ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರ ಏರಿಕೆ ಇಲ್ಲ:ಮೂರ್ಖತನವೋ,ಜಾಣತನವೋ?

|
Google Oneindia Kannada News

Transport minister Ashok promises no hike in bus fare
ಬೆಂಗಳೂರು, ಜ 22:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸರಕಾರೀ ಬಸ್ಸುಗಳು ಸ್ಥಳೀಯ ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸಿಕೊಳ್ಳಲಿವೆ.

ಈ ಪ್ರಕ್ರಿಯೆ ಸೋಮವಾರದಿಂದ (ಜ 21) ದಿಂದಲೇ ಆರಂಭವಾಗಿದ್ದು ಪೆಟ್ರೋಲ್ ಬಂಕುಗಳ ಮುಂದೆ ಬಸ್ಸುಗಳು ಸಾಲು ಸಾಲಾಗಿ ನಿಂತಿದ್ದು ಎಲ್ಲಡೆ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ.

ಈ ಮಧ್ಯೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣದ ದರವನ್ನು ತಕ್ಷಣಕ್ಕೆ ಏರಿಸದಿರಲು ನಿರ್ಧರಿಸಿದೆ. ಬದಲಿಗೆ ತೈಲ ಕಂಪೆನಿಗಳಿಗೆ ಸಡ್ದು ಹೊಡೆದು ಖಾಸಾಗಿ ಪೆಟ್ರೋಲ್ ಬಂಕುಗಳಲ್ಲಿ ಡೀಸೆಲ್ ಖರೀದಿಸಲು ನಿರ್ಧರಿಸಿದೆ.

ಬಿಎಂಟಿಸಿ ಬಸ್ಸುಗಳಿಗೆ ಸಗಟು ರೂಪದಲ್ಲಿ ತೈಲ ಖರೀದಿಸುವುದನ್ನು ಸೋಮವಾರವೇ (ಜ 21) ಸ್ಥಗಿತಗೊಳಿಸಲಾಗಿದೆ, ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ಬೇರೆ ಬೇರೆ ನಿಗಮಗಳ ವ್ಯಾಪ್ತಿಯಲ್ಲೂ ಸಗಟು ಖರೀದಿ ಸ್ಥಗಿತಗೊಳ್ಳಲಿದೆ. ಇನ್ನು ಮುಂದೆ ಖಾಸಗಿ ಬಂಕ್‌ ಗಳಿಂದ ಎರಡು ರೂಪಾಯಿ ಹೆಚ್ಚಿಗೆ ಪಾವತಿಸಿ ಡೀಸೆಲ್ ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ.

ಆಯಾ ಡಿಪೊ ವ್ಯಾಪ್ತಿಯಲ್ಲಿ ಬರುವ ಬಸ್ಸು ಗಳಿಗೆ ಸ್ಥಳೀಯ ಪೆಟ್ರೋಲ್ ಬಂಕ್‌ ಗಳಲ್ಲಿ ಡೀಸೆಲ್ ಹಾಕಿಸುವ ಪ್ರಕ್ರಿಯೆ ಸೋಮವಾರದಿಂದಲೇ ಆರಂಭವಾಗಿರುವುದರಿಂದ ಬಿಎಂಟಿಸಿ ಬಸ್‌ಗಳು ನಗರದ ಬಂಕ್‌ ಗಳ ಮುಂದೆ ಸರದಿಯಲ್ಲಿ ನಿಂತಿದ್ದವು.

ಸಾರಿಗೆ ಇಲಾಖೆಯ ಈ ನಿರ್ಧಾರದಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು ಏನು?

ಅನುಕೂಲಗಳು:
* ಬಸ್ ದರ ಏರಿಕೆಯಿಂದ ಜನತೆ ಸದ್ಯಕ್ಕೆ ಬಚಾವ್
* ತೈಲ ಕಂಪೆನಿಗಳಿಂದ ಸಗಟು ರೂಪದಲ್ಲಿ ಡೀಸೆಲ್ ಖರೀದಿಸಿದರೆ ಆಗುವ ಹೆಚ್ಚಿನ ಹೊರೆಯನ್ನು ತಪ್ಪಿಸಬಹುದು

ಅನಾನುಕೂಲಗಳು
* ಆಯಾಯ ಬಸ್ ಗಳು ಸ್ಥಳೀಯ ಬಂಕಿನಲ್ಲಿ ಡೀಸೆಲ್ ತುಂಬಿಸ ಬೇಕಾಗಿರುವುದರಿಂದ ಹಣಕಾಸು ವ್ಯವಹಾರದಲ್ಲಿ ಏರುಪೇರು ಸಾಧ್ಯತೆ.
* ಇಂಧನ ಪೂರೈಕೆ ವಿಚಾರದಲ್ಲಿ ಡಿಪೋ ಮುಖ್ಯಸ್ಥರ ನಿಯಂತ್ರಣ ತಪ್ಪಿ ಹೋಗುವುದು.
* ಡಿಪೋದಲ್ಲಿರುವ ಬಂಕುಗಳು ಮುಚ್ಚಬೇಕಾಗುವುದು ಮತ್ತು ಸಂಬಂಧಪಟ್ಟ ನೌಕರರ ಕೆಲಸಕ್ಕೆ ತೊಂದರೆಯಾಗಬಹುದು.
* ಸ್ಥಳೀಯ ಬಂಕುಗಳಲ್ಲಿ ಇಂಧನ ತುಂಬಿಸ ಬೇಕಾಗಿರುವುದರಿಂದ ಮತ್ತಷ್ಟು ಟ್ರಾಫಿಕ್ ಅಡಚಣೆ.
* ಪ್ರಯಾಣಿಕರಿಗೆ ವೃಥಾ ಕಿರಿಕಿರಿ ಸಮಯ ಪೋಲು

English summary
Transport Minister Ashok assured commuters of the Road Transport Corporations that there would be no hike in bus fares despite the increase in the price of diesel for bulk consumer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X