ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳತಿ ಜತೆ ಸಂಭೋಗಕ್ಕೆ 10 ಲಕ್ಷ ಮಂದಿ ಅಸ್ತು

By Srinath
|
Google Oneindia Kannada News

boy-gets-1m-facebook-likes-for-inter-course-with-gf
ಬೆಂಗಳೂರು, ಜ.21: ಜನ ತಮ್ಮ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಇನ್ನೂ ಏನೆಲ್ಲ ನವೀನ ಮಾರ್ಗಗಳನ್ನು ಕಂಡುಕೊಳ್ಳುತ್ತಾರೋ? ಅದೂ ಇಂದಿನ ಮಾಹಿತಿ ತಂತ್ರಜ್ಞಾನದ ಸಾಮಾಜಿಕ ಜಾಲ ಯುಗದಲ್ಲಿ.

ನಾರ್ವೆಯ 20 ವರ್ಷದ ಪೀಟರ್ ಕೆರೆನೆಂಗ್ ಎಂಬ ಯುವಕನೊಬ್ಬ Facebook ಮೂಲಕ ತನ್ನ ''ಗುರಿ'' ಸಾಧನೆಯನ್ನು ಹೇಗೆ ಈಡೇರಿಸಿಕೊಂಡಿದ್ದಾನೆ ಅಂತ ನೋಡಿ (ಪಕ್ಕದ ಚಿತ್ರ ನೋಡಿ).

'ಚಿತ್ರದಲ್ಲಿ ನನ್ನ ಪಕ್ಕ ಕುಳಿತಿರುವವಳು ನನ್ನ ಗೆಳತಿ ಕ್ಯಾಥೆರೀನ್. Facebookನಲ್ಲಿ ನನ್ನ ಪೋಸ್ಟ್ ಗೆ 10 ಲಕ್ಷ likes ಬಂದರೆ ನನ್ನೊಂದಿಗೆ ಸಂಭೋಗದಲ್ಲಿ ಪಾಲ್ಗೊಳ್ಳುವುದಾಗಿ ಅವಳು ಹೇಳುತ್ತಾಳೆ. ದಯವಿಟ್ಟು ಇದನ್ನು ಈಡೇರಿಸಿ' ಎಂದು ಪೀಟರ್ ಕೆರೆನೆಂಗ್ ಹೇಳಿಕೊಂಡಿದ್ದ.

ಕೆಲವೇ ಸೆಕೆಂಡುಗಳಲ್ಲಿ ಈ ಪೋಸ್ಟ್ ಗೆ ಎಂತಹ ಪ್ರತಿಕ್ರಿಯೆ ಹರಿದುಬಂತೆಂದರೆ ಲಕ್ಷಾಂತರ ಮಂದಿ like, share ಒತ್ತತೊಡಗಿದರು. ಅದೂ ಕೇವಲ 18 ಗಂಟೆಗಳಲ್ಲಿ ಯುವಕ 10 ಲಕ್ಷ likesಗಳನ್ನು ಗಿಟ್ಟಿಸಿಯೇ ಬಿಟ್ಟ.

ಸರಿ ಅವರಿಗೆ ಈ ಐಡಿಯಾ ಹೇಗೆ ಬಂತೆಂದರೆ ... ಇಬ್ಬರು ಬಾಲಕಿಯರು ಒಂದು ನಾಯಿಮರಿ ಬೇಕು ಎಂದು ಅಪ್ಪನಿಗೆ ದುಂಬಾಲು ಬಿದ್ದರು. ಸರಿ ಅಪ್ಪ ಇದೇ ಐಡಿಯಾ ನೀಡಿದ್ದ. ನಿಮ್ಮ ಬೇಡಿಕೆಗೆ Facebookನಲ್ಲಿ 10 ಲಕ್ಷ likes ಪಡೆದುಕೊಂಡರೆ ಮುದ್ದು ನಾಯಿಮರಿ ನಿಮ್ಮದಾಗುತ್ತದೆ ಎಂದು ಅಪ್ಪ ಹೇಳಿದ್ದ. ಅದನ್ನೇ ಈ ಯುವ ಜೋಡಿ ರಿಪೀಟ್ ಮಾಡಿದೆ.

ಇಲ್ಲೂ ಪೀಟರ್ ಕೆರೆನೆಂಗ್-ಕ್ಯಾಥೆರೀನ್ ಜೋಡಿಯನ್ನು ಬೆಂಬಲಿಸಿ ಕೆಲವೇ ಗಂಟೆಗಳಲ್ಲಿ 10 ಲಕ್ಷ likes ಬಂದೇ ಬಿಟ್ಟವು. ಅದಾಗುತ್ತಿದ್ದಂತೆ ವಿಷಯ ತಿಳಿದು ಕ್ಯಾಥೆರೀನ್ ಅಪ್ಪ ಏನು ಮಾಡಿಬಿಡುತ್ತಾನೋ ಎಂದು ಆತಂಕಗೊಂಡ ಪೀಟರ್ ಕೆರೆನೆಂಗ್ ತನ್ನ ಪೋಸ್ಟ್ ಅನ್ನು ತೆಗೆದುಹಾಕಿದ! ಅದಾದ ನಂತರ ಜೋಡಿ ಏನು ಮಾಡಿತೋ ತಿಳಿದುಬಂದಿಲ್ಲ.

English summary
Boy Friend gets 1m Facebook likes for inter course with Girl Friend. He posted an image of him with his girlfriend. In the picture, Petter holds a placard with the following message, "Catherine says that if I can get 1m 'likes' she will have sex with me Please share and like."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X