ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಪಸಂಖ್ಯಾತ ವಿವಿಗೆ ಟಿಪ್ಪು ಹೆಸರು ಬೇಡ: ಪೇಜಾವರ ಶ್ರೀ

By Mahesh
|
Google Oneindia Kannada News

Pejawar Seer on Tipu University controversy
ಬೆಂಗಳೂರು, ಜ.24: ಶ್ರೀರಂಗಪಟ್ಟಣದ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪ ಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಟಿಪ್ಪು ಬದಲು ಎಲ್ಲರ ಗೌರವಪಾತ್ರರಾದ ವಿವಾದಾತೀತರಾದ ಭಕ್ತ ಕಬೀರ, ಶಿಶುನಾಳ ಶರೀಫ್, ಮೌಲಾನಾ ಆಜಾದ್, ಅಬ್ದುಲ್ ಕಲಾಂ ಅಂತಹವರ ಹೆಸರನ್ನು ನೀಡುವುದು ಸೂಕ್ತ ಎಂದು ಉಡುಪಿ ಪೇಜಾವರ ಮಠ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಟಿಪ್ಪು ವಿವಾದದ ಬಗ್ಗೆ ಅನೇಕರು ಅಪೇಕ್ಷೆ ಪಟ್ಟಂತೆ ತಮ್ಮಅಭಿಪ್ರಾಯವನ್ನು ತಿಳಿಸಿದ ಪೇಜಾವರ ಶ್ರೀಗಳು, ಮುಸ್ಲಿಂ ಸಮಾಜದಲ್ಲಿ ಪರಮತ ಸಹಿಷ್ಣುಗಳಾಗಿರುವ, ಹಿಂದೂ ಮತ್ತು ಮುಸ್ಲಿಂ ಎರಡೂ ಸಮಾಜದ ಅಭಿಮಾನಪಾತ್ರರಾಗಿರುವ ಇಂತಹ ಅನೇಕ ಐತಿಹಾಸಿಕ ವ್ಯಕ್ತಿಗಳಿದ್ದಾರೆ. ಆದರೆ ಟಿಪ್ಪು ಸುಲ್ತಾನರ ಬಗ್ಗೆ ತೀವ್ರ ವಿವಾದವಿದೆ. ಟಿಪ್ಪು ಹೆಸರಿನ ಬದಲು ಮೇಲಿನ ಸಾತ್ವಿಕ ವ್ಯಕ್ತಿಗಳ ಹೆಸರನ್ನಿಡಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಡಾ. ಚಿದಾನಂದಮೂರ್ತಿ ಅವರುಟಿಪ್ಪು ಮಾಡಿದ ಘೋರ ಕೃತ್ಯಗಳ ಬಗ್ಗೆ ಅನೇಕ ಸ್ಪಷ್ಟ ದಾಖಲೆಗಳನ್ನು ತೋರಿಸಿದ್ದಾರೆ. (ಟಿಪ್ಪುವಿನ ಖಡ್ಗದಲ್ಲಿ ಕೆತ್ತಿದ ವಾಕ್ಯಗಳು, ಟಿಪ್ಪು ಅವರ ವಂಶಜರೇ ಹೇಳಿದ ಮಾತುಗಳು ಮುಂತಾದ ಅನೇಕ ಸ್ಪಷ್ಟ ಪುರಾವೆಗಳನ್ನು ತೋರಿಸಿದ್ದಾರೆ.) ಅವುಗಳಿಗೆ ಸರಿಯಾದ ಉತ್ತರ ನೀಡದೇ ಬರೇ ಚಿದಾನಂದಮೂರ್ತಿ ಹಾಗೂ ಭೈರಪ್ಪ ಅವರ ಹೇಳಿಕೆಗಳನ್ನು ಉಗ್ರ ಶಬ್ದಗಳಿಂದ ನಿರಾಕರಿಸಿದರೆ ಯಾರಿಗೂ ಸಮಾಧಾನವಾಗುವುದಿಲ್ಲ ಎಂದರು.

ಅಂತಹ ಸರಿಯಾದ ಉತ್ತರವನ್ನು ಟಿಪ್ಪು ಬೆಂಬಲಿಗರು ಯಾರೂ ಈವರೆಗೆ ನೀಡಿಲ್ಲ ಎಂದವರು ಹೇಳಿದ್ದಾರೆ. ಅಲ್ಲದೇ, ತಮಗೆ ದೇಶದಲ್ಲಿರುವ ಮುಸ್ಲಿಂ ನಾಯಕರ ಮತ್ತು ಮುಸ್ಲಿಂ ಸಮಾಜದ ಬಗ್ಗೆ ವಿಶ್ವಾಸ-ಅಭಿಮಾನವಿದೆ. ತಾವು ಮುಸ್ಲಿಂ ಸಮಾಜದ ಅನೇಕಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿಯೂ, ಅವರೆಲ್ಲರೂ ಅತ್ಯಂತ ಪ್ರೀತಿ ಅಭಿಮಾನಗಳಿಂದ ತಮ್ಮನ್ನು ಸ್ವಾಗತಿಸಿದ್ದಾಗಿಯೂ ತಿಳಿಸಿರುವ ಪೇಜಾವರ ಶ್ರೀಗಳು, ಮುಸ್ಲಿಂ ಸಮಾಜದಕೆಲವೇ ಮಂದಿ ಉಗ್ರವಾದಿಗಳು ಮತ್ತು ಭಯೋತ್ಪಾದಕರ ಬಗ್ಗೆ ತಮಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿದರು.

ದೇವರಲ್ಲಿಯೂ ರಾಷ್ಟ್ರದಲ್ಲಿಯೂ ಭಕ್ತಿಯುಳ್ಳ ಬಹುಸಂಖ್ಯಾಕ ಮುಸ್ಲಿಂ ಸಮಾಜವನ್ನು ತಾವು ಪ್ರೀತಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಮುಸ್ಲಿಂ ಸಮಾಜದ ಬಗ್ಗೆ ತಮಗೆ ಯಾವುದೇ ವಿರೋಧ
ಭಾವನೆಯಿಲ್ಲ ಎಂದರು.

ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಒಂದು ಧರ್ಮದವರಿಗೆ ವಿಶೇಷ ಪ್ರಾಶಸ್ತ್ಯವುಳ್ಳ ಶ್ವವಿದ್ಯಾಲಯವನ್ನು ನಿರ್ಮಿಸುವುದರಲ್ಲಿ ಔಚಿತ್ಯವಿಲ್ಲ. ನಮ್ಮ ರಾಷ್ಟ್ರದ ಬಹುಸಂಖ್ಯಾಕರನ್ನೂ ಅಲ್ಪಸಂಖ್ಯಾಕರನ್ನೂ ಸಮಾನವಾಗಿ ನೋಡಬೇಕು. ಅವರಲ್ಲಿ ಯಾವುದೇ ಒಂದು ತಾರತಮ್ಯ, ಅಂತರ ನೀಡಬಾರದು ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಎಂದರು.

English summary
Pejawar Seer suggested to name proposed Minority University by any other name other than Tipu Sultan. He suggested Kabir, Shishunal Sharif, Moulana Azad and Abdul Kalam name for varsity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X