ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150ರ ವಸಂತ: ಸ್ವಾಮಿ ವಿವೇಕಾನಂದರ 9 ಆಣಿಮುತ್ತು

By Srinath
|
Google Oneindia Kannada News

ಬೆಂಗಳೂರು: ನರೇಂದ್ರನಾಥ ದತ್ತ ಅಂದರೆ ಸ್ವಾಮಿ ವಿವೇಕಾನಂದರು 1863ರ ಜನವರಿ 13ರಂದು ಕೋಲ್ಕೊತ್ತಾದಲ್ಲಿ ಜನಿಸಿದರು. 64ನೇ ಗಣರಾಜ್ಯೋತ್ಸವ ನಿಮಿತ್ತ ರಾಜಧಾನಿ ಬೆಂಗಳೂರಿನ ಲಾಲ್‌ ಬಾಗ್‌ ನಲ್ಲಿ ಫ‌ಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ದಾರ್ಶನಿಕ ಸ್ವಾಮಿ ವಿವೇಕಾನಂದರ ಹೂ ಪ್ರತಿಮೆ ಅನಾವರಣಗೊಳ್ಳಲಿದೆ. ತನ್ಮೂಲಕ ರಾಜ್ಯ ಬಿಜೆಪಿ ಸರಕಾರವು ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ.

ದೇಶದಲ್ಲಿ ಇಂದು ಯುವಮನಸ್ಸುಗಳು ದಿಕ್ಕೆಟ್ಟು, ತಪ್ಪು ಮಾರ್ಗದಲ್ಲಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ವಿವೇಕಾನಂದರಂತಹ ದಾರ್ಶನಿಕರ ಜರೂರತ್ತು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ 9 ಆಣಿಮುತ್ತುಗಳು ಒನ್ಇಂಡಿಯಾ ಓದುಗರಿಗಾಗಿ ಇಲ್ಲಿದೆ:

ಏಳಿ, ಎದ್ದೇಳಿ, ಗುರಿಯತ್ತ ಸಾಗಿ

ಏಳಿ, ಎದ್ದೇಳಿ, ಗುರಿಯತ್ತ ಸಾಗಿ

ಏಳಿ, ಎದ್ದೇಳಿ ಮತ್ತು ಗುರಿ ತಲುಪುವವರೆಗೂ ನಿಲ್ಲದಿರಿ.

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.

ಜ್ಞಾನ ಮತ್ತು ಆವಿಷ್ಕಾರ

ಜ್ಞಾನ ಮತ್ತು ಆವಿಷ್ಕಾರ

ಜ್ಞಾನ ನಮ್ಮ ಮಧ್ಯೆ ಇರುವಂತಹುದೇ. ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು.

ಮನಸ್ಸಿನ ಮೇಲೆ ಹಿಡಿತ ಸಾಧಿಸಿ

ಮನಸ್ಸಿನ ಮೇಲೆ ಹಿಡಿತ ಸಾಧಿಸಿ

ಮನಸ್ಸಿನಂತೆ ಮಹಾದೇವ. ಅಂದರೆ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಬಿಡುತ್ತದೆ. ಆಗಲೇ ವಾಸ್ತವಿಕ, ಭೌತಿಕ ಮತ್ತು ಮಾನಸಿಕ ಪರಿವರ್ತನೆ ಕಂಡುಬರುವುದು.

ನೈತಿಕತೆಯಿಂದ ಉನ್ನತಿ

ನೈತಿಕತೆಯಿಂದ ಉನ್ನತಿ

ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.

ಜನ ನಿಮ್ಮನ್ನು ಸ್ಮರಿಸುವಂತಾಗಲಿ

ಜನ ನಿಮ್ಮನ್ನು ಸ್ಮರಿಸುವಂತಾಗಲಿ

ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ಯಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಗುರಿಯಾಗಲಿ.

ಯಾರ ಮುಂದೆಯೂ ತಲೆತಗ್ಗಿಸಬೇಡಿ

ಯಾರ ಮುಂದೆಯೂ ತಲೆತಗ್ಗಿಸಬೇಡಿ

ಯಾರ ಮುಂದೆಯೂ ತಲೆತಗ್ಗಿಸಬೇಡಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಿರಿ. ಭಗವಂತನನ್ನು ನಿಮ್ಮಲ್ಲೇ ಸಾಕ್ಷಾತ್ಕರಿಸಿಕೊಳ್ಳಿ.

ವಿಶ್ವವೇ ಒಂದು ವ್ಯಾಯಾಮಶಾಲೆ

ವಿಶ್ವವೇ ಒಂದು ವ್ಯಾಯಾಮಶಾಲೆ

ಇಡೀ ವಿಶ್ವವೇ ಒಂದು ಅದ್ಭುತ ವ್ಯಾಯಾಮಶಾಲೆ. ಇಲ್ಲಿ ನಮ್ಮನ್ನು ನಾವೇ ಸಾಣೆ ಹಿಡಿದು ಸದೃಢಗೊಳಿಸಿಕೊಳ್ಳಬೇಕು.

ಪರನಿಂದನೆ ಮಹಾಪಾಪ

ಪರನಿಂದನೆ ಮಹಾಪಾಪ

ಸಾಧ್ಯವಾದರೆ ಕೈ ಚಾಚಿ ಸಹಾಯ ಮಾಡಿ, ಇಲ್ಲವಾದಲ್ಲಿ ಅವರ ಪಾಡಿಗೆ ಅವರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಬಿಡಿ.

English summary
150th Birthday Swamy Vivekananda famous quotes. For kind attention - Swamy Vivekananda will be special Attraction in Bangalore Lalbagh Republic Day Flower Show 2013 between Jan 18 and Jan 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X