ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಾಂತರವಾಗುವ ದಲಿತರಿಗೆ ಸರ್ಕಾರಿ ಸೌಲಭ್ಯ ಕಟ್

|
Google Oneindia Kannada News

Narayana Swamy
ಕಾರವಾರ, ಜ 21: ಮತಾಂತರವಾಗುವುದನ್ನು ಬಿಜೆಪಿ ಸರಕಾರ ಪ್ರಭಲವಾಗಿ ವಿರೋಧಿಸುತ್ತದೆ. ಒಂದು ವೇಳೆ ದಲಿತರಿಗೆ ಸರಕಾರೀ ಸೌಲಭ್ಯ ಬೇಕೆಂದಾದಲ್ಲಿ ಮತಾಂತರ ಗೊಳ್ಳಬಾರದೆಂದು ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.

ಭಾನುವಾರ (ಜ 20) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಪ್ರಮುಖವಾಗಿ ದಲಿತ ಕುಟುಂಬದವರು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರ ಗೊಳ್ಳುತ್ತಿದ್ದಾರೆ.

ದಲಿತ ಕುಟುಂಬಗಳಿಗೆ ಎಸ್ಸಿ, ಎಸ್ಟಿ ಸೌಲಭ್ಯ ನೀಡಲಾಗುತ್ತದೆ. ಹೀಗೆ ಮತಾಂತರಗೊಂಡ ಕುಟುಂಬಕ್ಕೆ ಕೊಡುತ್ತಿರುವ ಸರಕಾರೀ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಸರಕಾರದ ವ್ಯಾಪ್ತಿಗೆ ಬರುವ ಜಮೀನುಗಳನ್ನು ವಸತಿಹೀನರಿಗೆ ಹಂಚಲಾಗುವುದು. ಈ ಸಂಬಂಧ ನ್ಯಾಯಾಲಯದ ಮಾರ್ಗದರ್ಶನ ಪಡೆಯಲಾಗುತ್ತಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಕುಮ್ಕಿ ಜಮೀನು ರಾಜ್ಯ ಸರಕಾರದ ಅಧೀನದ್ದು. ಇದು ಅರಣ್ಯ ಇಲಾಖೆಯ ಸುಪರ್ದಿಗೆ ಬರುವುದಿಲ್ಲ.

ಸೂಕ್ತ ಕಾನೂನಿನಡಿ ಸದ್ಯದಲ್ಲೇ ಸರಕಾರ ಈ ಜಮೀನುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.

ಈ ಜಮೀನನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡ ನಂತರ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ವಿತರಿಸಲಾಗುವುದು ಎಂದು ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.

English summary
Dalits who convert to other religion will not get Government facilities under SC and ST quota, said minister Narayana Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X