ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

By Mahesh
|
Google Oneindia Kannada News

ಭೂ ಗ್ರಹದ ಅತಿ ದೊಡ್ಡ ಮೇಳ, ಜಗತ್ತಿನ ಯಾವ ಮೇಳದಲ್ಲೂ ಕಾಣದಷ್ಟು ಜನರನ್ನು ಆಕರ್ಷಿಸುತ್ತದೆ. ಜೊತೆಗೆ ಅಷ್ಟು ಜನರು ಒಂದು ಕಡೆ ಏಕತಾ ಭಾವದಿಂದ ಒಂದುಗೂಡುವಾಗ ಸ್ವಚ್ಛತೆ, ಆರೋಗ್ಯ, ರಕ್ಷಣೆ ಆಯೋಜಕರಿಗೆ ತಲೆ ನೋವಿನ ವಿಷಯವಾಗುತ್ತದೆ.

ಆದರೆ, ಈ ಮಹಾ ಕುಂಭಮೇಳದ ಯಶಸ್ಸಿಗೆ ಸ್ವಚ್ಛತಾ ಪರಿಚಾರಕರ ಕೊಡುಗೆ ಅಪಾರ, ಪೊರಕೆ ಹಿಡಿದು ಕ್ಲೀನರ್ ಗಳು ಕಸದ ರಾಶಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರೆ, ಪವಿತ್ರ ನದಿ ಗಂಗೆ ಮಲೀನಗೊಳ್ಳದಂತೆ ವಿಶೇಷ ಸ್ವಚ್ಛತಾ ಪಡೆ ಹದ್ದಿನ ಕಣ್ಣಿಟ್ಟಿದೆ.

ಇದರ ಜೊತೆ ಕೊರೆಯುವ ಚಳಿಯಲ್ಲಿ ಭಕ್ತಾದಿಗಳ ವಸತಿ, ಆರೋಗ್ಯ ರಕ್ಷಣೆ, ತಾತ್ಕಾಲಿಕ ಶೆಡ್, ಶೌಚಾಲಯಗಳನ್ನು ನಿರ್ಮಿಸಿ, ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ. ದೈನಂದಿನ ದೃಶ್ಯಾವಳಿಗಳನ್ನು ತಪ್ಪದೆ ನೋಡಿ

ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ

ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳುಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು

 ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ

ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ (ಜ.14) ರಂದು 2013ನೇ ಸಾಲಿನ ಮಹಾಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. 2001ರ ನಂತರ ಮಹಾ ಕುಂಭಮೇಳ ಸಂಭವಿಸುತ್ತಿದ್ದು ಕೊರೆಯುವ ಚಳಿಯಲ್ಲೂ ಭಕ್ತಾದಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ಸುಮಾರು 55 ದಿನಗಳ ಕಾಲ ನಡೆಯುವ ಈ ಮಹಾಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಾರ್ಚ್ 10ರಂದು ಮಹಾ ಶಿವರಾತ್ರಿ ದಿನ ಮೇಳ ಸಂಪನ್ನಗೊಳ್ಳಲಿದೆ. ಅಲಹಾಬಾದಿನಲ್ಲಿ ನಡೆಯುತ್ತಿರುವುದು ಪೂರ್ಣ ಮಹಾ ಕುಂಭಮೇಳವಾಗಿದೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

55 ದಿನಗಳಲ್ಲಿ ಜನರ ಪಾಪಗಳನ್ನು ಗಂಗಾ, ಯಮುನಾ, ಸರಸ್ವತಿ ಸಂಗಮ ತೊಳೆಯುತ್ತಿದ್ದಾರೆ. ಕ್ಲೀನರ್ ಗಳು ಯಾತ್ರಾರ್ಥಿಗಳ ಕಲ್ಮಶಗಳನ್ನು ತೊಳೆಯುವ ಮೂಲಕ ಮೇಳದ ಆರೋಗ್ಯ ಕಾಪಾಡುತ್ತಿದ್ದಾರೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಪ್ರತಿ ಪವಿತ್ರ ಮುಳುಗು ಹಾಕುವ ಮುನ್ನ ಕನಿಷ್ಠ ಅರ್ಧ ಗಂಟೆ ಗ್ಯಾಪ್ ನೀಡಲಾಗುತ್ತಿದೆ. ಪ್ರತ್ಯೇಕ 14ಕ್ಕೂ ಅಧಿಕ ಸ್ನಾನಘಟ್ಟಗಳನ್ನು ನಿರ್ಮಿಸಿ ಗೊಂದಲ ನಿವಾರಿಸಲಾಗಿದೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

35 ಸಾವಿರಕ್ಕೂ ಅಧಿಕ ಟಾಯ್ಲೆಟ್ ಗಳಿದ್ದು, 165 ಕಿ.ಮೀ ಉದ್ದದ ಪ್ಲಾಸ್ಟಿಕ್ ಪೈಪ್ ಜಾಲ ತ್ಯಾಜ್ಯಗಳನ್ನು ಪಿಟ್ ಗಳಿಗೆ ರವಾನಿಸುತ್ತಿದೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಸುಮಾರು 9,000ಕ್ಕೂ ಅಧಿಕ ಕಸ ಗುಡಿಸುವವರು, ಸ್ವಚ್ಛತಾ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ನೀರಿನಿಂದ ಹರಡಬಹುದಾದ ಕಾಲರಾ ಸೇರಿದಂತೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರ ಸುರಕ್ಷತೆ, ನದಿ ನೀರು ಸ್ವಚ್ಛತೆ ನಮ್ಮ ಆದ್ಯತೆ ಎಂದು ಆಯೋಜಕರು ಹೇಳಿದ್ದಾರೆ.

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಸುಮಾರು 20 ನುರಿತ ವೈದ್ಯರು, 120 ಆಂಬ್ಯುಲೆನ್ಸ್ 24 X 7 ಕಾಲ ಕಾರ್ಯ ನಿರ್ವಹಿಸಲಿದೆ. 100 ಬೆಡ್ ಗಳ ಆಸ್ಪತ್ರೆಯನ್ನು ಮೇಳದ ಸಮೀಪದಲ್ಲೇ ಸ್ಥಾಪಿಸಲಾಗಿದೆ. 4 ಗೋದಾಮುಗಳು, 125 ದಿನಸಿ ಪಡಿತರ ವಿತರಣೆ ಕೇಂದ್ರಗಳು ಮೇಳದ ಪ್ರಮುಖ ಸ್ಥಳಗಳಲ್ಲಿ ತಲೆ ಎತ್ತಿದೆ.

English summary
Maha Kumbh Mela is the biggest gathering of human beings (devotees) on the planet. Thanks to organizers for maintain good sanitation, Here Cleaners are the key to success. The 2013 edition of the Maha Kumbh kicked off on Monday(Jan.14), on the auspicious occasion of Makar Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X