ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q2: ಇನ್ಫಿ, ಟಿಸಿಎಸ್ ಮೀರಿ ನಿಂತ ಎಚ್ ಸಿಎಲ್

By Mahesh
|
Google Oneindia Kannada News

HCL Tech Q2 net income surges; Anand Gupta elevated to CEO
ಬೆಂಗಳೂರು, ಜ,.17: ನೋಯ್ಡಾ ಮೂಲದ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ಸತತವಾಗಿ ಬದ್ಧವೈರಿ ಇನ್ಫೋಸಿಸ್ ಮೀರಿ ಬೆಳೆಯುತ್ತಿದೆ. ಗುರುವಾರ (ಜ.17) ಪ್ರಕಟಿಸಲಾದ ಎರಡನೇ ತ್ರೈಮಾಸಿಕ ವರದಿಯಂತೆ ನಿವ್ವಳ ಆದಾಯ ಶೇ 68.5 ರಷ್ಟು ಏರಿಕೆ ಕಂಡು 965 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 573 ಕೋಟಿ ರು ಆದಾಯ ಗಳಿಸಲಾಗಿತ್ತು.

ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟಾರೆ ಶೇ 19.6 ರಷ್ಟು ಆದಾಯ ಏರಿಕೆ ಸಾಧಿಸಲಾಗಿದ್ದು 6,274 ಕೋಟಿ ಗಳಿಕೆಯಾಗಿದೆ. 2011ರಲ್ಲಿ ಇದೇ ಅವಧಿಯಲ್ಲಿ 5,245 ಕೋಟಿ ಬಂದಿತ್ತು.

ಇದೇ ಖುಷಿಯಲ್ಲಿ ಎಚ್ ಸಿಎಲ್ ಸಂಸ್ಥೆ 2 ರು ಪ್ರತಿ ಷೇರಿನಂತೆ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಸತತವಾಗಿ 40 ನೇ ತ್ರೈಮಾಸಿಕದಲ್ಲಿ ಡಿವಿಡೆಂಡ್ ನೀಡುವ ಮೂಲಕ ಭರ್ಜರಿ ಸಾಧನೆ ಮಾಡಿದೆ.

ಗುರುವಾರ(ಜ.17) ಬಿಎಸ್ ಇನಲ್ಲಿ ಎಚ್ ಸಿಎಲ್ ಕಂಪನಿ ಷೇರುಗಳು ಮಧ್ಯಾಹ್ನ 12.05 ಗಂಟೆಗೆ 708.25 ರು ನಂತೆ ಶೇ 5.04ರಷ್ಟು ಏರಿತ್ತು. ಇದೇ ವೇಳೆ ಎನ್ಎಸ್ಇನಲ್ಲಿ 710.55 ರು.ನಂತೆ ಶೇ 5.45ರಷ್ಟು ಮೇಲಕ್ಕೇರಿತ್ತು.

ಈ ನಡುವೆ ಆನಂದ್ ಗುಪ್ತ ಅವರಿಗೆ ಬಡ್ತಿ ನೀಡಿ, ಕಂಪನಿಯ ನೂತನ ಸಿಇಒ ಎಂದು ಘೋಷಿಸಲಾಗಿದೆ. ವಿನೀತ್ ನಾಯರ್ ಅವರು ಕಂಪನಿಯ ಉಪಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಎಚ್ ಸಿಎಲ್ ಪ್ರಕಟಿಸಿದೆ.

2013ನೇ ಸಾಲಿನ Q1 ತ್ರೈಮಾಸಿಕದಲ್ಲಿ ಎಚ್ ಸಿಎಲ್ ನ PAT ಶೇ 3.6 ರಂತೆ 885 ಕೋಟಿ ರು ಗೆ ಏರಿದೆ. ವರ್ಷದಿಂದ ವರ್ಷದ ಲೆಕ್ಕದಲ್ಲಿ ಶೇ 78ರಷ್ಟು ಏರಿಕೆ ಕಂಡಿತ್ತು.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಕಳೆದ ತ್ರೈಮಾಸಿಕದಲ್ಲಿ ಟಾಪ್ ಮೂರು ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ತ್ರೈಮಾಸಿಕ ಗಳಿಕೆಯನ್ನು ಮೀರಿಸಿ ಬೆಳೆದಿದೆ.

Xerox ಕಾರ್ಪೊರೇಷನ್ ಹಾಗೂ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ Inc ನಂಥ ಗ್ರಾಹಕರನ್ನು ಹೊಂದಿರುವ ಎಚ್ ಸಿಎಲ್ ಗೆ ಇನ್ಫೋಸಿಸ್ ಸಂಸ್ಥೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.

100 ಬಿಲಿಯನ್ ಡಾಲರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಇನ್ಫೋಸಿಸ್ ನ back office ಸೇವಾ ವಿಭಾಗದ ಆದಾಯ ಮುಖ್ಯವಾಗಿ ಅಮೆರಿಕ ಹಾಗೂ ಯುರೋಪ್ ಕ್ಲೈಂಟ್ ಗಳ ಮೇಲೆ ಅವಲಂಬಿತವಾಗಿದೆ.

ಜಾಗತಿಕವಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟ ಪರಿಣಾಮ ಹಾಗೂ ಹೆಚ್ಚಾದ ಪ್ರತಿಸ್ಪರ್ಧೆಯಿಂದ ಇನ್ಫೋಸಿಸ್ ತತ್ತರಿಸಿದೆ. ಇನ್ನೊಂದೆಡೆ ಆಕ್ಸೆಂಚರ್ ಕೂಡಾ ಗರಿ ಬಿಚ್ಚಿ ಮೇಲೆದ್ದಿದೆ. ಡಾಲರ್ ಮಾರಾಟ ಪ್ರಗತಿಯಲ್ಲಿ ತೀವ್ರ ಕುಸಿತ ಕಂಡ ಇನ್ಫೋಸಿಸ್ ದುಃಸ್ಥಿತಿ ಲಾಭ ನೇರವಾಗಿ ಎಚ್ ಸಿಎಲ್ ಕಂಪನಿ ಪಡೆದಿದೆ.

ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ಎಚ್ ಸಿಎಲ್ ಟೆಕ್ನಾಲಜೀಸ್ ನ ಒಟ್ಟು ಉದ್ಯೋಗಿಗಳ ಸಂಖ್ಯೆ 85,194 ನಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 83,076 ನಷ್ಟಿತ್ತು. ಸತತವಾಗಿ 5 ತ್ರೈಮಾಸಿಕದಲ್ಲಿ ನಿವ್ವಳ ಗಳಿಕೆ ಸರಾಸರಿಯಲ್ಲಿ ಶೇ 15.4 ರಷ್ಟು ಹೆಚ್ಚಳ ಕಂಡಿರುವುದು ಎಲ್ಲಾ ಉದ್ಯೋಗಿಗಳ ಪರಿಶ್ರಮದ ಫಲ ಎಂದು ಸಂಸ್ಥೆಯ ಉಪಾಧ್ಯಕ್ಷ ವಿನೀತ್ ನಾಯರ್ ಹೇಳಿದ್ದಾರೆ.

English summary
HCL Technologies has reported a stellar financial performance for Q2 ending December 31, 2012, with revenue at Rs 6,274 crores; up 19.6% YoY & 3.0% sequentially and net income at Rs 965 crores; up 68.5% YoY. The company has surprised on all parameters including revenues, margins and net income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X