ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮವರ ರುಂಡ ತನ್ನಿ,ಇಲ್ಲವೇ 10 ಪಾಕಿಗಳ ತಲೆ ತನ್ನಿ

|
Google Oneindia Kannada News

National Security Advisor Menon meet Sushma Swaraj to brief LoC Tension
ನವದೆಹಲಿ, ಜ 16: ಗಡಿಯಲ್ಲಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ನಡೆಸಿದ ಪಾಕ್ ಪಡೆಗಳ ಉದ್ದಟತನ ಧಿಕ್ಕರಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಲೋಕಸಭೆಯ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ' ನಮ್ಮ ಇಬ್ಬರು ಯೋಧರ ರುಂಡ ತನ್ನಿ ಇಲ್ಲಾಂದ್ರೆ 10 ಪಾಕಿಸ್ತಾನಿಗಳ ತಲೆ ತನ್ನಿ' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಾಕ್ ಸೈನಿಕರು ಹತ್ಯೆಗೈದಿರುವ ಇಬ್ಬರು ಯೋಧರ ಪೈಕಿ ಹೇಮರಾಜ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಿದ ನಂತರ ಮಾತನಾಡುತ್ತಿದ್ದ ಸುಷ್ಮಾ, ನಮ್ಮ ಇಬ್ಬರು ಯೋಧರ ರುಂಡವನ್ನು ಪಾಕ್ ಹಿಂದಿರುಗಿಸದಿದ್ದರೆ ಆ ದೇಶದ 10 ಜನರ ತಲೆ ತನ್ನಿ ಎಂದು ನಾನು ಆಕ್ರೋಶ ವ್ಯಕ್ತ ಪಡಿಸಿದರೆ ತಪ್ಪೇನಿದೆ ಎಂದಿದ್ದಾರೆ.

ಸುಷ್ಮಾ ಸ್ವರಾಜ್ ಹೇಳಿಕೆಯ ಗಂಭೀರತೆ ಅರಿತ ಕೇಂದ್ರ ಸರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಅವರನ್ನು ಕೂಡಲೇ ಬಿಜೆಪಿ ನಾಯಕರಾದ ಅರುಣ್‌ ಜೆಟ್ಲೆ ಮತ್ತು ಸುಷ್ಮಾ ಸ್ವರಾಜ್‌ ಅವರ ನಿವಾಸಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ವಿವರಿಸಿದೆ.

ಮೆನನ್‌ ಗಡಿ ನಿಯಂತ್ರಣ ರೇಖೆಯಲ್ಲಿ ವಾಸ್ತವ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ಸುಷ್ಮಾ ಮತ್ತು ಜೆಟ್ಲೆಗೆ ನೀಡಿದ್ದಾರೆ. ವಿಪಕ್ಷ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರ ಗಡಿ ವಿಚಾರದಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವುದಿಲ್ಲ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ನೀಡಿದ ಆಶ್ವಾಸನೆಯನ್ನು ಮೆನನ್ ಈ ಇಬ್ಬರು ನಾಯಕರುಗಳಿಗೆ ವಿವರಿಸಿದ್ದಾರೆ.

ಪ್ರತಿಪಕ್ಷಗಳಿಗೆ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತೇವೆ. ದಯವಿಟ್ಟು ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನಮೋಹನ್‌ ಸಿಂಗ್‌ ಮಂಗಳವಾರ (ಜ15) ವಿನಂತಿಸಿಕೊಂಡಿದ್ದರು.

ತಿರುಗೇಟು ನೀಡಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ ಎಂದು ಭಾರತದ ಮಿಲಿಟರಿ ಮುಖ್ಯಸ್ಥರು ಪಾಕಿಸ್ಥಾನಕ್ಕೆ ಗಂಭೀರವಾದ ಎಚ್ಚರಿಕೆ ನೀಡಿದ ಬೆನ್ನಲ್ಲೆ ಮನಮೋಹನ್‌ ಸಿಂಗ್‌ ವಿಪಕ್ಷ ನಾಯಕರನ್ನು ಸಂಪರ್ಕಿಸಿ ಒಮ್ಮತ ಮೂಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಭಾರತದ ಸತತ ಎಚ್ಚರಿಕೆಯ ನಡುವೆಯೂ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿದೆ. ಕಾಶ್ಮೀರ ಗಡಿಯಲ್ಲಿ ಭಾರತದ ಯೋಧರು ಒಬ್ಬ ಪಾಕ್ ಯೋಧನನ್ನು ಕೊಂದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

English summary
National Security Advisor Shiv Shankar Menon meets opposition leaders Arun Jaitley and Sushma Swaraj to brief the situation at the Line of Control (LoC) after Swaraj statement 'if India cannot recover the head of two Indian soldiers, it should at least bring back 10 Pakistani heads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X