ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು 3 ತಿಂಗಳಿಗೊಮ್ಮೆ ಸಬ್ಸಿಡಿ LPG ದರ 50ರೂ ಏರಿಕೆ

By Srinath
|
Google Oneindia Kannada News

LPG Cylinder prices to go up by Rs 100 Petroleum Ministry- sources
ನವದೆಹಲಿ, ಜ.11: ಸಬ್ಸಿಡಿ ಸಿಲಿಂಡರ್ ಸಂಖ್ಯೆಯ ವಾರ್ಷಿಕ ಮಿತಿ 6ರಿಂದ 9ಕ್ಕೆ ಏರಿಸಿ ಅಂತ ಜನ ಕೇಳುತ್ತಿದ್ದರೆ, ಪೆಟ್ರೋಲಿಯಂ ಸಚಿವಾಲಯ ಮಾತ್ರ ಅದೆಲ್ಲಾ ಆಗೋಲ್ಲ, ಸದ್ಯದಲ್ಲೇ ಅದರ ದರವನ್ನಂತೂ ಖಂಡಿತ ಹೆಚ್ಚು ಮಾಡ್ತೀವಿ ಎಂದು ಗ್ಯಾಸ್ ಬಾಂಬ್ ಸಿಡಿಸಿದೆ.

ಅದೂ ಹತ್ತಲ್ಲ, ಐವತ್ತಲ್ಲ ಬರೋಬ್ಬರಿ ನೂರು ರೂ. ಏರಲಿದೆ. ಇದು ಸಂಕ್ರಾಂತಿ ಕೊಡುಗೆ. ಅಡುಗೆ ಅನಿಲ ಸಿಲಿಂಡರ್‌ಗೆ ರೂ. 100 ಮತ್ತು ಡೀಸೆಲ್ ಲೀಟರ್ ಗೆ ರೂ. 4.50 ಏರಿಕೆಯಾಗಬಹುದು ಎನ್ನಲಾಗಿದೆ.

ಆತಂಕದ ವಿಷಯವೆಂದರೆ, ವಿತ್ತ ಸಚಿವಾಲಯವು ದೇಶದ ಮೇಲೆ 160,000 ಕೋಟಿ ರೂ. ಆರ್ಥಿಕ ಹೊರೆ ಬಿದ್ದಿದೆ. ಇದೇ ವೇಳೆ ತೈಲ ಕಂಪನಿಗಳು ಒಂದೇ ಸಮನೆ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿವೆ. ಆ ನಷ್ಟವನ್ನು ಸರಿಗಟ್ಟುವವರೆಗೂ ಸಬ್ಸಿಡಿ ಸಿಲಿಂಡರ್ ದರವನ್ನು ಸತತವಾಗಿ ತ್ರೈಮಾಸಿಕ ದರದಲ್ಲಿ ಅಂದರೆ ಮೂರು ತಿಂಗಳಿಗೊಮ್ಮೆ 50 ರೂ. ಏರಿಕೆ ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟಿದೆ.

ಆದರೆ ಇದ್ದುದರಲ್ಲೇ ಒಂದು ಸಮಾಧಾನದ ಸಂಗತಿಯೆಂದರೆ ಬೆಲೆ ಹೆಚ್ಚಳಕ್ಕೆ ಒಪ್ಕೋತ್ತೀವಿ. ಆದರೆ ಈಗ ಸರಬರಾಜು ಮಾಡುತ್ತಿರುವ ಸಬ್ಸಿಡಿ ಸಿಲಿಂಡರ್ ಸಂಖ್ಯೆಯನ್ನು 6/12 ರಿಂದ 9/12ಕ್ಕೆ ಏರಿಕೆ ಮಾಡಬೇಕು ಎಂಬ ಖಡಕ್ ಷರತ್ತನ್ನು ಪೆಟ್ರೋಲಿಯಂ ಸಚಿವಾಲಯವು ಸಂಪುಟದ ಮುಂದಿಟ್ಟಿದೆ ಎನ್ನಲಾಗಿದೆ.

ರೈಲು ಪ್ರಯಾಣ ದರ ಹೆಚ್ಚಳವನ್ನು 'ಅತ್ಯಂತ ಸಮಂಜಸ ಆರ್ಥಿಕ ನಡೆ' ಎಂದು ಬಣ್ಣಿಸಿದ ವಿತ್ತ ಸಚಿವ ಚಿದಂಬರಂ ಈಗ ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಿಸುವ ತರಾತುರಿಯಲ್ಲಿದ್ದಾರೆ. ಮೊನ್ನೆಯಷ್ಟೇ ರೈಲು ಪ್ರಯಾಣ ದರ ಹೆಚ್ಚಿಸಿ ಕೈತೊಳೆದುಕೊಂಡಿರುವ ಕೇಂದ್ರ ಸರಕಾರ, ಮುಂದಿನ ವಾರದಲ್ಲಿ LPG ದರವನ್ನೂ ಹೆಚ್ಚಿಸುವ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸರಕಾರವು ಎರಡು ವರ್ಷಗಳಲ್ಲಿ ಜಿಡಿಪಿಯನ್ನು ಶೇ. 8ಕ್ಕೆ ಏರಿಸಲು ನಿರ್ಧರಿಸಿದೆ. ಅದಕ್ಕಾಗಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಿದೆ. ಒಂದೆರಡು ವಾರಗಳಲ್ಲಿ ತೈಲೋತ್ಪನ್ನ ಬೆಲೆ ಏರಿಕೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಸುಳಿವು ನೀಡಿದ್ದಾರೆ.

English summary
The Oil Ministry has proposed a Rs 3-4.50 per litre hike in diesel price and Rs 100 in LPG rates along with raising the number of subsidised cooking gas cylinders for households to nine a year from the current cap of six. The ministry has proposed quarterly increases of Rs 50 per cylinder from April till the entire losses are wiped-off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X