ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗಮ, ಮಂಡಳಿಗೆ ಹೊಸಬರು, ಬಿಜೆಪಿ ಹೊಸ ದಾಳ

By Mahesh
|
Google Oneindia Kannada News

GOK appoints new directors for board and corporation
ಬೆಂಗಳೂರು, ಜ.16: ಬಿಜೆಪಿ vs ಕೆಜೆಪಿ ಪಗಡೆಯಾಟದಲ್ಲಿ ತಡವಾಗಿಯಾದರೂ ಬಿಜೆಪಿ ನಿರೀಕ್ಷಿತವಾಗಿ ತನ್ನ ದಾಳವನ್ನು ಉರುಳಿಸಿದೆ. ಪದೇ ಪದೇ ಮುಂದೂಡಲ್ಪಟ್ಟಿದ್ದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬುಧವಾರ(ಜ.16) ಚಾಲನೆ ನೀಡಿದ್ದಾರೆ.

ಬಿಜೆಪಿ ಸಿದ್ಧಾಂತಕ್ಕೆ ಬಲಿ ಕೊಟ್ಟು ಕೆಜೆಪಿಗೆ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಸರ್ಕಾರ ಬಿದ್ದರೂ ಚಿಂತೆಯಿಲ್ಲ ಎಂದು ದೆಹಲಿ ನಾಯಕರು ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರಿಗೆ ಹೇಳಿದ್ದರು.

ಅದರಂತೆ ತಕ್ಷಣಕ್ಕೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನದಲ್ಲಿ ಭಾರಿ ಬದಲಾವಣೆ ಮಾಡಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದರು. ಆದರೆ, ಕೆಲ ಅಧ್ಯಕ್ಷರ ನೇಮಕಾತಿಯಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಪಟ್ಟಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.

ಮೊದಲ ಹಂತದಲ್ಲಿ 16 ಜನ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಲಾಗಿದೆ, ಪಟ್ಟಿ ಇಂತಿದೆ:
* ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ: ಮಹಾಂತೇಶ್ ಗೌಡ ಪಾಟೀಲ್
* ಕಾಡಾ ಮಲಪ್ರಭಾ ನಿಗಮ: ಅಡಿವೆಪ್ಪ
* ಕೈಗಾರಿಕಾ ಅಭಿವೃದ್ಧಿ ಮಂಡಳಿ : ಜಿಎಂ ಸುರೇಶ್
* ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ : ಪದ್ಮಕರ್ ಪಾಟೀಲ್
* ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ: ಮೊಹಿಸಿನ್
* ಪ್ರೊ. ನಂಜುಡಪ್ಪ ವರದಿ : ತ್ರಿವಿಕ್ರಮ ಜೋಶಿ
* ಈಶಾನ್ಯ ಸಾರಿಗೆ: ಶಿವಾನಂದ
* ಎನ್ ಜಿ ಇಎಫ್, ಹುಬ್ಬಳ್ಳಿ: ರಂಗಾಬದ್ದಿ
* ಆಹಾರ ನಾಗರಿಕ: ಪ್ರಕಾಶ್ ಖಂಡ್ರೆ
* ಕೈಮಗ್ಗ ಅಭಿವೃದ್ಧಿ ಮಂಡಳಿ: ರಾಜಶೇಖರ್ ಶೀಲವಂತ
* ಖಾದಿ ಅಭಿವೃದ್ಧಿ ಮಂಡಳಿ: ಉಮೇಶ್ ಬಂದೂವಾಡಕರ್
* ವಾಯುವ್ಯ ಸಾರಿಗೆ ಸಂಸ್ಥೆ: ಕರಿಗೌಡರ್
* ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಅಶೋಕ್ ಗಸ್ತಿ
* ಕಾಡಾ ಭದ್ರಾ: ಗಿರೀಶ್ ಪಾಟೀಲ್
* ಕಾಡಾ ತುಂಗಭದ್ರಾ: ಗಿರಿಗೌಡ
* ಇಂಧನ ಅಭಿವೃದ್ಧಿ ಮಂಡಳಿ: ಷಣ್ಮುಖ ಗುರಿಕಾರ್

ಸರಿ ಸುಮಾರು 30ಕ್ಕೂ ಅಧಿಕ ನಿಗಮ ಮಂಡಳಿ ಅಧ್ಯಕ್ಷರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಲಭ್ಯ ಮಾಹಿತಿ ಪ್ರಕಾರ ಈ ಕೆಳಗೆ ಕಂಡವರ ಕುರ್ಚಿ ಅಲುಗಾಡುತ್ತಿದೆ.

ಶಾಸಕ ಬಿ.ಪಿ ಹರೀಶ್, ಎಂ.ಡಿ ಲಕ್ಷ್ಮಿ ನಾರಾಯಣ, ಚಿಕ್ಕನಗೌಡರ್, ರುದ್ರೇಶ್, ಮರಿಸ್ವಾಮಿ, ಅಶೋಕ್ ಕಾಟ್ವೆ, ರಾಮಚಂದ್ರ, ಶಂಕರ ಗೌಡ ಪಾಟೀಲ, ಎ.ಆರ್ ಕೃಷ್ಣಮೂರ್ತಿ, ಲಿಂಬಣ್ಣನವರ್, ತಾರಾ ಅನುರಾಧಾ, ವಿಜಯ್ ಕುಮಾರ್, ನಾರಾಯಣ ಸ್ವಾಮಿ, ಅಶ್ವಥ್ ಸೇರಿದಂತೆ 30 ಜನ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

English summary
Government of Karnataka appoints new directors for 16 board and corporations, CM Jagadish Shettar released the new set of board directors list. Earlier rumours spread about BJP likely to give gate pass to board and corporation chiefs who are supporting Yeddyurappa's Karnataka Janata Paksha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X