ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ

By Mahesh
|
Google Oneindia Kannada News

David Headley sentenced to 35 Years
ಶಿಕಾಗೋ, ಜ.25: 2008ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿಂದತೆ ಪ್ರಮುಖ ಆರೋಪಿ ಡೇವಿಡ್ ಹೆಡ್ಲಿಗೆ ಶಿಕಾಗೋ ನ್ಯಾಯಾಲಯ ಗುರುವಾರ(ಜ.24) 35 ವರ್ಷಗಳ ಜೈಲುಶಿಕ್ಷೆ ಘೋಷಿಸಿದೆ.

ನಾನೀಗ ಸಂಪೂರ್ಣ ಬದಲಾಗಿದ್ದೇನೆ. ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದು ನಿಜ ಎಂದು ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್‌ ಕೋಲ್ಮನ್ ಹೆಡ್ಲಿ ತಪ್ಪೊಪ್ಪಿಗೆ ನೀಡಿದ್ದರು. ಆದರೆ, ಹೆಡ್ಲಿ ಹೇಳಿಕೆ ವಿಶ್ವಾಸಕ್ಕೆ ಅರ್ಹವಲ್ಲ ಎಂದು ಪರಿಗಣಿಸಿದ ಶಿಕಾಗೋ ಫೆಡರಲ್ ನ್ಯಾ. ಹ್ಯಾರಿ ಲೆಯಿನ್‌ವೆಬರ್ ಅವರು ಮೇಲ್ಕಂಡ ಶಿಕ್ಷೆ ಪ್ರಕಟಿಸಿದರು.

ಈತ ಅಪರಾಧ ಎಸಗಿದ್ದಾನೆ, ಉಗ್ರರಿಗೆ ಸಹಾಯ ಮಾಡಿದ್ದಾನೆ, ಆತ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆ. ಈತ ಭಯೋತ್ಪಾದಕ ಎಂಬುದರಲ್ಲಿ ಸಂಶಯವಿಲ್ಲ ಎಂದು ನ್ಯಾ. ಹ್ಯಾರಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಆದರೆ, ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆಯಿಂದ ಹೆಡ್ಲಿ ಪಾರಾಗಿದ್ದಾರೆ.

ಹೆಡ್ಲಿಗೆ 12 ಅಪರಾಧಗಳ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಲಷ್ಕರ್ ಎ ತೋಯ್ಬಾಗೆ ಸಹಾಯ ಮಾಡಿದ ಆರೋಪವೂ ಸೇರಿದೆ. ಇದರೊಂದಿಗೆ ಸೇರಿ ಮುಂಬೈ ಮೇಲೆ ದಾಳಿ ನಡೆಸಿದ್ದ ಎಂಬ ಅಪರಾಧವೂ ಸೇರಿದೆ.

ಮುಂಬೈ ದಾಳಿ ಸಂಚು ರೂಪಿಸಲು ವ್ಯಾಪಾರಿ ವೇಷದಲ್ಲಿ ಹೆಡ್ಲಿ 5 ಬಾರಿ ಭಾರತಕ್ಕೆ ಬಂದಿದ್ದ. ಈತ ಉದ್ಯಮಿಯ ವೇಷ ಹಾಕಿಕೊಂಡು ದೇಶದೆಲ್ಲೆಡೆ ಸುತ್ತಾಡಿದ್ದ. ಇದನ್ನು ಆಧಾರವಾಗಿಟ್ಟುಕೊಂಡೇ ಉಗ್ರರು 2008ರ ನವೆಂಬರ್ 26 ರಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಇದರಲ್ಲಿ 166 ಮಂದಿ ಸಾವನ್ನಪ್ಪಿದ್ದರು. ಸೆರೆ ಹಿಡಿದಿದ್ದ ಕಸಬ್‌ನನ್ನು ಕಳೆದ ವರ್ಷ ನೇಣಿಗೇರಿಸಲಾಗಿತ್ತು.

2009ರಲ್ಲಿ ಹೆಡ್ಲಿ ಮತ್ತು ರಾಣಾನನ್ನು ಅಮೆರಿಕ ಪೊಲೀಸರು ಬಂಧಿಸಿದ್ದರು. ಇವರಿಬ್ಬರ ಮೇಲೆ ಮುಂಬೈ ದಾಳಿ, ಡೆನ್ಮಾರ್ಕ್‌ನ ಕಾರ್ಟೂನಿಸ್ಟ್ ಮೇಲಿನ ದಾಳಿ ಆರೋಪದ ಮೇಲೆ ಬಂಧಿಸಲಾಗಿತ್ತು. ಇವರಿಬ್ಬರಲ್ಲಿ ಹೆಡ್ಲಿ ತಪ್ಪೊಪ್ಪಿಕೊಂಡ. ಶಿಕ್ಷೆ ಕಡಿಮೆಗೊಳಿಸಿದಲ್ಲಿ ಎಲ್ಲಾ ವಿವರ ನೀಡುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಭಾರತಕ್ಕೆ ಹಸ್ತಾಂತರ ಮಾಡಬಾರದು ಎಂಬ ಷರತ್ತನ್ನೂ ವಿಧಿಸಿದ್ದ.

English summary
Pakistani-American LeT terrorist David Headley was on Thursday(Jan.24) sentenced to 35 years in jail by a US court for his 'unquestionable' role in the massacre of 166 people in the 2008 Mumbai attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X