ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LPG ಸಿಲಿಂಡರ್: ಡೀಲರ್ ಸಮಸ್ಯೆ ಕಾಡುತ್ತಿದೆಯೇ?

By Srinath
|
Google Oneindia Kannada News

lpg-cylinder-dealer-portability-petroleum-min-v-moily
ನವದೆಹಲಿ, ಜ.12: ಅಡುಗೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆ ಕಾಡುತ್ತಿದೆಯೇ? ಈಗ ಸರಬರಾಜು ಆಗುತ್ತಿರುವ ಸಿಲಿಂಡರಿನಲ್ಲಿ ತೂಕದ ಮೋಸ ಆಗುತ್ತಿದೆಯೇ? ಇಂತಹುದೇ ಸಮಸ್ಯೆಗಳಿದ್ದಲ್ಲಿ ಈಗಿರುವ ಡೀಲರ್ ಸೇವೆಯ ಬಗ್ಗೆ ಅತೃಪ್ತಿಯಿದ್ದಲ್ಲಿ ಆ ಡೀಲರ್ ಸಂಸ್ಥೆಯನ್ನು ಬದಲಿಸಿ, ಬೇರೆಯದೇ ಡೀಲರಿನಿಂದ ವಿತರಣೆ ಪಡೆಯಬಹುದು.

ಇದನ್ನು ಸಾಧ್ಯವಾಗಿಸಲು ಮೊಬೈಲ್ ಪೋರ್ಟಬಿಲಿಟಿ ಮಾದರಿಯಲ್ಲಿ LPG ಡೀಲರ್ ಬದಲಿಸುವ ಹೊಸ ಯೋಜನೆಯೊಂದನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ ಗಮನಿಸಿ, ನಿಮಗೆ ಅವಕಾಶವಿರುವುದು ಡೀಲರ್ ಅನ್ನು ಬದಲಿಸಲಿಕ್ಕಷ್ಟೇ ಹೊರತು ಇಂಘನ ಸರಬರಾಜು ಮಾಡುವ ಸರಕಾರಿ ಸ್ವಾಮ್ಯದ ಕಂಪನಿಯನ್ನಲ್ಲ.

ಅಂದರೆ ಈಗ ಅನಿಲ ಪೂರೈಸುತ್ತಿರುವ ನಿಮ್ಮ ಸ್ಥಳೀಯ ಡೀಲರ್ ಅನ್ನು ಬಿಟ್ಟು ನಿಮಗೆ ಸರಿಹೊಂದುವಂತಹ ಡೀಲರಿನಿಂದ ಅನಿಲ ಪೂರೈಕೆಗೆ ಮೊರೆಹೋಗಬಹುದು. ಚಂಡೀಗಡದಲ್ಲಿ ನಿನ್ನೆಯಿಂದ ಈ ಯೋಜನೆ ಜಾರಿಗೆ ಬಂದಿದೆ. ಮುಂದೆ ಇತರೆ ರಾಜ್ಯಗಳಲ್ಲೂ ಈ ಗ್ರಾಹಕ-ಸ್ನೇಹಿ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಪ್ರಸ್ತುತ Indiane (Indian Oil Corp- IOC), Bharat Petroleum ಮತ್ತು Hindustan Petroleum Gas ಅನಿಲ ವಿತರಿಸುವ ಸರಕಾರಿ ಕಂಪನಿಗಳಾಗಿವೆ. ಈ ಕಂಪನಿಗಳ ಸಿಲಿಂಡರುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಆಯಾ ಪ್ರದೇಶಗಳಲ್ಲಿ ನಾಲ್ಕಾರು ಡೀಲರ್ ಸಂಸ್ಥೆಗಳು ಇರುತ್ತವೆ.

English summary
LPG Cylinder dealer portability Petroleum Minister M Veerappa Moily. Dissatisfied with your cooking gas dealer’s service? You can switch to another dealer, as the Government has just made LPG portable. For LPG, you can change your dealer, but not the oil company providing the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X