ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿಚುಂಚನಗಿರಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ

|
Google Oneindia Kannada News

Balagangadhara Swamiji Last rites Chunchanagiri Math
ಬೆಂಗಳೂರು, ಜ 14: ಭಾನುವಾರ (ಜ 13) ಕಾಲೈಕ್ಯರಾದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಅಂತಿಮ ಸಂಸ್ಕಾರ ಇಂದು (ಜ 14) ಸಂಜೆ 4.30 ರಿಂದ 5.45ಕ್ಕೆ ನಾಗಮಂಗಲ ತಾಲೂಕು ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯಲಿದೆ.

ಕ್ಷೇತ್ರದ ಕಾಲಭೈರವೇಶ್ವರ ದೇಗುಲದ ಅನುಭವ ಮಂಟಪದಲ್ಲಿ 'ನಾಥ' ಸಂಪ್ರದಾಯದ ಪ್ರಕಾರ ಕಿರಿಯ ಸ್ವಾಮೀಜಿ ನಿರ್ಮಲಾನಂದ ಶ್ರೀಗಳು ಧಾರ್ಮಿಕ ವಿಧಿವಿಧಾನ ಪೂರೈಸಲಿದ್ದಾರೆ. ಶ್ರೀಗಳ ಕಳೇಬರವನ್ನು ಮಣ್ಣಿನಲ್ಲಿ ಹೂಳಲಾಗುವುದು.

ಬೆಂಗಳೂರು ವಿಜಯನಗರದ ಶಾಖಾ ಮಠದಲ್ಲಿ ಇಂದು ಬೆಳಗ್ಗೆ 10ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. 10.15ಕ್ಕೆ ಮೆರವಣಿಗೆ ಮೂಲಕ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ವಿಜಯನಗರ ಮಠ - ಡಾ. ರಾಜಕುಮಾರ್ ಸಮಾಧಿ - ಹೇಸರಘಟ್ಟ ಸರ್ಕಲ್ - ನೆಲಮಂಗಲ ಮೇಲ್ಸೇತುವೆ - -ಕುಣಿಗಲ್ - ಯಡಿಯೂರು - ಬೆಳ್ಳೂರು ಕ್ರಾಸ್ ಮೂಲಕ ಆದಿಚುಂಚಂಚನಗಿರಿ ಮಠಕ್ಕೆ ಸಾಗಲಿದೆ.

ಪಾರ್ಥಿವ ಶರೀರದ ಮೆರವಣಿಗೆಯ ತಯಾರಿಯನ್ನು ಉಪಮುಖ್ಯಮಂತ್ರಿ ಅಶೋಕ್ ಮತ್ತು ಬೆಂಗಳೂರು ಪೋಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಖುದ್ದು ಪರಿಶೀಲಿಸಿದ್ದಾರೆ.

English summary
Last rites of Balagangadharanatha Swamiji starts at 4.30Pm (15.1.13) at Addi Chunchanagiri Math, Nagamangala Tq
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X