ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರ ಭವಿಷ್ಯನಿಧಿ ವ್ಯವಹಾರಕ್ಕೆ ಆಧಾರ್ ಅಗತ್ಯ

By Mahesh
|
Google Oneindia Kannada News

Aadhaar cards mandatory for PF transactions
ಬೆಂಗಳೂರು, ಜ.25: ಸಂಘಟಿತ ರಂಗದಲ್ಲಿನ ವೇತನ ಪಡೆಯುವ ನೌಕರರು ನಿವೃತ್ತಿ ನಿಧಿ ಸಂಸ್ಥೆಯಾದ ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ನಿರ್ವಹಿಸುವ ಇಪಿಎಫ್ ಯೋಜನೆಯಡಿ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.

ಪ್ರಸಕ್ತ ಇರುವ 5 ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರು ಈ ವರ್ಷ ಜೂನ್ 30ರೊಳಗೆ ಸಂಸ್ಥೆಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸಬೇಕಾಗಿದೆ. ಹೊಸ ಸದಸ್ಯರು ಕೂಡಾ 2013 ಮಾ.1 ರಿಂದ (Know Your Customer) ಕೆವೈಸಿ ಪರಿಶೀಲನೆಯ ಭಾಗವಾಗಿ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

2013 ಮಾ.1ರಂದು ಅಥವಾ ನಂತರ ಸೇರ್ಪಡೆಗೊಳ್ಳುವ ಹೊಸ ಸದಸ್ಯರಿಗೆ ಆಧಾರ್ ಸಂಖ್ಯೆಗಳನ್ನು ಕಡ್ಡಾಯವಾಗಿಸಲು ನಿರ್ಧರಿಸಲಾಗಿದೆ. ಈಗ ಇರುವ ಸದಸ್ಯರಿಗೆ ಸಂಬಂಧಿಸಿ ಕಾಲಮಿತಿ ನೆಲೆಯಲ್ಲಿ ಆಧಾರ ಸಂಖ್ಯೆಯನ್ನು ನಮೂದಿಸಿಕೊಳ್ಳಬೇಕು ಎಂದು ಕ್ಷೇತ್ರ ಸಿಬ್ಬಂದಿಗಳಿಗೆ ಕಳುಹಿಸಲಾದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ನೌಕರರೊಬ್ಬ ಆಧಾರ್ ಸಂಖ್ಯೆಯನ್ನು ಹೊಂದಿಲ್ಲವಾದಲ್ಲಿ ಉದ್ಯೋಗದಾತನು ಸಂಸ್ಥೆಯ ಮಾರ್ಗದರ್ಶನಗಳನುಸಾರ ನೇಮಕಾತಿ ಐಡಿ ಒದಗಿಸಬಹುದು. ಈ ಇಐಡಿ(Enrolment Id )ಯನ್ನು ಕ್ರಮೇಣ ಆಧಾರ್ ಸಂಖ್ಯೆಯಾಗಿ ಪರಿವರ್ತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಸಂಸ್ಥೆಯು ತನ್ನ ಪಿಂಚಣಿದಾರರ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್‌ಗಳಿಂದ ಕೂಡಾ ಪಡೆಯಲಿದೆ.

ತನ್ನ ಸೇವೆಗಳನ್ನು ಸುಧಾರಣೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ KYC ರುಜುವಾತು ಆಗಿ ಬಳಸಲು ಇಪಿಎಫ್‌ಒ ನಿರ್ಧರಿಸಿದೆ. ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕಿನ ಪಿಂಚಣಿ ಪಾವತಿಸುವ ಶಾಖೆಗೆ ಅಥವಾ ಇಪಿಎಫ್‌ಒ ಕಚೇರಿಗೆ ಸಲ್ಲಿಸಬಹುದು. ಇದಕ್ಕೆ ಮೊದಲು ಇಪಿಎಫ್‌ಒ ತನ್ನ ಸದಸ್ಯರ ಖಾತೆ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಬದಲಿಸಲು ಯೋಚಿಸಿತ್ತು.

ತಮ್ಮ ಹೊಸ ಉದ್ಯೋಗದಾತನೊಂದಿಗಿನ ಹೊಸ ಖಾತೆಗೆ ಪಿಎಫ್ ಹಣವನ್ನು ವರ್ಗಾಯಿಸಲು ಅರ್ಜಿ ಸಲ್ಲಿಸಬೇಕಾಗುವ ಸದಸ್ಯರಿಗೆ ಅನನುಕೂಲವಾಗುವುದನ್ನು ತಪ್ಪಿಸಲು ಈ ಯೋಚನೆ ಮಾಡಲಾಗಿತ್ತು. ಇದೀಗ ಕೇಂದ್ರೀಯ ಡಾಟಾಬೇಸ್ ಒಂದನ್ನು ಸೃಷ್ಟಿಸಲು ಇಪಿಎಫ್‌ಒ ಮುಂದಾಗಿದೆ.

ಇದರಲ್ಲಿ ಎಲ್ಲಾ ಸದಸ್ಯರು ಒಂದು ವಿಶಿಷ್ಟ ಖಾತೆ ಸಂಖ್ಯೆಯನ್ನು ಹೊಂದಲಿದ್ದು ಉದ್ಯೋಗ ಬದಲಿಸುವ ಸಂದರ್ಭದಲ್ಲಿ ಪಿಎಫ್ ಹಣವನ್ನು ಇನ್ನೊಂದಕ್ಕೆ ವರ್ಗಾಸಬೇಕಾದ ಅಗತ್ಯ ಬೀಳುವುದಿಲ್ಲ.(ಪಿಟಿಐ)

English summary
Salaried employees in organised sector will have to provide their Aadhaar numbers for seeking benefits under the EPF scheme being operated by retirement fund body Employees’ Provident Fund Organisation (EPFO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X