• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿರಡಿ ಮಂದಿರದಲ್ಲಿ 50 ಕೋಟಿಗೂ ಅಧಿಕ ಆಭರಣ

By Mahesh
|

ಪುಣೆ, ಜ.9: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಮಂದಿರದಲ್ಲಿ 2012ರ ಮಾ.31ಕ್ಕೆ ಅನ್ವಯವಾಗುವಂತೆ ಸುಮಾರು 50 ಕೋಟಿ ರು.ಗೂ ಅಧಿಕ ಆಭರಣಗಳಿದೆ ಎಂದು ದೇಗುಲದ ಟ್ರಸ್ಟಿಗಳು ಪ್ರಕಟಿಸಿದ್ದಾರೆ.

50,53,17 473 ರು ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳು ಹಾಗೂ ಕಿಸಾನ್ ವಿಕಾಸ್ ಪತ್ರಗಳಲ್ಲಿ ಹೂಡಿಕೆಗಳು ಸೇರಿದಂತೆ ಒಟ್ಟು 6,27,56,97488 ರು.ಗಳ ನಿಖರು ಠೇವಣಿಗಳನ್ನು ಹೊಂದಿದೆ.

ಚಿನ್ನ ಮತ್ತು ವಜ್ರಾಭರಣಗಳ ಮೌಲ್ಯ 2011 ಮಾರ್ಚ್ 31ಕ್ಕೆ ಇದ್ದ 39,48,67,138 ರು.ಗಳಿಗೆ ಹೋಲಿಸಿದರೆ 11,04,50,335 ರೂ.ಗಳಷ್ಟು ಏರಿಕೆಯನ್ನು ಕಂಡಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಶಿರಡಿಯ ಸಾಯಿಬಾಬಾ ಟ್ರಸ್ಟ್‌ನ ವಾರ್ಷಿಕ ವರದಿಯಂತೆ 2011, ಮಾ.31ರಂದು ಕಿಸಾನ್ ವಿಕಾಸ್ ಪತ್ರಗಳಲ್ಲಿ 40,84,00,000 ರೂಗಳನ್ನು ಹೂಡಿಕೆಯಿದ್ದರೆ 2012 ಮಾ.31ರಂದು ಅದು 23,34,00,000 ರೂ.ಗಳಷ್ಟಿದೆ.

ಮಂದಿರದ ಸುಗಮ ಆಡಳಿತಕ್ಕಾಗಿ ಮಹಾರಾಷ್ಟ್ರ ಸರಕಾರವು 2004ರಲ್ಲಿ ಈ ಟ್ರಸ್ಟ್‌ನ್ನು ರಚಿಸಿತ್ತು. 2011-12ನೇ ಹಣಕಾಸು ವರ್ಷದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯ ನಿರಖು ಠೇವಣಿಗಳ ಮೊತ್ತದಲ್ಲಿ 1,38,06,28,921 ರೂ.ಗಳ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಮಂದಿರದ ಖಜಾನೆಗೆ 9,20,55,539 ರೂ. ಮೌಲ್ಯದ ಚಿನ್ನ ಸೇರಿಕೊಂಡಿದೆ. 2011 ಮಾ.31ಕ್ಕೆ ಖಜಾನೆಯಲ್ಲಿನ ಚಿನ್ನದ ಮೌಲ್ಯ 27,95,27,935 ರೂ.ಗಳಾಗಿದ್ದವು.

ಆದರೆ 2011-12ನೇ ಸಾಲಿನಲ್ಲಿ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಪದಕಗಳು ಹೊಸದಾಗಿ ಸೇರಿಲ್ಲ. ಟ್ರಸ್ಟ್‌ನ ಬಳಿ 17,05,137 ರೂ ಮೌಲ್ಯದ ವಿದೇಶಿ ವಿನಿಮಯ ದಾಸ್ತಾನು ಇದೆ.

ಶಿರಡಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 45 ಕೋ.ರೂ. ಮತ್ತು 24,69,239 ರೂ.ವೆಚ್ಚದಲ್ಲಿ ಲಂಡನ್ನಿನಲ್ಲಿ ಸಾಯಿ ಭಜನ್ ಸಂಧ್ಯಾ ಸೇರಿದಂತೆ ಒಟ್ಟು 76,74,26,961 ರೂ.ಗಳನ್ನು ಟ್ರಸ್ಟ್ ವಿವಿಧ ದತ್ತಿಕಾರ್ಯಗಳಿಗಾಗಿ ವ್ಯಯಿಸುತ್ತಿದೆ ಎಂದು ವರದಿ ಹೇಳಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಹುಂಡಿ ಕಾಸಿನ ಮೊತ್ತ, ದಾನ ಧರ್ಮದಿಂದ ಬಂದ ಹಣ 1,60,45,78,233 ರು ನಷ್ಟಿದ್ದರೆ, ಒಟ್ಟಾರೆ ದಾನದ ಮೊತ್ತ 2,06,14,96,152 ನಷ್ಟು ಸಿಕ್ಕಿದೆ.

2010ರಲ್ಲಿ 320 ಕೆಜಿ ಬೆಳ್ಳಿ ಅರ್ಪಿಸಿದ್ದ ಭಕ್ತರು ಈ ವರ್ಷ 440 ಕೆಜಿ ಬೆಳ್ಳಿ ಹುಂಡಿಗೆ ಹಾಕಿದ್ದಾರೆ. ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, 2010ರಲ್ಲಿ 5.43 ಕೋಟಿ ರು ಬಂದಿತ್ತು, ಈ ಬಾರಿ 6.28 ಕೋಟಿ ರು ಸಿಕ್ಕಿದೆ ಎಂದು ಟ್ರಸ್ಟಿ ಎಂ ಕಿಶೋರ್ ವಿವರಿಸಿದ್ದಾರೆ.

English summary
The famous Sai Baba temple at Shirdi in Maharashtra, one of the richest shrines in the country, has ornaments and jewellery worth Rs 50,53,17 473 and a total fixed deposits to the tune of Rs 6,27,56,97488 as on March 31, 2012 including investments in Kisan Vikas Patra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more