ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಧೋನಿ, ಶಾರುಖ್

By Mahesh
|
Google Oneindia Kannada News

Forbes India 100 Celebrity
ನವದೆಹಲಿ, ಜ.25: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದೇಶದ ಅತ್ಯಂತ ಶ್ರೀಮಂತ ಕ್ರೀಡಾಪಟುವಾಗಿದ್ದಾರೆ. ಫೋರ್ಬ್ಸ್ ಇಂಡಿಯಾ ಮ್ಯಾಗಝಿನ್ ನಡೆಸಿದ ಸಮೀಕ್ಷೆಯ ಪ್ರಕಾರ, ಧೋನಿ ಅಕ್ಟೋಬರ್ 2011 ಹಾಗೂ ಸೆಪ್ಟಂಬರ್ 2012ರ ನಡುವೆ 135.16 ಕೋಟಿ ರೂ. ಸಂಪಾದಿಸಿದ್ದಾರೆ. ಇದು ಭಾರತದ ಕ್ರೀಡಾಳುಗಳು ಗಳಿಸಿದ ಅತಿ ಹೆಚ್ಚು ಆದಾಯವಾಗಿದೆ ಎಂದು ಸಮೀಕ್ಷೆ ಹೇಳಿದೆ. ಫೋರ್ಬ್ಸ್ ವಿಶ್ವದ ಕ್ರೀಡಾಪಟುಗಳ ಪಟ್ಟಿಯಲ್ಲಿ ಧೋನಿ 31ನೇ ಸ್ಥಾನದಲ್ಲಿದ್ದಾರೆ.

ಸೆಲೆಬ್ರಿಟಿ 100: ಜನಪ್ರಿಯತೆ ಹಾಗೂ ಆದಾಯದ ಆಧಾರದಲ್ಲಿ ಭಾರತದ 100 ಗಣ್ಯವ್ಯಕ್ತಿಗಳನ್ನು ಫೋರ್ಬ್ಸ್ ಇಂಡಿಯಾ ಪಟ್ಟಿ ಮಾಡಿದೆ. ಬಾಲಿವುಡ್ ತಾರೆ ಶಾರುಖ್‌ಖಾನ್(202.8 ಕೋಟಿ ರೂ.) ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ. ಸಲ್ಮಾನ್‌ಖಾನ್(144.2 ಕೋಟಿ) ಹಾಗೂ ಎಂಎಸ್ ಧೋನಿ ಬಳಿಕದ ಸ್ಥಾನದಲ್ಲಿದ್ದಾರೆ. ಟಾಪ್-50ರಲ್ಲಿರುವ ಇತರ ಭಾರತದ ಕ್ರೀಡಾಳುಗಳೆಂದರೆ: ವಿರಾಟ್‌ಕೊಹ್ಲಿ, ಸೈನಾ ನೆಹ್ವಾಲ್ ಹಾಗೂ ಸಾನಿಯಾ ಮಿರ್ಜಾ. 23ರ ಹರೆಯದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಫೋರ್ಬ್ಸ್ ಮ್ಯಾಗಜಿನ್ ಪಟ್ಟಿಯಲ್ಲಿ ಯುವ ಸೆಲೆಬ್ರಿಟಿಯಾಗಿದ್ದಾರೆ.

ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ನೂರು ಮಂದಿ ಅತಿ ಶ್ರೀಮಂತ 100 ಕ್ರೀಡಾಪಟುಗಳಲ್ಲಿ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಉಸೈನ್ ಬೋಲ್ಡ್, ನೊವಾಕ್ ಜೊಕೊವಿಕ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಬಿಡುಗಡೆ ಮಾಡಿದ ನೂರು ಮಂದಿ ಅತೀ ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಧೋನಿ 31ನೇ ಸ್ಥಾನದಲ್ಲಿದ್ದಾರೆ. ಜೊಕೊವಿಕ್ 62, ಬೋಲ್ಟ್ 62 ಮತ್ತು ಸಚಿನ್ 78ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ ಫುಟ್ಬಾಲ್ ಆಟಗಾರರಾದ ವೆಯ್ನ್ ರೂನಿ ಮತ್ತು ಫೆರ್ನಾಂಡೊ ಟೊರಸ್ ಕೂಡ ಧೋನಿಗಿಂತ ಹಿಂದಿದ್ದಾರೆ.

ಐಸಿಸಿಯ ಜಾಗತಿಕ ಪ್ರಾಯೋಜಕ ಸಂಸ್ಥೆಯಾಗಿರುವ ಪೆಪ್ಸಿ, ಈಗಾಗಲೇ ಭಾರಿ ಮೊತ್ತ ಕೊಟ್ಟು ಎಂಎಸ್ ಧೋನಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದಲ್ಲದೆ, ಯುಬಿ ಗ್ರೂಪ್(26 ಕೋಟಿ), ಮ್ಯಾಕ್ಸ್ ಮೊಬೈಲ್ (29 ಕೋಟಿ) ಜೊತೆ ಕೂಡಾ ಧೋನಿ ಒಪ್ಪಂದ ಮಾಡಿಕೊಂಡಿದ್ದಾರೆ.

ಸಚಿನ್ ಬಳಿ ಐಟಿಸಿಯ ಸನ್ ಫೀಸ್ಟ್, ಅಡಿಡಾಸ್, Audemars Piguet(ಸ್ವಿಸ್ ಕೈ ಗಡಿಯಾರ ತಯಾರಕರು), ಕ್ಯಾನನ್, ಅವಿವಾ ಜೀವ ವಿಮೆ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್, ತೋಷಿಬಾ ಮುಂತಾದ 14 ಬ್ರ್ಯಾಂಡ್ ಗಳಿವೆ. 20 ಕೋಟಿಗೆ ಪೆಪ್ಸಿ ಬದಲು ಕೋಕಾಕೋಲಾ ಕುಡಿಯಲು ಮನಸ್ಸು ಮಾಡಿದ ಸಚಿನ್ ಬ್ರಾಂಡ್ ಮೌಲ್ಯ ಕುಸಿಯುತ್ತಿರುವುದು ಸುಳ್ಳಲ್ಲ. ಧೋನಿ ಪಟ್ಟಿಯಲ್ಲಿ ಇದಕ್ಕೂ ಡಬಲ್ ಬ್ರ್ಯಾಂಡ್ ಗಳಿದೆ.

ರೂನಿ 24.3 ಮಿಲಿಯನ್ ಡಾಲರ್ ಸಂಪಾದನೆ ಮಾಡಿ 37ನೇ ಸ್ಥಾನ ಪಡೆದಿದ್ದಾರೆ. ಆರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ ಸಂಪಾದನೆ 20.6 ಮಿಲಿಯನ್, ಒಲಿಂಪಿಕ್ ಚಾಂಪಿಯನ್ ಸಂಪಾದನೆ 20.3 ಮಿಲಿಯನ್ ಡಾಲರ್, ಮಹಿಳೆಯರಲ್ಲಿ ರಷ್ಯಾದ ಟೆನಿಸ್ ಬೆಡಗಿ ಮರಿಯಾ ಶರಪೋವಾ 26ನೇ ಸ್ಥಾನ ಪಡೆದಿದ್ದು, ಅವರ ಒಟ್ಟು ಸಂಪಾದನೆ 27.9 ಮಿಲಿಯನ್ ಡಾಲರ್ ಆಗಿದೆ.

English summary
Forbes India magazine has come out with its inaugural India celebrity 100 list based on their income and popularity. Bollywood superstar Shahrukh Khan tops the list, while Salman Khan is No 2 in the list of Indian celebrities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X