ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5ಲಕ್ಷ ತಿಮ್ಮಪ್ಪನ ಹುಂಡಿಗೆ ಹಾಕಿದೆ: ಪೇದೆ ಮಂಜುನಾಥ

By Srinath
|
Google Oneindia Kannada News

Bribe Bangalore : Kothanur PC PP Manjunath bribes lord Venkateshwara
ಬೆಂಗಳೂರು, ಜ.18: ಇದಪ್ಪಾ ವರಸೆ! 'ಕದ್ದ 5 ಲಕ್ಷ ರೂ. ಲಂಚದ ಹಣವನ್ನು ಹುಂಡಿಗೆ ಹಾಕಿ, ದೇವರೇ ಈ ಲಂಚದ ಹಣ ತಗೊಂಡು ನನ್ನನ್ನು ಲಂಚ ಪ್ರಕರಣದಿಂದ ಬಚಾವು ಮಾಡಪ್ಪಾ ಸಾಕು' ಎಂದು ಕೊತ್ತನೂರು ಪೊಲೀಸ್ ಠಾಣೆಯ ಪೇದೆ ಪಿಪಿ ಮಂಜುನಾಥ ಸಿಕ್ಕಸಿಕ್ಕ ದೇವರಿಗೆ ಕೈಮುಗಿದಿದ್ದಾನಂತೆ.

ಸೆಪ್ಟೆಂಬರ್ 6ರ ಗುರುವಾರ ಸಂಜೆ ತನ್ನ ಮೇಲಧಿಕಾರಿ ಇನ್‌ಸ್ಪೆಕ್ಟರ್ ಎಂ ಪುರುಷೋತ್ತಮ್ ಜತೆ 5 ಲಕ್ಷ ರೂ. ಲಂಚದ ಹಣದೊಂದಿಗೆ ಪರಾರಿಯಾಗಿದ್ದ ಮಂಜುನಾಥ, ಕೊನೆಗೂ ಜ 4ರಂದು ಲೋಕಾಯುಕ್ತ ಕೋರ್ಟಿಗೆ ಶರಣಾಗಿದ್ದ. ಅಲ್ಲಿಂದೀಚೆಗೆ ಪೇದೆ ಮಂಜುನಾಥನ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರ ಮುಂದೆ ಆತ ಸರಿಯಾಗಿಯೇ 'ಪಿಪಿ' ಊದಿದ್ದಾನೆ.

'ನೋಡಿ, ನಾನು ತೆಗೆದುಕೊಂಡು ಹೋದ ಆ ಲಂಚದ ಹಣದಲ್ಲಿ ಸ್ವಲ್ಪ ನಾನೂ ಖರ್ಚು ಮಾಡಿಕೊಂಡೆ. ಆದರೆ ಬಹಳಷ್ಟು ಹಣವನ್ನು ತಿಮ್ಮಪ್ಪನ ಹುಂಡಿ ಸೇರಿದಂತೆ ಅನೇಕ ದೇಗುಲಗಳ ಹುಂಡಿಗೆ ಸುರಿದು ಧನ್ಯೋಸ್ಮಿ ಎಂದು ಕೈಮುಗಿದಿದ್ದೇನೆ' ಎಂದು ದಾಸನಾಯಕನಹಳ್ಳಿ ನಿವಾಸಿ ಮಂಜುನಾಥ ಹೇಳಿದ್ದಾನೆ.

ಗೋವಿಂದಾ ಹರಿ ಗೋವಿಂದಾ: ಸ್ಥಳ ಮಹಜರಿಗೆ ತೆರಳಿದ ಲೋಕಾಯುಕ್ತ ಪೊಲೀಸರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ತಿರುಪತಿ ತೀರ್ಥಯಾತ್ರೆ ಮಾಡಿಸಿದ ಜಾಣ ಪೇದೆ ಪಿಪಿ ಮಂಜುನಾಥ ಅಲ್ಲಿನ ಹುಂಡಿಗಳನ್ನು ತೋರಿಸಿ, 'ನೋಡಿ ಇಲ್ಲೇ ನಾನು ಲಂಚದ ಹಣವನ್ನು ಹಾಕಿರುವುದು. ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ. ಎಲ್ಲ ಆ ಪರಮಾತ್ಮ ನೋಡಿಕೊಳ್ಳುತ್ತಾನೆ' ಎಂದು ತನ್ನ ಸಹೋದ್ಯೋಗಿಗಳಿಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ.

ಪೀಕಲಾಟಕ್ಕೆ ಇಟ್ಟುಕೊಂಡ ಪೊಲೀಸರು ಬರಿಗೈಯಲ್ಲಿ ವಾಪಸಾಗಿದ್ದಾರೆ. ನಯಾಪೈಸೆಯೂ ಗಿಟ್ಟಿಲ್ಲ. ಬದಲಿಗೆ ಎಲ್ಲಾ ಖರ್ಚೇ. ಆದರೂ 'ಆತ ಹಣ ಕಸಿದುಕೊಂಡು 4 ತಿಂಗಳ ಕಾಲ ನಾಪತ್ತೆಯಾಗಿರುವುದೇ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಅದೇ ಅಲ್ಲದೆ ಇನ್ನೂ ಸಾಕಷ್ಟು ಪುರಾವೆಗಳಿವೆ. ಪ್ರಕರಣ ಜೀವಂತವಾಗಿದೆ' ಎಂದು ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.

English summary
Bribe- Bangalore Kothanur police constable Manjunath who had snached Rs 5 lakh bribe and was absconding has surrendered to Lokayukta Court on Jan 4. In the meanwhile he told Lokayukta police that he has disposed all the bribe money in various temples including Tirupathi temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X