• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಸಿಎಸ್ : Q3ನಲ್ಲಿ ನಿರೀಕ್ಷೆಗೂ ಮೀರಿದ ಭರ್ಜರಿ ಲಾಭ

By Mahesh
|

ಬೆಂಗಳೂರು, ಜ.15: 10 ಬಿಲಿಯನ್ ಡಾಲರ್ ಆದಾಯ ಗಳಿಸಿದ ಪ್ರಪ್ರಥಮ ಭಾರತೀಯ ಸಾಫ್ಟ್ ವೇರ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಫಲಿತಾಂಶ ಹೊರ ಹಾಕಿದೆ.

ಜಾಗತಿಕವಾಗಿ ನಾಲ್ಕನೇ ಅತಿ ಮೌಲ್ಯ ಹೊಂದಿರುವ ಐಟಿ ಕಂಪನಿಯಾಗಿ ಹೊರಹೊಮ್ಮಿರುವ ಟಿಸಿಎಸ್, ತನ್ನ Q3ನಲ್ಲಿ ನಿರೀಕ್ಷೆಗೂ ಮೀರಿದ ಲಾಭ ಗಳಿಸಿದೆ. ಒಟ್ಟಾರೆ 3,552 ಕೋಟಿ ರುನಂತೆ ಶೇ 26.7 ರಷ್ಟು ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 2,803 ಕೋಟಿ ರು ಗಳಿಸಿತ್ತು. ಮೂರನೇ ತ್ರೈಮಾಸಿಕದಲ್ಲಿ ಟಿಸಿಎಸ್ ಆದಾಯ ಶೇ 21.7ರಷ್ಟು ಏರಿಕೆಯಾಗಿ 16,070 ಕೋಟಿ ರು.ಗೇರಿದೆ. ನಿರ್ವಹಣಾ ಆದಾಯ ಶೇ 13.4 ರಷ್ಟು ಏರಿಕೆಗೊಂಡು 4,381 ಕೋಟಿ ರು ಬಂದಿದೆ.

ಉತ್ತಮ ಗುಣಮಟ್ಟದ ಕಾರ್ಯ ನಿರ್ವಹಣೆಯಿಂದ ಭರ್ಜರಿ ಫಲಿತಾಅಂಶ ಹೊರ ಬಂದಿದೆ. ನಮ್ಮ ಗುರಿ ಉತ್ತಮ ಉತ್ಪಾದನೆ ಹಾಗೂ ಸೃಜನಶೀಲತೆ. ನಮ್ಮ ಗ್ರಾಹಕರು ಇಟ್ಟಿರುವ ಭರವಸೆಯನ್ನು 2013ರಲ್ಲೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಸಿಇಒ, ವ್ಯವಸ್ಥಾಪಕ ನಿರ್ದೇಶಕ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಟಿಸಿಎಸ್ ಕಾರ್ಯಕಾರಿ ನಿರ್ದೇಶಕ, ಮುಖ್ಯ ಕಾರ್ಯ ಆರ್ಥಿಕ ಅಧಿಕಾರಿ ಎಸ್ ಮಹಾಲಿಂಗಂ ಅವರು ಮಾತನಾಡಿ, ಯುಎಸ್ ವ್ಯವಹಾರ ಶೇ 2.5 ರಷ್ಟು, ಯುಕೆನಲ್ಲಿ ಶೇ 5.2ರಷ್ಟು, ಲ್ಯಾಟಿನ್ ಅಮೆರಿಕ ಭಾಗದಲ್ಲಿ ಶೇ 11ರಷ್ಟು ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ಯುರೋಪ್ ನಲ್ಲಿ ಉತ್ತಮ ಫಲಿತಾಂಶ ಹೊರ ಬರುವ ನಿರೀಕ್ಷೆಯಿದೆ ಎಂದರು.

ತ್ರೈಮಾಸಿಕದ ಕೊನೆಗೆ ಟಿಸಿಎಸ್ ನ ಉದ್ಯೋಗಿಗಳ ಸಂಖ್ಯೆ 2,63,637 ಇದರಲ್ಲಿ 17,145 ಉದ್ಯೋಗಿಗಳು(gross) + 9,561 ಉದ್ಯೋಗಿ(net addition ) ಗಳು ಸೇರ್ಪಡೆಗೊಂಡಿದ್ದಾರೆ. attrition ದರ ಶೇ 11.2ರಷ್ಟಿತ್ತು. ಇದರಲ್ಲಿ ಐಟಿ ಸರ್ವೀಸಸ್ ಶೇ 9.8ರಷ್ಟಿದ್ದಿದ್ದು ವಿಶೇಷ. ನಾವು 49,600 ವೃತ್ತಿಪರರನ್ನು ಮೊದಲ ಮೂರು ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಂಡೆವು ನಮ್ಮ ಗುರಿ 50,000 ನೇಮಕಾತಿ ಎಂದು ಮಾನವ ಸಂಪನ್ಮೂಲ ಮುಖ್ಯಸ್ಥ(ಜಾಗತಿಕ) ಅಜಯ್ ಮುಖರ್ಜಿ ಹೇಳಿದ್ದಾರೆ.

ಜಾಗತಿಕವಾಗಿ ಐಬಿಎಂ, ಐಬಿಎಂ, ಎಚ್ ಪಿ ಹಾಗೂ ಆಕ್ಸೆಂಚರ್ ನಂತರ ಟಿಸಿಎಸ್ ನಿಂತಿದೆ. ನಂತರದ ಸ್ಥಾನದಲ್ಲಿ ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಇದೆ. ಕಾಂಗ್ನಿಜೆಂಟ್ 9 ಹಾಗೂ ವಿಪ್ರೋ 10 ಸ್ಥಾನ ಪಡೆದಿದೆ.

ಮಂಗಳವಾರ (ಜ.15) ಟಿಸಿಎಸ್ ಷೇರುಗಳು ಬಿಎಸ್ ಇನಲ್ಲಿ ಮಧ್ಯಾಹ್ನ 12 ರ ವೇಳೆಗೆ 1,362ರು. ನಂತೆ ಶೇ 2.08 ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆಯಲ್ಲಿ ಎನ್ ಎಸ್ ಇನಲ್ಲಿ 1362.45ರು ನಂತೆ ಶೇ 2.09 ರಷ್ಟು ಏರಿದೆ. intra day ಟ್ರೇಡಿಂಗ್ ನಲ್ಲಿ 1,400 ರು ಮುಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Consultancy Services posted a 26.65 per cent rise in net profit at Rs 3,550 crore, beating street expectations in the seasonally weak third quarter. The country’s largest software exporter posted a net profit of Rs 2,803 crore for the same quarter of the previous financial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more