ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸ್ ಅಪಹರಣ, 2 ದಿನ ಗ್ಯಾಂಗ್ ರೇಪ್

By Srinath
|
Google Oneindia Kannada News

chandigarh-nurse-abducted-gang-molested-for-2-days
ಚಂಡೀಗಢ, ಜ.21: ಇಪ್ಪತ್ತಾರು ವರ್ಷದ ನರ್ಸ್ ಅನ್ನು ಅಪಹರಿಸಿದ ದುಷ್ಕರ್ಮಿಗಳು ಆಕೆಯ ಮೇಲೆ 2 ದಿನಗಳ ಕಾಲ ಸತತ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ. ಅತ್ಯಾಚಾರದ ನಂತರ ಮೂವರು ದುಷ್ಕರ್ಮಿಗಳು ಬಾಧಿತ ಶುಶ್ರೂಷಕಿಯನ್ನು ಬಟಿಂಡಾ-ಡಾಬಾವಾಳಿ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ.

ಉದ್ಯೋಗ ಸಂದರ್ಶನಕ್ಕೆಂದು ಚಂಡೀಗಢಕ್ಕೆ ಬಂದಿದ್ದ ಮೋಗಾದ ಲಾಂಡೆಕೆ ಗ್ರಾಮದ ನರ್ಸ್ ಮೇಲೆ ಈ ಕುಕೃತ್ಯ ನಡೆದಿದೆ. ನರ್ಸ್ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಆಕೆಯ ಬಳಿ ಬಂದಿದ್ದಾರೆ. ಆಕೆ ವಿಳಾಸ ಹೇಳುತ್ತಿರುವಾಗ ಇಬ್ಬರು ಆಕೆಯನ್ನು ಕಾರಿನೊಳಕ್ಕೆ ಎಳೆದುಕೊಂಡಿದ್ದಾರೆ.

'ಕಾರಿನಲ್ಲಿ ಇನ್ನೂ ಇಬ್ಬರು ಮಹಿಳೆಯರು ಇದ್ದರು. ಆದರೆ ಕೆಲ ಹೊತ್ತಿನಲ್ಲೇ ನನಗೆ ಮತ್ತುಬರಿಸುವ ಔಷಧ ನೀಡಿ, ನನ್ನ ಪ್ರಜ್ಞೆ ತಪ್ಪಿಸಿದರು' ಎಂದು ಬಾಧಿತ ನರ್ಸ್ ಅಲವತ್ತುಕೊಂಡಿದ್ದಾರೆ.

'ಪ್ರಜ್ಞೆ ಮರಳುವ ವೇಳೆಗೆ ನಾನು ಕೊಠಡಿಯೊಂದರಲ್ಲಿರುವುದು ಅರಿವಿಗೆ ಬಂದಿತು. ಮೂವರು ಯವಕರು ನನ್ನ ಮೇಲೆ ತಮ್ಮ ಕಾಮತೃಷೆ ತೀರಿಸಿಕೊಂಡರು. 2 ದಿನಗಳ ಕಾಲ ಹೀಗೇ ನಡೆಯಿತು. ಅವರು ಇಡೀ ಘಟನೆಯನ್ನು ಚಿತ್ರೀಕರಿಸಿದರು' ಎಂದು ನರ್ಸ್ ತಿಳಿಸಿದ್ದಾರೆ.

ನರ್ಸ್ ನೀಡಿದ ದೂರನ್ನು ಆಧರಿಸಿ, ಪೊಲೀಸರು ದುಷ್ಕರ್ಮಿಗಳ ಬೇಟೆಯಲ್ಲಿದ್ದಾರೆ.

English summary
Chandigarh nurse abducted gang-molested for two days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X