ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ್ರ ಕುಟುಂಬಸ್ಥರು ಆಸ್ತಿ ಘೋಷಿಸುವಾಗ ಹುಷಾರು

By Srinath
|
Google Oneindia Kannada News

deve-gowda-family-be-careful-assets-declaration-a-kheni
ಬೆಂಗಳೂರು, ಜ.12:ಹೊಳೆನರಸೀಪುರದ ಎಚ್ ಡಿ ದೇವೇಗೌಡ ಕುಟುಂಬದವರು ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ಆಸ್ತಿ ಘೋಷಣೆ ಮಾಡುವಾಗ ತುಸು ಕಚ್ಚೆಟ್ಟರ ವಹಿಸಿದರೆ ಒಳ್ಳೆಯದು. ಏಕೆಂದರೆ ಹಾಸನ ಜಿಲ್ಲೆಯಲ್ಲಿ ಕೇವಲ 3 ಎಕರೆ ಜಮೀನು ಹೊಂದಿದ್ದ ದೇವೇಗೌಡ ಕುಟುಂಬಕ್ಕೆ ಇಂದು ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ ಎಂಬುದು ಮರೆತುಹೋಗಿರಬಹುದು. ಹಾಗಾಗಿ ಚುನಾವಣೆ ಆಯೋಗದೆದುರು ಆಸ್ತಿ ಘೋಷಣೆ ಮಾಡುವಾಗ ಡಬಲ್ ಚೆಕ್ ಮಾಡುವುದು ಒಳಿತು.

ಇದೆಲ್ಲಾ ಯಾಕೆ ಹೇಳಬೇಕಾಗಿ ಬಂದಿದೆಯೆಂದರೆ ಗೌಡರ ಕುಟಂಬದ ಕಟ್ಟಾ ವಿರೋಧಿ, ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ನೈಸ್ ಅಶೋಕ್‌ ಖೇಣಿ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಗಳಿಸಿರುವ ಅಕ್ರಮ ಆಸ್ತಿಪಾಸ್ತಿ ವಿವರಗಳನ್ನು ಚುನಾವಣೆ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಹಳೆಯ ಖಾಸಗಿ ಬಸ್‌ ನಿಲ್ದಾಣದ ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಮಕ್ಕಳ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

'ಹಾಸನ ಜಿಲ್ಲೆಯಲ್ಲಿ ಕೇವಲ 3 ಎಕರೆ ಜಮೀನು ಹೊಂದಿದ್ದ ದೇವೇಗೌಡ ಮತ್ತು ಕುಟುಂಬದವರು ಸಾವಿರಾರು ಕೋಟಿ ರೂ.ಗಳ ಆಸ್ತಿ ಹಣ ಸಂಪಾದಿಸಿದ್ದು ಹೇಗೆ? ಇವರಲ್ಲಿ ಎಷ್ಟು ಅಕ್ರಮ ಆಸ್ತಿ ಇದೆ? ಎಂಬ ವಿವರ ದಾಖಲೆ ಸಮೇತ ನನ್ನ ಬಳಿ ಇದೆ ಎಂದಿದ್ದಾರೆ.

ಗಮನಾರ್ಹವೆಂದರೆ ಖೇಣಿ ಸಾಹೇಬರು ಈ ದಾಖಲೆಯನ್ನು ಕರ್ನಾಟಕ ಲೋಕಾಯುಕ್ತಕ್ಕೆ ಕೊಡುವುದಿಲ್ಲವಂತೆ. ಏಕೆಂದರೆ ದೇವೇಗೌಡರು ಮತ್ತು ಮಕ್ಕಳು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರುತ್ತಾರಂತೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಗೌಡ್ರ ಕುಟುಂಬಸ್ಥರು ಆಸ್ತಿ ವಿವರ ಘೋಷಿಸಲಿ. ಆಗ ಅವರ ಇನ್ನುಳಿದ ಆಸ್ತಿ ವಿವರವನ್ನು ಸುಪ್ರಿಂ ಕೋರ್ಟ್‌ಗೆ ನಾನು ಸಲ್ಲಿಸುತ್ತೇನೆ ಎಂದು ಬೆದರಿಸಿದ್ದಾರೆ.

English summary
HD Deve Gowda family should be careful in assets declaration during assembly elections says Ashok Kheni. Otherwise Kheni will be filing petition in Supreme Court about illeagal assets if the Gowda Family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X