ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರಕ್ಕೆ ಹೋದ ಜೀವ ಬಂದಂತಾಗಿದೆ

By Mahesh
|
Google Oneindia Kannada News

ಬೆಂಗಳೂರು, ಜ.25: ಜಗದೀಶ್ ಶೆಟ್ಟರ್ ಅವರ ಸರ್ಕಾರಕ್ಕೆ ಹೋದ ಜೀವ ಮತ್ತೆ ಬಂದಂತಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರೊಟ್ಟಿಗೆ ಮಹತ್ವದ ಮಾತುಕತೆ ನಡೆಸಿದ ಸಿಎಂ ಶೆಟ್ಟರ್ ಸಮಾಧಾನಚಿತ್ತರಾಗಿ ರಾಜಭವನದಿಂದ ಹೊರಬಂದಿದ್ದಾರೆ.

ಮಧ್ಯಾಹ್ನದ ವೇಳೆ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಗಂಡಾಂತರ ಆರಂಭದ ಸೂಚನೆ ಬಂದಿತ್ತು. ಆದರೆ, ರಾಜಭವನದಿಂದ ಈಗಷ್ಟೇ (ಸಮಯ 3.10) ಹೊರ ಬಂದ ಜಗದೀಶ್ ಶೆಟ್ಟರ್ ಅವರು ಮಾತನಾಡುತ್ತಾ ರಾಜ್ಯಪಾಲರ ಜೊತೆ ನಡೆದ ಮಾತುಕತೆ ವಿವರಗಳನ್ನು ಹೇಳಿದರು.

Karnataka Guv didn't ask to prove majority : Jagadish Shettar

ಮೊದಲಿಗೆ ಅಧಿವೇಶನ ಸಂಬಂಧ ಮಾತುಕತೆ ಆರಂಭವಾಯಿತು. ಫೆ.4 ರಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವಂತೆ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಹಂಸರಾಜ್ ಭಾರದ್ವಾಜ್ ಅವರು ಭಾಷಣ ಮಾಡಲು ಒಪ್ಪಿಗೆ ಸೂಚಿಸಿದರು.

ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಸ್ಥೂಲವಾಗಿ ಮನವರಿಕೆ ಮಾಡಿಕೊಡಲಾಯಿತು. 13 ಜನ ಶಾಸಕರು ರಾಜೀನಾಮೆ ಪತ್ರ ನೀಡಲು ಬಂದಿದ್ದು, ಸ್ಪೀಕರ್ ಇಲ್ಲದಿರುವುದನ್ನು ಕಂಡು ರಾಜಭವನಕ್ಕೆ ತೆರಳಿದ್ದು ಎಲ್ಲವನ್ನು ಮತ್ತೊಮ್ಮೆ ಭಾರದ್ವಾಜ್ ಅವರಿಗೆ ವಿಷದಪಡಿಸಲಾಯಿತು.

ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. 13 ಶಾಸಕರ ರಾಜೀನಾಮೆ ಅಂಗೀಕಾರಗೊಂಡರೂ ಸರ್ಕಾರಕ್ಕೆ ತೊಂದರೆಯಿಲ್ಲ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಳಲಾಗಿದೆ ಎಂದು ಜಗದೀಶ್ ಶೆಟ್ಟರ್ ಅವರು ರಾಜಭವನದಿಂದ ಹೊರ ಬಂದ ತಕ್ಷಣ ಸುದ್ದಿಗಾರರಿಗೆ ತಿಳಿಸಿದರು.

ಅಗತ್ಯ ಬಿದ್ದರೆ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಹುಮತ ಸಾಬೀತುಪಡಿಸಲು ಸೂಚನೆ ನೀಡುತ್ತೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರೇ ಹೇಳಿದ್ದರು. ಈ ಬಗ್ಗೆ ಏನಾದರೂ ಚರ್ಚೆ ನಡೆಯಿತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್, 'ಬಹುಮತ ಸಾಬೀತು ಪಡಿಸಲು ನನಗೆ ರಾಜ್ಯಪಾಲರು ಸೂಚಿಸಿಲ್ಲ. ಸರ್ಕಾರಕ್ಕೆ ಬಹುಮತ ಇರುವುದು ಅವರಿಗೆ ಮನವರಿಕೆಯಾಗಿದೆ' ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಶುಕ್ರವಾರ(ಜ.25) ಬೆಳಗ್ಗೆ ರಾಜ್ಯಪಾಲರು ಮಾತನಾಡುತ್ತಾ, 'ರಾಜೀನಾಮೆ ಪತ್ರ ಕೈಲಿ ಹಿಡಿದುಕೊಂಡು 13 ಶಾಸಕರು ನನ್ನನ್ನು ಭೇಟಿ ಮಾಡಿದ್ದರು. ರಾಜಕೀಯ ಪರಿಸ್ಥಿತಿ ಬಗ್ಗೆ ಸೂಚಿಸಿದ್ದರು. ಇನ್ನಷ್ಟು ಶಾಸಕರ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ, ಶೆಟ್ಟರ್ ಸರ್ಕಾರ ಬಹುಮತ ಸಾಬೀತು ಪಡಿಸಲು ಸೂಚಿಸಲು ನಿರ್ಧರಿಸಿದ್ದೇನೆ' ಎಂದಿದ್ದರು.

ಈ ಬಗ್ಗೆ ಶೆಟ್ಟರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸೂಚನೆ ನೀಡುತ್ತೇನೆ. ಫೆ.4 ರಂದು ಬಹುಮತ ಸಾಬೀತಿಗೆ ಸೂಚನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿತ್ತು.

ಇದೇ ಸಂದರ್ಭದಲ್ಲಿ ಸ್ಪೀಕರ್ ಬೋಪಯ್ಯ ಅವರ ನಾಪತ್ತೆ ಬಗ್ಗೆ ನಾನು ಏನ್ನನ್ನೂ ಹೇಳಲಾರೆ. ಸ್ಪೀಕರ್ ಅವರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ರಾಜ್ಯಪಾಲರು ಹೇಳಿದ್ದರು.

English summary
Karnataka Governor HR Bhardwaj agreed to attend Joint session of to be held on Feb.4. We did dicussed about current political situation in Karnataka. Governor didn't ask to prove majority as BJP government has majority even after losing 13 MLAs said CM Jagadish Shettar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X