಸಂಸ್ಮರಣೆ, ಸಂತ ಸಂಗಮ

ಬಾಲಗಂಗಾಧರನಾಥ ಸಂಸ್ಮರಣೆ, ಸಂತ ಸಂಗಮ

ಶ್ರೀ ಬಾಲಗಂಗಾಧರನಾಥಸ್ವಾಮೀಜಿಯವರ ಎತ್ತರೆತ್ತರದ ಕಟೌಟ್ ಗಳು, ಫ್ಲೆಕ್ಸ್, ಬಂಟಿಂಗ್ ಬ್ಯಾನರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ದಾರಿಯುದ್ದಕ್ಕೂ ಶ್ರೀಗಳಿಗೆ ನಮನ ಸಲ್ಲಿಸುವ ಕಟ್‍ಔಟ್‍ಗಳನ್ನು ಭಕ್ತರು ಹಾಕಿದ್ದರು. ಜತೆಗೆ ಮಂಗಳವಾದ್ಯ, ವೀರಗಾಸೆ, ಡೊಳ್ಳುಕುಣಿತ ವಿವಿಧ ಜಾನಪದ ಕಲಾತಂಡಗಳು ಮೇಳೈಸಿದ್ದವು.

ಸಂತ ಸಂಗಮ

ಸಂತ ಸಂಗಮ

ಬಾಲಗಂಗಾಧರನಾಥ ಶ್ರೀಗಳ ಮಹಾಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಕಾಲಭೈರವೇಶ್ವರ, ಗಂಗಾಧರನಾಥ ಸೇರಿದಂತೆ ಮಠದ ಆವರಣದಲ್ಲಿರುವ ಸಮಸ್ತ ದೈವಗಳಿಗೂ ಅಭಿಷೇಕಾಧಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

Array

Array

ಸಮಾಧಿಯ ಮಧ್ಯಭಾಗದ ನಾಲ್ಕೂ ಕಡೆ ಸ್ವಾಮೀಜಿಯ ಫೋಟೋ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇವಾಲಯಕ್ಕೆ ಅಭಿಮುಖವಾಗಿರುವ ಆ ಪ್ರತಿಮೆ ಶ್ರೀ ಕಾಲಭೈರವನ ಪ್ರಾರ್ಥನೆಯಲ್ಲಿ ತೊಡಗಿದ ಭಾವನೆ ಮೂಡುವಂತಿತ್ತು.

ಸಂತ ಸಂಗಮ

ಸಂತ ಸಂಗಮ

ಆಗಮಿಸುವ ಅಪಾರ ಭಕ್ತರಿಗೆ ಸಮಾಧಿ ದರ್ಶನಕ್ಕೆ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಭಕ್ತರಿಗೂ ಉಚಿತವಾಗಿ ಸ್ವಾಮೀಜಿ ಫೋಟೋ ವಿತರಿಸಲಾಯಿತು. ಬಾಲಗಂಗಾಧರನಾಥ ಶ್ರೀಗಳ ಪೂರ್ವಾಶ್ರಮದಿಂದ ಇಲ್ಲಿಯವರೆಗೂ ನಡೆದು ಬಂದ ದಾರಿಯ ಬಗ್ಗೆ ಫೋಟೋ ಪ್ರದರ್ಶನ ಹಾಗೂ ಲೇಸರ್ ಶೋ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Array

Array

ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಇಡೀ ಬದುಕನ್ನು ಪ್ರತಿಬಿಂಬಿಸುವ ಈ ಪ್ರದರ್ಶನ ಕಣ್ಮನ ಸೆಳೆದಿತ್ತು. ಶ್ರೀಗಳ ಪಟ್ಟಾಭಿಷೇಕವಾದ 1974 ರಿಂದ ಅವರ ಅಂತ್ಯದವರೆಗಿನ ಬದುಕು ಸೇವಾ ಕೈಂಕರ್ಯಗಳನ್ನು ಛಾಯಾಚಿತ್ರಗಳ ಮೂಲಕ ಅನಾವರಣಗೊಳಿಸಲಾಗಿತ್ತು.

ರವಿಶಂಕರ್ ಗುರೂಜಿ ಉವಾಚ

ರವಿಶಂಕರ್ ಗುರೂಜಿ ಉವಾಚ

ಭ್ರಷ್ಟಾಚಾರ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಮಾಜದ ಆಶಾಕಿರಣವಾಗಿದ್ದ ಶ್ರೀಗಳು ಜ್ಞಾನ ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಿದ್ದರು.

ಸನ್ಯಾಸಿಗಳನ್ನು ಸೃಷ್ಟಿಸಿ ಧಾರ್ಮಿಕ ಸೇವೆಗೆ ಸಜ್ಜುಗೊಳಿಸಿದ್ದ ಅವರ ಸೇವೆ ಅಪಾರವಾದದ್ದು ಎಂದು ಬಣ್ಣಿಸಿದರು. ಶ್ರೀಗಳ ಈ ಅನುಪಮ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಕ್ತರ ದುಃಖ ತೊಡೆದುಹಾಕಿ ಸಮಾಜದ ಏಳಿಗೆಗೆ ಕಾರಣಕರ್ತರಾದರು. ಇವರಂತೆಯೇ ಮುಂದೆಯೂ ಶ್ರೀಕ್ಷೇತ್ರದಲ್ಲಿ ಧರ್ಮಕಾರ್ಯಗಳು ಮುಂದುವರೆಯಲಿ ಎಂದು ರವಿಶಂಕರ್ ಗುರೂಜಿ ಹೇಳಿದರು.

ಅವೈದ್ಯನಾಥ ಸ್ವಾಮೀಜಿ ಉವಾಚ

ಅವೈದ್ಯನಾಥ ಸ್ವಾಮೀಜಿ ಉವಾಚ

ಶ್ರೀ ಅವೈದ್ಯನಾಥ ಸ್ವಾಮೀಜಿ ಮಾತನಾಡಿ, ನಾಥ ಪರಂಪರೆಯಲ್ಲಿ ಶಿವಸ್ವರೂಪಿಯಾಗಿದ್ದ ಶ್ರೀಗಳು ಸನಾತನ ಧರ್ಮವನ್ನು ರಕ್ಷಿಸಿದ್ದರು ಎಂದು ಗುಣಗಾನ ಮಾಡಿದರು. ನಾಥ ಪರಂಪರೆಯನ್ನು ಎತ್ತಿ ಹಿಡಿದ ಅವರು ಇಡೀ ದೇಶದಲ್ಲೆ ಶೈಕ್ಷಣಿಕ ಕ್ರಾಂತಿ ಮಾಡಿ ಸಮಾಜವನ್ನು ಮುನ್ನಡೆಸಿದರು ಎಂದರು.

ಯೋಗ ಗುರು ಬಾಬಾ ರಾಮ್ ದೇವ್

ಯೋಗ ಗುರು ಬಾಬಾ ರಾಮ್ ದೇವ್

ಸ್ವಾಮೀಜಿಗಳು ಕರ್ನಾಟಕದ ಆದಿಚುಂಚನಗಿರಿಗೆ ಮಾತ್ರ ಸೀಮಿತವಾಗದೆ ದೇಶದ ಮಹಾನ್ ಮಾನವತವಾದಿಯಾಗಿ ಈ ಭೂಮಿಗೆ ಪ್ರತ್ಯಕ್ಷ ಋಷಿಯಂತಿದ್ದರು.

ಜನರನ್ನೇ ದೇವರೆಂದು ಭಾವಿಸಿ ತನ್ನ ಜೀವನವನ್ನೇ ಜನಸೇವೆಗೆ ಮುಡುಪಾಗಿಟ್ಟ ಆ ಪುಣ್ಯಚೇತನಕ್ಕೆ ಶತಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಇಡೀ ಭಾರತದ ಸಂತಕುಲಕ್ಕೆ ಗೌರವ ತಂದವರಾಗಿದ್ದರು. ಸಂತ ಮಹಾಪುರುಷರ ಜನ್ಮದಿಂದ ಇಡೀ ಭೂಮಿಯೇ ಪಾವನ.

ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ದುಡಿದು ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿದ್ದರು. ವಿಕಲಚೇತನರ ಬಾಳಿನ ಬೆಳಕಾಗಿ ದೀನದಲಿತರಿಗೆ ಆಶ್ರಯದಾತರಾಗಿ ಸೇವೆ ಸಲ್ಲಿಸಿದ ಮಹಾಪುರುಷ ಎಂದರು.

Array

Array

ಉತ್ತರಭಾರತದ ಪರಮಾತ್ಮಾನಂದ ಮಹಾರಾಜ್ ಮಾತನಾಡಿ, ಜನಮಾನಸದಲ್ಲಿ ಬೆರೆತಿರುವ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಲ್ಪನೆಗೂ ಮೀರಿದ ಸಾಧನೆಯನ್ನು ಶ್ರೀಗಳು ಮಾಡಿದ್ದಾರೆ ಎಂದು ಶ್ಲಾಘಿಸಿದರು.

Array

Array

ಡಾ.ಏಜಾಸುದ್ದೀನ್ ಮಾತನಾಡಿ, ಸೂಫಿ ಹಾಗೂ ನಾಥ ಪರಂಪರೆಯನ್ನು ಜೊತೆಜೊತೆಯಲ್ಲೇ ಕೊಂಡೊಯ್ದ ಮಹಾನ್‍ಸಂತ ಬಾಲಗಂಗಾಧರನಾಥ ಶ್ರೀಗಳು ಎಂದು ತಿಳಿಸಿದರು. ಲೌಕಿಕ ಜಗತ್ತಿನಿಂದ ಅಲೌಕಿಕ ಜಗತ್ತಿಗೆ ತೆರಳಿದ ಶ್ರೀಗಳು ಜ್ಞಾನದ ಜ್ಯೋತಿಯನ್ನು ವಿಶ್ವದೆಲ್ಲೆಡೆ ಪಸರಿಸಿದರು. ಸರ್ವರಿಗೂ ಒಳ್ಳೆಯದನ್ನೇ ಬಯಸಿದ ಮಹಾನ್ ಮಾನವತಾವಾದಿ ಎಂದರು.

ಚಾರುಕೀರ್ತಿ ಜೈನಭಂಡಾರಕ ಸ್ವಾಮೀಜಿ

ಚಾರುಕೀರ್ತಿ ಜೈನಭಂಡಾರಕ ಸ್ವಾಮೀಜಿ

ಮೂಡುಬಿದ್ರೆಯ ಜೈನ ಮಠದ ಶ್ರೀ ಚಾರುಕೀರ್ತಿ ಜೈನಭಂಡಾರಕ ಸ್ವಾಮೀಜಿ ಮಾತನಾಡಿ, ಚುಂಚನಗಿರಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೀಗಳ ಸಾಧನೆ ಮುಕುಟಪ್ರಾಯವಾದುದ್ದು, ಗ್ರಾಮೀಣ ಜನರಲ್ಲೂ ಸಂಸ್ಕಾರ ಬಿತ್ತಿ ಇಡೀ ನಾಡನ್ನೇ ಚಿನ್ನ ಮತ್ತು ಶ್ರೀಗಂಧದ ನಾಡನ್ನಾಗಿ ಪರಿವರ್ತಿಸಲು ಹೊರಟ ಮಹಾನ್ ಸಂತ. ನಮ್ಮಲ್ಲಿರುವ ಕರ್ಮವನ್ನು ಭಸ್ಮಮಾಡಿ ಪುಣ್ಯದ ಧಾರೆ ಎರೆದ ಶ್ರೀಗಳು ಧಾರ್ಮಿಕ ಸಂತರ ತಾರಲೋಕದಲ್ಲಿ ಬೆಳಗಿದ ಸೂರ್ಯನೆಂದು ನುಡಿನಮನ ಸಲ್ಲಿಸಿದರು.

ಫಾದರ್ ನರೋನಾ ಮಾತನಾಡಿ

ಫಾದರ್ ನರೋನಾ ಮಾತನಾಡಿ

ಫಾದರ್ ನರೋನಾ ಮಾತನಾಡಿ, ಜಾತ್ಯತೀತ ಮನೋಭಾವವನ್ನು ಶ್ರೀಗಳು ಹೊಂದಿದ್ದರು ಎಂಬುದಕ್ಕೆ ಪೂರಕವಾಗಿ ಇಂದು ನಡೆಯುತ್ತಿರುವ ಸಂತ ಸಂಗಮವೇ ಸಾಕ್ಷಿಯಾಗಿದೆ. ಇದರಲ್ಲಿ ಸರ್ವಧರ್ಮದ ಗುರುಗಳು ಪಾಲ್ಗೊಂಡು ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಾವೆಷ್ಟೇ ಗುಣಗಾನ ಮಾಡಿದರೂ ಅವರ ಭಕ್ತರು ಹರಿಸಿದ ಕಣ್ಣಿರಿನ ಶ್ರದ್ಧಾಂಜಲಿಗೆ ಸಮವಲ್ಲ ಎಂದರು.

Array

Array

ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ದೈಹಿಕವಾಗಿ ನಮ್ಮೊಡನೆ ಇಲ್ಲದಿರಬಹುದು. ಆದರೆ, ಅಗಾಧವಾದ ಸೇವಾ ಕೈಂಕರ್ಯಗಳು ನಮ್ಮ ಮುಂದಿವೆ. ಶ್ರೀಗಳು ಪರೋಪಕಾರಕ್ಕಾಗಿಯೇ ಈ ಶರೀರವಿದೆ ಎಂದು ಭಾವಿಸಿದ್ದರು.

ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ಪೇಜಾವರಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದ ಬಾಲಗಂಗಾಧರನಾಥ ಶ್ರೀಗಳು, ಎಲ್ಲಾ ಮಠಾಧಿಪತಿಗಳಿಗೆ ಆದರ್ಶ ಗುರುವೆನಿಸಿದ್ದರು. ಸೂರ್ಯ ಬೆಳಕು ನೀಡಿ ಅಸ್ತಮಾನ ಹೊಂದಿದಾಗ, ಚಂದ್ರ ಉದಯಿಸಿ ಭೂಮಿಯನ್ನು ಬೆಳಗಿಸುವಂತೆ ಶ್ರೀಮಠದ ಉತ್ತರಾಧಿಕಾರಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಾಡನ್ನು ಬೆಳಗಲಿ ಎಂದು ಹಾರೈಸಿದರು.

ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಭಾರತದ ಎಲ್ಲ ಧಾರ್ಮಿಕ ನದಿಗಳು ಇಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ ಸಂಗಮವಾಗಿದೆ. ಶ್ರೀ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಹೊಂದಿದ್ದ ಗೌರವ ಎಂತಹುದು ಎಂಬುದು ಇದರಿಂದ ವೇದ್ಯವಾಗುತ್ತದೆ.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಶತಶತಮಾನಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ದಶಕಗಳಲ್ಲಿ ಮಾಡಿ ತೋರಿಸಿದ ಶ್ರೀಗಳ ಸಾಧನೆ ಅನುಪಮವಾದದ್ದು. ಇದೇ ರೀತಿ ನೂತನ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಶ್ರೀಕ್ಷೇತ್ರದ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕು ಎಂದು ತಿಳಿಸಿದರು. ನಮ್ಮ ಮತ್ತು ಶ್ರೀ ಬಾಲಗಂಗಾಧರ ನಾಥ ಶ್ರೀಗಳ ನಡುವೆ ಆತ್ಮೀಯ ಭಾವವಿತ್ತು. ತಾಯಿಯನ್ನು ಕಳೆದು ಕೊಂಡ ಮಗಳಿಗೆ ಆಗುವ ನೋವಿನಂತೆ ನಮಗೂ ನೋವುಂಟಾಗಿದೆ.

ಶ್ರೀಗಳ ಬದುಕಿನ ಚಿತ್ರಸಂಗಮ

ಶ್ರೀಗಳ ಬದುಕಿನ ಚಿತ್ರಸಂಗಮ

ಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಇಂದು ನಡೆದ ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳ ಪುಣ್ಯಾರಾಧನೆ ಸಂತ ಸಂಗಮ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಕ್ತರನ್ನು ಆಕರ್ಷಿಸಿದ್ದು, ಶ್ರೀಗಳ 39 ವರ್ಷದ ಸಾಧನೆ ಪ್ರತಿಬಿಂಬಿಸುವ ಚಿತ್ರಸಂಗಮ ಛಾಯಾಚಿತ್ರ ಪ್ರದರ್ಶನ.

ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಇಡೀ ಬದುಕನ್ನು ಪ್ರತಿಬಿಂಬಿಸುವ ಈ ಪ್ರದರ್ಶನ ಕಣ್ಮನ ಸೆಳೆದಿತ್ತು. ಶ್ರೀಗಳ ಪಟ್ಟಾಭಿಷೇಕವಾದ 1974 ರಿಂದ ಅವರ ಅಂತ್ಯದವರೆಗಿನ ಬದುಕು ಸೇವಾ ಕೈಂಕರ್ಯಗಳನ್ನು ಛಾಯಾಚಿತ್ರಗಳ ಮೂಲಕ ಅನಾವರಣಗೊಳಿಸಲಾಗಿತ್ತು.

ಶ್ರೀಗಳ ಬದುಕಿನ ಚಿತ್ರಸಂಗಮ

ಶ್ರೀಗಳ ಬದುಕಿನ ಚಿತ್ರಸಂಗಮ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಶ್ರೀಗಳನ್ನು ಭೇಟಿ ಮಾಡಿದ್ದು ಸೇರಿದಂತೆ ವಿವಿಧ ಗಣ್ಯಾತಿಗಣ್ಯರ ಭೇಟಿ ಶ್ರೀಗಳ ಧಾರ್ಮಿಕ ಸೇವೆ, ಸಾಮಾಜಿಕ ಕಳಕಳಿ, ಶೈಕ್ಷಣಿಕ ಕಾಳಜಿ, ಸಮಾಜದ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ಕುರಿತು ಸಂಗ್ರಹಿಸಲಾದ ಛಾಯಾಚಿತ್ರಗಳು ಚಿತ್ರಸಂಗಮದಲ್ಲಿ ಮೇಳೈಸಿದ್ದವು. ಈ ಚಿತ್ರಸಂಗಮದ ಮೂಲಕ ಅವರ ಬದುಕು ಅನ್ಯರಿಗೆ ಆದರ್ಶಪ್ರಾಯವಾಗಿತ್ತು. ಮತ್ತೆ ಮತ್ತೆ ಶ್ರೀಗಳ ನೆನಪು ಮರುಕಳಿಸುವಂತಿತ್ತು

English summary
72nd Mathadhipathi of the Adichunchanagiri math Nirmalanandanatha Swamiji, successor to Balagangadharanatha Swamiji led 'Santha Samagama' program launched. BGS Memorial program organized in Adimutt, Mandya on Jan 28 and 29. Here is Pics and reports By MVN Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X