ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ

By Mahesh
|
Google Oneindia Kannada News

ಭಾರತ ಚಿತ್ರರಂಗದ ಸಕತ್ ಹಾಟ್ ತಾರೆ ಪೂನಂ ಪಾಂಡೆ 2013ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು ಇಂದಿನ ವಿಶೇಷ.

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳ ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರ ಮಾಡಿಕೊಳ್ಳುವ ನಂಬಿಕೆಯನ್ನು ಹೊತ್ತು ಬಂದಿದ್ದ ಪೂನಂ ಪಾಂಡೆ ಸಕತ್ ಉಲ್ಲಾಸದಿಂದ ಮೇಳದಲ್ಲಿ ಪಾಲ್ಗೊಂಡರು.

'NASHA of lifetime. Met holy saints had a Bath in Holy Confluence; Kumbh Mela 2013, Allahabad,'

'Took blessings from all Spiritual Gurus in Maha Kumbh Mela in Allahabad for my Debut Film #Nasha,' ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಚಿತ್ರ ಸಮೇತ ಪೂನಂ ಪಾಂಡೆ ತಮ್ಮ ಅಲಹಾಬಾದ್ ಭೇಟಿ ಬಗ್ಗೆ ಹೇಳಿಕೊಂಡಿದ್ದಾರೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ (ಜ.14)ರಂದು 2013ನೇ ಸಾಲಿನ ಮಹಾಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. 2001ರ ನಂತರ ಸಂಭವಿಸುತ್ತಿರುವ ಈ ಮಹಾನ್ ಕುಂಭಮೇಳದಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ಭಕ್ತಾದಿಗಳ ಹರ್ಷೋದ್ಗಾರದಿಂದ ಮುಳುಗೇಳುತ್ತಿದ್ದಾರೆ.

ಈ ಬಾರಿ ಗಂಗಾ ನದಿಗೆ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ತಡೆಗಟ್ಟಲು ದೊಡ್ಡ ಪಡೆಯೇ ಸಿದ್ಧವಾಗಿದ್ದು, ಪವಿತ್ರ ನದಿಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಭದ್ರತೆ ಒದಗಿಸಲಾಗಿದ್ದು, ಕಳೆದ ಮೂರು ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿಸಂಗಮದಲ್ಲಿ ಆರಂಭದ ಮುಳುಗು ದೃಶ್ಯಾವಳಿ

ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳುಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು

ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?

ನಟಿ ಉದ್ಯಮಿ ಜಿ.ಪಿ ಹಿಂದೂಜಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರು ಮಹಾ ಕುಂಭ ಮೇಳದಲ್ಲಿ ಹೋಮ ಹವನ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈಗ ಪೂನಂ ಪಾಂಡೆ ಮುಳುಗೆದ್ದಿದ್ದಾರೆ. ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಂಡ ಭಕ್ತಾದಿಗಳ ದೈನಂದಿನ ದೃಶ್ಯಾವಳಿಗಳು ಇಲ್ಲಿದೆ ತಪ್ಪದೆ ನೋಡಿ...

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳ ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರ ಮಾಡಿಕೊಳ್ಳುವ ನಂಬಿಕೆಯನ್ನು ಹೊತ್ತು ಬಂದಿದ್ದ ಪೂನಂ ಪಾಂಡೆ ಸಕತ್ ಉಲ್ಲಾಸದಿಂದ ಮೇಳದಲ್ಲಿ ಪಾಲ್ಗೊಂಡರು.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಮಹಾ ಕುಂಭಮೇಳದಲ್ಲಿ ಸಕತ್ ಹಾಟ್ ತಾರೆ ಪೂನಂ ಪಾಂಡೆ ನಾಗಾ ಸಾಧುವಿನ ಆಶೀರ್ವಾದ ಬೇಡುತ್ತಿರುವುದು

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ನಂಗಾ ಸಾಧುಗಳು ವಿಜಯದ ಕೇ ಕೇ ಹಾಕುತ್ತಾ ಗಂಗೆಯಲ್ಲಿ ಹಾಹಾಕಾರಾ ಎಬ್ಬಿಸಿದರು.2001ರಲ್ಲಿ ಬಳಕೆಯಾದ ಭೂ ವಿಸ್ತೀರ್ಣದ ಎರಡು ಪಟ್ಟು ಜಾಗ ಸುಮಾರು 50.83 ಚದರ ಕಿಮೀ ಪ್ರದೇಶದಲ್ಲಿ ಮೇಳ ಜರುಗಗುತ್ತಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಭಕ್ತಾದಿಗಳ ಒದ್ದೆ ಬಟ್ಟೆಗಳನ್ನು ಒಣಗಿಸಲು ತಾತ್ಕಾಲಿಕ ವ್ಯವಸ್ಥೆ. 100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಲಿದ್ದಾರೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಸಂಗಮದ ಬಳಿ ಭಕ್ತ ಜನ ಸಾಗರ. 1 ಮಿಲಿಯನ್ ವಿದೇಶಿ ಪ್ರವಾಸಿಗರು ಆಸಕ್ತಿಯಿಂದ ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಜುನಾ ಅಖಾರ ನಾಗಾ ಸಾಧುಗಳು ಸಂಗಮಕ್ಕೆ ಹಾರುತ್ತಿರುವ ದೃಶ್ಯ. ಮಹಾ ಕುಂಭಮೇಳದ ಒಟ್ಟಾರೆ ಬಜೆಟ್ 1,200 ಕೋಟಿ ರು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 200 ಕೋಟಿ ರು ಅಧಿಕವಾಗಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಸಂಗಮದಲ್ಲಿ ಸಾಧು ಜಟೆ ಸ್ವಿಂಗ್ ಆಗಿದ್ದು ಹೀಗೆ..ಉತ್ತರ ಪ್ರದೇಶ ಸರ್ಕಾರ ಈ ಮಹಾನ್ ಮೇಳದಿಂದ ಸುಮಾರು 12,000 ಕೋಟಿ ರು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ. ಸುಮಾರು 6 ಲಕ್ಷ ಮಂದಿಗೆ ಈ ಮೇಳ ಉದ್ಯೋಗ ನೀಡಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ವಾದ್ಯದೊಂದಿಗೆ ದೊಡ್ಡ ಶಬ್ದ ಎಬ್ಬಿಸಿ ನರ್ತನಕ್ಕೆ ತೊಡಗಿದ ನಾಗ ಸಾಧು. ಸುಮಾರು 570 ಕಿ.ಮೀ ದೂರದ ನೀರಿನ ಪೈಪ್ ಲೈನ್, 800 ಕಿ.ಮೀ ದೂರದ ಎಲೆಕ್ಟ್ರಿಕ್ ವೈರುಗಳು ಹಾಗೂ 50 ಕ್ಕೂ ಅಧಿಕ ಸಬ್ ಸ್ಟೇಷನ್ ಗಳು ನಿರ್ಮಾಣಗೊಂಡಿದೆ. ತಾತ್ಕಾಲಿಕ ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಸಂಗಮದಲ್ಲಿ ಸಾಧು ಜಟೆ ಸ್ವಿಂಗ್ ಆಗಿದ್ದು ಹೀಗೆ..ನದಿ ತಟದಲ್ಲಿ ಸುಮಾರು 150 ಕಿ.ಮೀ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಪ್ಲೇಟುಗಳನ್ನು ಬಳಸಲಾಗಿದೆ. 18ಕ್ಕೂ ಅಧಿಕ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡಿದೆ,

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಎತ್ತ ನೋಡಿದರೂ ಜನವೋ ಜನ..4 ಗೋದಾಮುಗಳು, 125 ದಿನಸಿ ಪಡಿತರ ವಿತರಣೆ ಕೇಂದ್ರಗಳು ಮೇಳದ ಪ್ರಮುಖ ಸ್ಥಳಗಳಲ್ಲಿ ತಲೆ ಎತ್ತಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಭಕ್ತಾದಿಗಳು ತೃಪ್ತ ಮನಸ್ಸಿನಿಂದ ತಮ್ಮೂರಿಗೆ ವಾಪಸ್ ಹೊರಟ್ಟಿದ್ದು..ಸುಮಾರು 15-18 ಸೇತುವೆಗಳು, 35,000 ಶೌಚಾಲಯಗಳು ಎರಡು ತಿಂಗಳ ಮೇಳಕ್ಕಾಗಿ ವಿಶೇಷವಾಗಿ ನಿರ್ಮಿಸಲಾಗಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಅಭೂತ ಪೂರ್ವ ಭದ್ರತೆ, ಕಮ್ಯಾಂಡೊಗಳಿಗೆ ಫುಲ್ ಕೆಲ್ಸ.ಸುಮಾರು 115 ಸಿಸಿಟಿವಿ ಕೆಮರಾಗಳನ್ನು ಮೇಳದ ಸುತ್ತಮುತ್ತ ಅಳವಡಿಸಲಾಗಿದ್ದು, ಅಲಹಾಬಾದ್ ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಊರಿಗೆ ಹೊರಟ ಭಕ್ತರ ಮನಸ್ಸು ಅರಿತ ಸೈನ್ ಬೋರ್ಡ್ 30 ಳಿಹೊಸ ಪೊಲೀಸ್ ಸ್ಟೇಷನ್ ಗಳು, 30,000 ಅಧಿಕಾರಿಗಳು, 72 ತುಕಡಿ ಪ್ಯಾರಾ ಮಿಲಿಟರಿ ಪಡೆಗಳನ್ನು ಮೇಳಕ್ಕೆ ಭದ್ರತೆ ಒದಗಿಸಲು ಬಳಸಲಾಗುತ್ತಿದೆ.

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ಕುಂಭಮೇಳದಲ್ಲಿ ಮಿಂದು ಪಾಪ ಕಳೆದುಕೊಳ್ಳಿ

ತಾತ್ಕಾಲಿಕ ವಸತಿ ವ್ಯವಸ್ಥೆ, ಕೊರೆಯುವ ಚಳಿ ಇದ್ದರೂ ಜಗ್ಗದೆ ಕುಂಭಮೇಳದಲ್ಲಿ ನೆಲೆಸಿದ ಜನ ಸಾಗರ..ಸುಮಾರು 20 ನುರಿತ ವೈದ್ಯರು, 120 ಆಂಬ್ಯುಲೆನ್ಸ್ 24 X 7 ಕಾಲ ಕಾರ್ಯ ನಿರ್ವಹಿಸಲಿದೆ. 100 ಬೆಡ್ ಗಳ ಆಸ್ಪತ್ರೆಯನ್ನು ಮೇಳದ ಸಮೀಪದಲ್ಲೇ ಸ್ಥಾಪಿಸಲಾಗಿದೆ.

English summary
Wash sins in holy rivers! : Sizzling beauty of Indian Cinema Poonam Pandey takes holy dip in confluence of 3 rivers, Ganga-Yamuna-Saraswati in Maha Kumbha Mela -2013, Allahabad. The 2013 edition of the Maha Kumbh kicked off on Monday(Jan.14). The Mela will go on for 55 days and attracting many starlets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X