ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತೀ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹೊರೆ?

By Prasad
|
Google Oneindia Kannada News

Very rich to pay more tax
ನವದೆಹಲಿ, ಜ. 24 : ಫೆಬ್ರವರಿ 28ರಂದು ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರು ಮಂಡಿಸಲಿರುವ ಕೇಂದ್ರ ಮುಂಗಡಪತ್ರದಲ್ಲಿ ಯಾರಿಗೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ, ಯಾವುದರ ಬೆಲೆ ಇಳಿಯಲಿದೆ, ಯಾವುದರ ಬೆಲೆ ಏರಲಿದೆ ಎಂಬ ಕಡೆಯೇ ಎಲ್ಲರ ಚಿತ್ತ.

ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಕೆಲ ಕಠಿಣ ಕ್ರಮಗಳನ್ನು ಪಿಸಿ ತೆಗೆದುಕೊಂಡರೂ ಆಶ್ಚರ್ಯವಿಲ್ಲ. ಅವುಗಳಲ್ಲೊಂದು 'ಅತೀ ಶ್ರೀಮಂತ'ರ ಮೇಲೆ ಬೀಳಲಿರುವ ಹೆಚ್ಚುವರಿ ತೆರಿಗೆ ಹೊರೆ. ಈ ಸಂಗತಿಯನ್ನು ಗುರುವಾರ ಪ್ರಸಾರವಾದ, ಖಾಸಗಿ ಟಿವಿ ಚಾನಲ್ಲಿಗೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಹೇಳಿ ಅತೀ ಶ್ರೀಮಂತರಿಗೆ ಬಿಸಿ ಮುಟ್ಟಿಸಿದ್ದಾರೆ.

"ಅತೀ ಶ್ರೀಮಂತರು ಕೆಲ ಸಂದರ್ಭದಲ್ಲಿ ಹೆಚ್ಚಿನ ತೆರಿಗೆ ಹೊರೆ ಹೊರಬೇಕಾಗುತ್ತದೆ ಎಂಬ ವಾದವನ್ನು ಪರಿಗಣಿಸಬೇಕು" ಎಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ನುಡಿದ್ದಾರೆ. ಆದರೆ, ಉಳಿದಂತೆ ಜನಸಾಮಾನ್ಯರಿಗೆ ತೆರಿಗೆ ಭಾರ ಆಗದಂತೆ ಎಚ್ಚರವಹಿಸುವುದಾಗಿ ಹೇಳಿ, ಬೆಲೆ ಏರಿಕೆಯ ಹೊಡೆತಕ್ಕೆ ಬಸವಳಿದಿರುವ ಶ್ರೀಸಾಮಾನ್ಯರಿಗೆ ತುಸು ತಂಪನ್ನೆರೆದಿದ್ದಾರೆ.

ದೇಶ ತೀವ್ರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಇಂಥ ಸಮಯದಲ್ಲಿ ಶ್ರೀಮಂತರು ತೆರಿಗೆ ಭಾರ ಹೊರಬೇಕೆಂದು ಪ್ರಧಾನಿಯ ಆರ್ಥಿಕ ಸಲಹೆಗಾರ ಹಣಕಾಸು ಇಲಾಖೆಗೆ ಶಿಫಾರಸು ಮಾಡಿದ್ದರು.

ಸಂಬಳದಾರರು ನೀಡುತ್ತಿರುವ ವೈದ್ಯಕೀಯ ಸವಲತ್ತಿನ ಹೊರತಾಗಿಯೂ ಬೇರೆ ವೈದ್ಯಕೀಯ ವಿಮೆ ಮಾಡಿಸಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆ ವೈದ್ಯಕೀಯ ವಿಮೆಯ ಮೇಲೆ ಹೂಡಲಾಗಿರುವ ಹಣ ಕೂಡ ತೆರಿಗೆ ರಿಯಾಯಿತಿಯ ಆವರಣದಲ್ಲಿ ಬರಲಿದೆ.

English summary
Union finance minister P. Chidambaram has given hint that very rich will be asked to pay more. PC would be presenting Union budget 2013-14 on February 28, 2013. He says, it is necessary to burden rich to strengthen financial status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X