ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಕುಂಭಮೇಳ. ಪವಿತ್ರ ಸಂಗಮದಲ್ಲಿ ಮುಳುಗು

By Mahesh
|
Google Oneindia Kannada News

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ(ಜ.14)ರಂದು 2013ನೇ ಸಾಲಿನ ಮಹಾಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. 2001ರ ನಂತರ ಮಹಾ ಕುಂಭಮೇಳ ಸಂಭವಿಸುತ್ತಿದ್ದು ಕೊರೆಯುವ ಚಳಿಯಲ್ಲೂ ಭಕ್ತಾದಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ.

ಸುಮಾರು 55 ದಿನಗಳ ಕಾಲ ನಡೆಯುವ ಈ ಮಹಾಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾಗಿದೆ. ಸುಮಾರು 100 ಮಿಲಿಯನ್ ಗೂ ಅಧಿಕ ಜನರು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಾರ್ಚ್ 10ರಂದು ಮಹಾ ಶಿವರಾತ್ರಿ ದಿನ ಮೇಳ ಸಂಪನ್ನಗೊಳ್ಳಲಿದೆ.

ಅಲಹಾಬಾದಿನಲ್ಲಿ ನಡೆಯುತ್ತಿರುವುದು ಪೂರ್ಣ ಮಹಾ ಕುಂಭಮೇಳವಾಗಿದೆ. ಅರ್ಧ ಕುಂಭಮೇಳಗಳು ಪ್ರತಿ 6 ವರ್ಷಕ್ಕೊಮ್ಮೆ ಹರಿದ್ವಾರ, ಉಜ್ಜಯಿನಿ, ನಾಸಿಕ್ ನಲ್ಲಿ ನಡೆಯುತ್ತದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳ ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರ ಮಾಡಿಕೊಳ್ಳುವ ನಂಬಿಕೆಯನ್ನು ಹೊತ್ತು ಅಸಂಖ್ಯಾತ ಭಕ್ತಾದಿಗಳು ಧಾರ್ಮಿಕ ಸ್ಥಳಗಳತ್ತ ಧಾವಿಸುತ್ತಿದ್ದಾರೆ.

ಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳುಮೇಳದಲ್ಲಿನ ಭಾವಪರವಶಗೊಳಿಸುವ ಚಿತ್ರಗಳು

ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ

 ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ ಮಹಾ ಕುಂಭಮೇಳ ಯಶಸ್ಸಿಗೆ 'ಕ್ಲೀನರ್ಸ್' ಕಾರಣ

ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?ಕುಂಭಮೇಳ: ಪವಿತ್ರ ಮುಳುಗು ಹಾಕಲು ಯಾವ ದಿನ ಶುಭ?

ಕುಂಭಮೇಳದಲ್ಲಿ ಜನ ಜೀವನ ಲೆನ್ಸ್ ನೋಟಕುಂಭಮೇಳದಲ್ಲಿ ಜನ ಜೀವನ ಲೆನ್ಸ್ ನೋಟ

ಸೋಮವಾರ (ಜ.14) ಸಾಧು ಸಂತರು, ನಂಗಾ ಸಾಧುಗಳು ಮೊದಲಿಗೆ ಪವಿತ್ರ ನದಿಯಲ್ಲಿ ಮಿಂದೇಳುವ ಮೂಲಕ ಮಹಾ ಕುಂಭಮೇಳಕ್ಕೆ ಚಾಲನೆ ನೀಡಿದರು. ನಂತರ ಭಕ್ತಾದಿಗಳು ನದಿಗಳತ್ತ ತೆರಳುತ್ತಿದ್ದಾರೆ. ಸುಮಾರು 2,50,000 ಜನ ಇಂದಿನ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಫೆ.15ರಂದು ಸುಮಾರು 20 ಮಿಲಿಯನ್ ಜನ ಭಾಗವಹಿಸುವ ನಿರೀಕ್ಷೆಯಿದೆ.

ಸುಮಾರು 12,000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು, 14 ವೈದ್ಯಕೀಯ ಕೇಂದ್ರಗಳು, 22,000 ಬೀದಿ ದೀಪಗಳು, 150 ಕಿ.ಮೀ ತಾತ್ಕಾಲಿಕ ರಸ್ತೆಗಳು, 18 ಸೇತುವೆಗಳು,35,000 ಶೌಚಾಲಯಗಳು ನಿರ್ಮಾಣಗೊಂಡಿದೆ.

ಅಲಹಾಬಾದಿನಿಂದ ವಿವಿಧೆಡೆಗೆ ಸುಮಾರು 7,000ಕ್ಕೂ ಅಧಿಕ ಬಸ್ ಗಳು, ವಿಶೇಷ ರೈಲುಗಳು ಸಂಚರಿಸುತ್ತಿದೆ. ಗಂಗಾ ನದಿಗೆ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ತಡೆಗಟ್ಟಲು ದೊಡ್ಡ ಪಡೆಯೇ ಸಿದ್ಧವಾಗಿದ್ದು, ಪವಿತ್ರ ನದಿಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

12 ವರ್ಷಕ್ಕೊಮ್ಮೆ ಸಂಭವಿಸುವ ಈ ಮಹಾನ್ ಕುಂಭ ಮೇಳದ ವಿಶೇಷಗಳು ದೃಶ್ಯಾವಳಿಯಲ್ಲಿ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಲಿದ್ದಾರೆ.

ಮಹಾ ಕುಂಭಮೇಳ 2013 ದೃಶ್ಯಾವಳಿ

ಮಹಾ ಕುಂಭಮೇಳ 2013 ದೃಶ್ಯಾವಳಿ

2001ರಲ್ಲಿ ಬಳಕೆಯಾದ ಭೂ ವಿಸ್ತೀರ್ಣದ ಎರಡು ಪಟ್ಟು ಜಾಗ ಸುಮಾರು 50.83 ಚದರ ಕಿಮೀ ಪ್ರದೇಶದಲ್ಲಿ ಮೇಳ ಜರುಗಲಿದೆ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

100 ಮಿಲಿಯನ್ ಗೂ ಅಧಿಕ ಜನ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ. ಮಕರ ಸಂಕ್ರಾಂತಿ ಹಾಗೂ ಫೆ.10ರ ಮೌನಿ ಅಮಾವಾಸ್ಯೆ ದಿನದಂದು ಕೋಟಿಗಟ್ಟಲೆ ಜನ ಭಾಗವಹಿಸಲಿದ್ದಾರೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

1 ಮಿಲಿಯನ್ ವಿದೇಶಿ ಪ್ರವಾಸಿಗರು ಆಸಕ್ತಿಯಿಂದ ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳದ ಒಟ್ಟಾರೆ ಬಜೆಟ್ 1,200 ಕೋಟಿ ರು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 200 ಕೋಟಿ ರು ಅಧಿಕವಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಉತ್ತರ ಪ್ರದೇಶ ಸರ್ಕಾರ ಈ ಮಹಾನ್ ಮೇಳದಿಂದ ಸುಮಾರು 12,000 ಕೋಟಿ ರು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ. ಸುಮಾರು 6 ಲಕ್ಷ ಮಂದಿಗೆ ಈ ಮೇಳ ಉದ್ಯೋಗ ನೀಡಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಸುಮಾರು 570 ಕಿ.ಮೀ ದೂರದ ನೀರಿನ ಪೈಪ್ ಲೈನ್, 800 ಕಿ.ಮೀ ದೂರದ ಎಲೆಕ್ಟ್ರಿಕ್ ವೈರುಗಳು ಹಾಗೂ 50 ಕ್ಕೂ ಅಧಿಕ ಸಬ್ ಸ್ಟೇಷನ್ ಗಳು ನಿರ್ಮಾಣಗೊಂಡಿದೆ. ತಾತ್ಕಾಲಿಕ ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ನದಿ ತಟದಲ್ಲಿ ಸುಮಾರು 150 ಕಿ.ಮೀ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಪ್ಲೇಟುಗಳನ್ನು ಬಳಸಲಾಗಿದೆ. 18ಕ್ಕೂ ಅಧಿಕ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡಿದೆ,

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

4 ಗೋದಾಮುಗಳು, 125 ದಿನಸಿ ಪಡಿತರ ವಿತರಣೆ ಕೇಂದ್ರಗಳು ಮೇಳದ ಪ್ರಮುಖ ಸ್ಥಳಗಳಲ್ಲಿ ತಲೆ ಎತ್ತಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಸುಮಾರು 15-18 ಸೇತುವೆಗಳು, 35,000 ಶೌಚಾಲಯಗಳು ಎರಡು ತಿಂಗಳ ಮೇಳಕ್ಕಾಗಿ ವಿಶೇಷವಾಗಿ ನಿರ್ಮಿಸಲಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಸುಮಾರು 115 ಸಿಸಿಟಿವಿ ಕೆಮರಾಗಳನ್ನು ಮೇಳದ ಸುತ್ತಮುತ್ತ ಅಳವಡಿಸಲಾಗಿದ್ದು, ಅಲಹಾಬಾದ್ ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

30 ಹೊಸ ಪೊಲೀಸ್ ಸ್ಟೇಷನ್ ಗಳು, 30,000 ಅಧಿಕಾರಿಗಳು, 72 ತುಕಡಿ ಪ್ಯಾರಾ ಮಿಲಿಟರಿ ಪಡೆಗಳನ್ನು ಮೇಳಕ್ಕೆ ಭದ್ರತೆ ಒದಗಿಸಲು ಬಳಸಲಾಗುತ್ತಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಸುಮಾರು 20 ನುರಿತ ವೈದ್ಯರು, 120 ಆಂಬ್ಯುಲೆನ್ಸ್ 24 X 7 ಕಾಲ ಕಾರ್ಯ ನಿರ್ವಹಿಸಲಿದೆ. 100 ಬೆಡ್ ಗಳ ಆಸ್ಪತ್ರೆಯನ್ನು ಮೇಳದ ಸಮೀಪದಲ್ಲೇ ಸ್ಥಾಪಿಸಲಾಗಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಹಾಲಿವುಡ್ ನಟ ರಿಚರ್ಡ್ ಗೇರ್, ಮೈಕಲ್ ಡಗ್ಲಾಸ್, ಕ್ಯಾಥರೀನ್ ಜೆಟಾ ಜೋನ್ಸ್, ಆಧಾತ್ಮ ಗುರು ದಲಾಯಿ ಲಾಮಾ, ಯುಎಸ್ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಜಾನ್ ಹಗೆಲಿನ್ ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಶ್ವದೆಲ್ಲೆಡೆಯಿಂದ 2,500 ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಮೇಳದಲ್ಲಿ ಪಾಲ್ಗೊಳ್ಳಲಿದೆ.

ಮಹಾ ಕುಂಭಮೇಳ ದೃಶ್ಯಾವಳಿ

ಮಹಾ ಕುಂಭಮೇಳ ದೃಶ್ಯಾವಳಿ

ಪ್ರಮುಖ ಧಾರ್ಮಿಕ ಮುಖಂಡರ ಚಲನವಲನ ಭದ್ರತೆ ನಿಗಾವಹಿಸಲು ಜಿಪಿಎಸ್ ಬಳಸಲಾಗಿದೆ. ಇಸ್ರೋ, ದೂರ ಸಂವೇದಿ ಕೇಂದ್ರದ ಮೂಲಕ ಪ್ರತಿ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿದೆ. ಮೇಳದ ಪ್ರತಿ ಚಿತ್ರಗಳು ದಿನವಿಡೀ ಲಭ್ಯವಾಗಲಿದೆ.

English summary
The 2013 edition of the Maha Kumbh kicked off on Monday, on the auspicious occasion of Makar Sankranti. The previous Maha Kumbh was held in 2001. The Mela will go on for 55 days and will witness a congregation of 100 million people. Here are some of the high points of the biggest religious festival on the planet. The Mela will conclude on Maha Shivratri on March 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X