ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪ,ಚಿಮೂ ಮೇಲೆ ಸಂಸದ ವಿಶ್ವನಾಥ್ ಕಿಡಿಕಾರಿದ ಪರಿ

|
Google Oneindia Kannada News

S L Bhyrappa and Chidananda Murthy lost mental balance
ಮೈಸೂರು, ಜ 9: ಕನ್ನಡ ಸಾರಸ್ವತ ಲೋಕದಲ್ಲಿ ಎಸ್ ಎಲ್ ಭೈರಪ್ಪ ಕೊಡುಗೆ ಅಪಾರ. ಹಿರಿಯ ಸಂಶೋಧಕ ಚಿದಾನಂದಮೂರ್ತಿ ಮತ್ತು ಭೈರಪ್ಪನವರ ಮೇಲೆ ನನಗೆ ಅಪಾರ ಗೌರವವಿದೆ.

ಆದರೆ ಟಿಪ್ಪು ವಿವಿಗೆ ವಿರೋಧ ವ್ಯಕ್ತ ಪಡಿಸುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಹೇಳಬೇಕಾಗುತ್ತದೆ ಎಂದು ಮೈಸೂರು ಸಂಸದ ವಿಶ್ವನಾಥ್ ಹೇಳಿದ್ದಾರೆ.

ತುಂಬಾ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಚಿದಾನಂದಮೂರ್ತಿ ಬಿಜೆಪಿ ಮತ್ತು RSS ವಕ್ತಾರರ ಹಾಗೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಟಿಪ್ಪುಸುಲ್ತಾನ್ ವಿಶ್ವವಿದ್ಯಾಲಯ ಬರೀ ಒಂದು ಕೋಮಿಗೆ ಸೇರಿದ ವಿವಿಯಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡುತ್ತಿದ್ದ ವಿಶ್ವನಾಥ್, ಟಿಪ್ಪು ಸುಲ್ತಾನ್ ಈ ದೇಶ ಕಾಣದ ಮಹಾನ್ ದೇಶಪ್ರೇಮಿ. ನೆಲಕ್ಕಾಗಿ ವೀರ ಮರಣವನ್ನಪ್ಪಿದ ಸೇನಾನಿ. ಹಿಂದೂ ಭಾಷಿಗರನ್ನು ಪ್ರೀತಿಸುತ್ತಿದ್ದ ಟಿಪ್ಪು ಸುಲ್ತಾನನನ್ನು ದೇಶದ್ರೋಹಿ ಎಂದು ಬಿಜೆಪಿಯವರು ಕರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಭೈರಪ್ಪ ಮತ್ತು ಚಿಮೂ ಅವರಿಗೆ ಅವರು ಬರೆದ ಪುಸ್ತಕವೇ ಸಂವಿಧಾನ ಎಂದು ತಿಳಿದುಕೊಂಡಿದ್ದಾರೆ. ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯ ಕಟ್ಟಿಸಿದ್ದು ಯಾರು ? ಟಿಪ್ಪುವಿನ ಗೋರಿಯ ಮೇಲೆ 'ಕರ್ನಾಟಕ' ಎಂದು ಬರೆದಿದೆ. ಇದನ್ನೆಲ್ಲಾ ಈ ಇಬ್ಬರು ಮೊದಲು ಅರಿತುಕೊಳ್ಳಲಿ ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ.

ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟಬೇಡಿ. ಜನರ ಮಧ್ಯೆ ಮತೀಯ ವಿಷ ಕುಡಿಸಿ ಸಮಾಜವನ್ನು ಹಾಳು ಮಾಡಬೇಡಿ ಎಂದು ವಿಶ್ವನಾಥ್ ಇಬ್ಬರಲ್ಲೂ ಮನವಿ ಮಾಡಿದ್ದಾರೆ.

English summary
S L Bhyrappa and Chidananda Murthy opposing proposed Tippu Sultan university. They looks like lost mental balance said Mysore MP, H Vishwanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X