ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಟೆಕ್ಕಿಗಳ ಭತ್ಯೆಗೆ ಕತ್ತರಿ ಪ್ರಯೋಗ

By Mahesh
|
Google Oneindia Kannada News

Infosys BPO cuts down on employees’ allowance
ಬೆಂಗಳೂರು, ಜ.10 : ಹೊಸ ವರ್ಷದಲ್ಲಿ ಮೊಟ್ಟಮೊದಲ ತ್ರೈಮಾಸಿಕ ವರದಿ ಪ್ರಕಟಿಸಲು ಸಿದ್ಧವಾಗಿರುವ ಇನ್ಫೋಸಿಸ್, ಉದ್ಯೋಗಿಗಳ ಭತ್ಯೆಗೆ ಕಡಿತ ಹಾಕಲು ನಿರ್ಧರಿಸಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಆರ್ಥಿಕ ಸಂಕಷ್ಟದಿಂದ ಹೊರ ಬರಲು ಪ್ರತಿ ತ್ರೈಮಾಸಿಕದಲ್ಲೂ ಇಂತಿಷ್ಟು ಉಳಿತಾಯ ಮಾಡಲು ಎಲ್ಲ ರೀತಿಯಲ್ಲೂ ಇನ್ಫೋಸಿಸ್ ಯತ್ನಿಸುತ್ತಿದೆ.

ದಿ ಹಿಂದೂ ವರದಿಯಂತೆ ಈಗಾಗಲೇ ಇನ್ಫೋಸಿಸ್ ನ ಬಿಪಿಒ ವಿಭಾಗ ತನ್ನ ಉದ್ಯೋಗಿಗಳ ಮೇಲೆ ಭತ್ಯೆ ಕಡಿತ ಪ್ರಯೋಗ ಮಾಡಿದೆ.

'Team building expense' ಹೆಸರಿನಲ್ಲಿ ತನ್ನ ಟೀಂ ಸದಸ್ಯರನ್ನು ಟೀಂ ಔಟಿಂಗ್ ಕರೆದುಕೊಂಡು ಹೋಗುತ್ತಿದ್ದ ಮ್ಯಾನೇಜರ್ ಗಳಿಗೆ ಸಿಗುತ್ತಿದ್ದ ಭತ್ಯೆಗೆ ಕತ್ತರಿ ಬಿದ್ದಿದೆ.

ಟೀಂ ಔಟಿಂಗ್ ನ ಪ್ರತಿ ಉದ್ಯೋಗಿಗೂ ಸುಮಾರು 50 ರು ಪ್ರತಿ ತಿಂಗಳಿನಂತೆ ದೊರೆಯುತ್ತಿತ್ತು ಎಂಬ ಮಾಹಿತಿ ಇದೆ. ಇದು ಟೀಂ ನಿಂದ ಟೀಂ ಗೆ ವ್ಯತ್ಯಾಸವಾಗುತ್ತಿತ್ತು. ಆದರೆ, ಈಗ ಈ ಭತ್ಯೆ ಯಾವ ಟೀಂಗೂ ಸಿಗುತ್ತಿಲ್ಲ.

ಮಾರುಕಟ್ಟೆ ತಜ್ಞರ ಪ್ರಕಾರ ಇನ್ಮುಂದೆ ಪ್ರತಿ ತ್ರೈಮಾಸಿಕದಲ್ಲೂ ಭತ್ಯೆಗಳ ಕಡಿತ ಮಾಮೂಲಿಯಾಗಲಿದೆ. ಆದರೆ, ಸಂಬಳ ಕಡಿತ ಇರುವುದಿಲ್ಲ. ಬದಲಿಗೆ ಸಂಬಳ ಏರಿಕೆಗೆ ತಡೆ ಹಾಕಲಾಗುತ್ತದೆ.

ಒಂದು ತ್ರೈಮಾಸಿಕದಲ್ಲಿ ಸುಮಾರು 30 ಲಕ್ಷ ರು ಹಾಗೂ ವಾರ್ಷಿಕವಾಗಿ ಸುಮಾರು 1.2 ಕೋಟಿ ರು ಉಳಿತಾಯ ಮಾಡುವ ಯೋಜನೆ ಇದೆ. ಇನ್ಫೋಸಿಸ್ ಬಿಪಿಒನಲ್ಲಿ ಸುಮಾರು 21,000 ಉದ್ಯೋಗಿಗಳಿದ್ದಾರೆ.

* ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಪ್ರಸಕ್ತ ವರ್ಷದಲ್ಲಿ ತನ್ನ ಹೊರಗುತ್ತಿಗೆ ವಿಭಾಗದಲ್ಲಿ ಸುಮಾರು 8,000 ನೇಮಕಾತಿ ಮಾಡಲಿದೆ ಎಂದು ಸಂಸ್ಥೆ ಸಿಇಒ ಸ್ವಾಮಿ ಸ್ವಾಮಿನಾಥನ್ ಹೇಳಿದ್ದಾರೆ.

* 2012-13ರಲ್ಲಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 20ರಷ್ಟು ನೇಮಕಗಳು ಹಿರಿಯ ಹಾಗೂ ಮಧ್ಯಮ ಸ್ತರದ ಅಧಿಕಾರಿಗಳ ಮಟ್ಟದಲ್ಲಿ ಆಗಲಿದೆ

* 90ಕ್ಕೂ ಅಧಿಕ ಕ್ಲೈಂಟ್ ಗಳನ್ನು ಸಂಸ್ಥೆ ಹೊಂದಿದೆ.
* ಬೆಂಗಳೂರು, ಚೆನ್ನೈ, ಗುರ್ ಗಾಂವ್, ಜೈಪುರ, ಪುಣೆ, ಮಾಂಟೆರ್ರಿ (ಮೆಕ್ಸಿಕೋ), ಲೊಜ್ (ಪೋಲ್ಯಾಂಡ್), ಬ್ರಾನೊ (ಜೆಕ್ ರಿಪಬ್ಲಿಕ್), ಪ್ರೇಗ್ ( ಜೆಕ್ ರಿಪಬ್ಲಿಕ್), ಅಟ್ಲಾಂಟಾ (ಅಮೆರಿಕ), ಹ್ಯಾಂಗ್ ಜೋ (ಚೀನಾ), ಮನೀಲಾ (ಫಿಲಿಫೈನ್ಸ್), ಬೆಲೊ ಹಾರಿಜಾಂಟೆ (ಬ್ರೆಜಿಲ್) ನಲ್ಲಿ ಇನ್ಫೋಸಿಸ್ ತನ್ನ ಬಿಪಿಒ ಕೇಂದ್ರಗಳನ್ನು ಹೊಂದಿದೆ.

* ಇನ್ಫೋಸಿಸ್ ಸಂಸ್ಥೆಯ ಹೊರಗುತ್ತಿಗೆ ವಿಭಾಗದ ಮುಖ್ಯಸ್ಥ ರಿತೇಶ್ ಇದ್ನಾನಿ ಅವರು ತಮ್ಮ ಸಿಒಒ ಹುದ್ದೆಗೆ ಮಂಗಳವಾರ (ಮೇ.29, 2012) ರಾಜೀನಾಮೆ ನೀಡಿದ್ದು ದೊಡ್ಡ ಹೊಡೆತ.

ಇನ್ಫೋಸಿಸ್ ಬಿಪಿಒ ಈಗ ತನ್ನ 10ನೇ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದೆ. ಇಂಡಿಯನ್ ಐಡಲ್ ಮಾದರಿಯಲ್ಲಿ ಬಿಪಿಒ ಐಡಲ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇನ್ಫೋಸಿಸ್ ಮಾತೃ ಸಂಸ್ಥೆಗಿಂತ ಶೇ 16 ರಿಂದ 20 ರಷ್ಟು ಅಧಿಕ ಪ್ರಗತಿ ಸಾಧಿಸುವ ಉತ್ಸಾಹದಲ್ಲಿ ಬಿಪಿಒ ಸಂಸ್ಥೆ ಇದೆ. ಕಳೆದ ತ್ರೈಮಾಸಿಕದಲ್ಲಿ ಶೇ 4 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

'ಸಂಬಳ ಕಡಿತ, ಪ್ರೊಮೊಷನ್ ಇಲ್ಲ, ಈಗ ಟೀಂ ಔಟಿಂಗ್ ಗೂ ಕಟ್ ಹೇಳಿದರೆ ಕಷ್ಟ ಕಷ್ಟ' ಎಂದು ಇನ್ಫಿ ಬಿಪಿಒ ಉದ್ಯೋಗಿಯೊಬ್ಬರು ಹಲುಬಿದ್ದಾರೆ. ನಿರೀಕ್ಷೆಯಂತೆ ಉದ್ಯೋಗಿಗಳನ್ನು ಖುಷಿ ಪಡಿಸಲು 10ನೇ ಹುಟ್ಟುಹಬ್ಬಕ್ಕೆ 10 ರು ಪ್ರತಿ ಷೇರಿನಂತೆ ವಿಶೇಷ ಡಿವಿಡೆಂಡ್ ಘೋಷಣೆಯಾಗಲಿದೆ.

English summary
Infosys BPO, the subsidiary of Infosys, has decided to do away with ‘team building expense,’ which is used by managers to take the team on team outings, Infosys BPO has around 21,000 employees. “Salaries have been lowered, promotions stopped and now we cannot take our teams out,” said a team lead in Infosys BPO reports the Hindu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X