ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್: ಬಾಬಾ ರಾಮದೇವ್ ಆಶ್ರಮದ ವೈದ್ಯನ ಸೆರೆ

By Srinath
|
Google Oneindia Kannada News

baba-ramdev-pantanjali-doctor-held-molestation-charge
ನೋಯ್ಡಾ (ಉತ್ತರಪ್ರದೇಶ), ಜ. 27: ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಆಯುರ್ವೇದ ವೈದ್ಯರೊಬ್ಬರನ್ನು ಉತ್ತರಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಾಧಿತ ಮಹಿಳೆ ಮಾಧ್ಯಮವೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆರೋಪಿ ವೈದ್ಯ, ಬಾಬಾ ರಾಮದೇವ್ ಅವರ ಪತಂಜಲಿ ಆಶ್ರಮದಲ್ಲಿ ವೈದ್ಯರಾಗಿದ್ದಾರೆ ಎನ್ನಲಾಗಿದೆ.

ಬಾಧಿತ ಮಹಿಳೆ ಚಿಕಿತ್ಸೆಗೆಂದು ಆಯುರ್ವೇದ ಶಾಲೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ನಿಗದಿತ ವೈದ್ಯರು ಇಲ್ಲದಿದ್ದಾಗ ಕರ್ತವ್ಯದಲ್ಲಿದ್ದ ಆರೋಪಿ ವೈದ್ಯನ ಬಳಿ ಚಿಕಿತ್ಸೆ ಪಡೆಯಲು ಮಹಿಳೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅಶೋಕ್ ಭಡೋರಿಯಾ (25) ಎಂಬ ಸದರಿ ವೈದ್ಯ ಮಹಾಶಯ ಈ ಕುಕೃತ್ಯವೆಸಗಿದ್ದಾನೆ.

ಪತಂಜಲಿ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದು, ಆರೋಪಿ ವೈದ್ಯ ತಮ್ಮ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಎಂಬುದನ್ನು ನಿರಾಕರಿಸಿದ್ದಾರೆ.

English summary
Baba Ramdev's Pantanjali doctor identified as Ashok Bhadoria (25) held on molestation charge. A doctor at Ramdev's Pantanjali Ayurvedic clinic here allegedly molested a woman. According to Noida police, the victim, a media professional, lodged an FIR against the doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X