ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ: ಅಶ್ಲೀಲ ವೆಬ್‌ ಸೈಟುಗಳ ನಿಷೇಧ?

By Srinath
|
Google Oneindia Kannada News

kerala-hc-seeks-center-view-on-porn-web-sites-ban
ಕೊಚ್ಚಿ, ಜ.21: ಮಹಿಳೆಯರ ಮೇಲೆ ಇತ್ತೀಚೆಗೆ ಅತ್ಯಾಚಾರ ಸೇರಿದಂತೆ ನಾನಾ ರೀತಿಯ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ನಾನಾ ಸಲಹೆಗಳೂ ಹರಿದುಬರುತ್ತಿವೆ.

ಈ ಮಧ್ಯೆ, ಇಂತಹ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುವ ಅಶ್ಲೀಲ ವೆಬ್‌ ಸೈಟ್‌ಗಳನ್ನು ನಿಷೇಧಿಸಬೇಕು ಎಂಬ ಕೂಗೂ ಎದ್ದಿದೆ. ತತ್ಸಂಬಂಧ ಅರ್ಜಿಯೊಂದು ಬಂದಿದ್ದು, ಈ ಸಂಬಂಧ ಅಭಿಪ್ರಾಯ ತಿಳಿಸುವಂತೆ ಕೇರಳ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಶನಿವಾರ ಸೂಚಿಸಿದೆ.

ಮುಖ್ಯ ನ್ಯಾಯಾಧೀಶೆ, ಕರ್ನಾಟಕದ ಮಂಜುಳಾ ಚೆಲ್ಲೂರು ಮತ್ತು ನ್ಯಾ. ಕೆ ವಿನೋದ್‌ ಚಂದ್ರನ್‌ ಅವರ ವಿಭಾಗೀಯ ಪೀಠವು ವಕೀಲ ಮನೋರಂಜನ್‌ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ವಿಚಾರಣೆಗೊಳಪಡಿಸಿ ಈ ಆದೇಶ ನೀಡಿದೆ.

ಅಶ್ಲೀಲ ವೆಬ್‌ ಸೈಟುಗಳು ಮಹಿಳೆಯರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುತ್ತವೆ ಎನ್ನುವುದು ಅಮೆರಿಕದ ಮನಃಶಾಸ್ತ್ರ ತಜ್ಞ ವಿಕ್ಟರ್‌ ಬಿ ಕ್ಲೈನ್‌ ಅವರು ನಡೆಸಿರುವ ಅಧ್ಯಯನದಿಂದ ದೃಢಪಟ್ಟಿದೆ.

ಇಂತಹ ಕೃತ್ಯಗಳನ್ನು ಎಸಗಿರುವ ವ್ಯಕ್ತಿಗಳನ್ನು ಅಧ್ಯಯನಕ್ಕೊಳಪಡಿಸಿದಾಗ ಅವರು ಲೈಂಗಿಕ ವೆಬ್‌ ಸೈಟ್‌ ಗಳು ತಮ್ಮ ಮೇಲೆ ಪ್ರಭಾವ ಬೀರಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಮನೋರಂಜನ್‌ ಮೊಕದಮೆಯಲ್ಲಿ ವಿವರಿಸಿದ್ದಾರೆ.

ಲೈಂಗಿಕ ವಿಚಾರಗಳನ್ನೊಳಗೊಂಡಿರುವ ವೆಬ್‌ ಸೈಟ್‌ ಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಅವುಗಳನ್ನು ಪತ್ತೆಹಚ್ಚಿ, ನಿಷೇಧಿಸಬೇಕು ಎಂದು ಅವರು ಕೋರಿದ್ದಾರೆ. ಅಶ್ಲೀಲ ವೆಬ್‌ ಸೈಟ್‌ ವೀಕ್ಷಣೆ ನಾಲ್ಕು ಹಂತಗಳಲ್ಲಿರುತ್ತದೆ.

ನಾಲ್ಕನೆಯ ಮತ್ತು ಕೊನೆಯ ಹಂತಕ್ಕೆ ತಲುಪಿದ ವ್ಯಕ್ತಿ ಕಾಮಪೀಡಿತನಾಗಿ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

English summary
Kerala HC division bench comprising chief justice Manjula Chellur and justice K Vinod Chandran passed the order on Saturday to the central government to submit its views on banning adult websites in view of rising crimes against women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X