ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಗಳ ಅಮಾನುಷ ಕೃತ್ಯಕ್ಕೆ ವ್ಯಾಪಕ ಖಂಡನೆ

By Mahesh
|
Google Oneindia Kannada News

Pakistan's action inhuman, ghastly: Salman Khurshid
ನವದೆಹಲಿ, ಜ.9: ಹತ್ತು ವರ್ಷಗಳ ಕದನ ವಿರಾಮ ಉಲ್ಲಂಘಿಸಿ ಗಡಿ ದಾಟಿ, ಭಾರತೀಯ ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದಿರುವ ಪಾಕಿಸ್ತಾನದ ಕೃತ್ಯವನ್ನು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆ ಪ್ರತಿಕ್ರಿಯಿಸಿ, ವಿವರಣೆ ನೀಡುವಂತೆ ಪಾಕಿಸ್ತಾನ ರಾಯಭಾರಿ ಕಚೇರಿಗೆ ನೋಟಿಸ್ ನೀಡಲಾಗಿದೆ ಎಂದು ಖುರ್ಶೀದ್ ಹೇಳಿದರು.

ಎರಡು ದೇಶಗಳು LOC ನಿಮಗಳನ್ನು ಪಾಲಿಸಿ ವ್ಯಾಪಾರ, ವಹಿವಾಟು, ಪ್ರವಾಸಕ್ಕೆ ಆದ್ಯತೆ ನೀಡಿ, ಗುಂಡಿನ ದಾಳಿ ನಿಲ್ಲಿಸಿ, ಕಾಶ್ಮೀರದಲ್ಲಿ ಶಾಂತಿ ನೆಲೆಸುವುದನ್ನು ಅಮೆರಿಕ ಬಯಸುತ್ತದೆ ಎಂದು ಅಮೆರಿಕ ಸರ್ಕಾರ ವಕ್ತಾರೆ ವಿಕ್ಟೋರಿಯಾ ನ್ಯೂಲ್ಯಾಂಡ್ ಅವರು ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಪಾಕ್ ಯೋಧರು ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಗ್ಗಿ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಕತ್ತು ಕೊಯ್ದು ಸಾಯಿಸಿದ್ದಾರೆ. ಕದನ ವಿರಾಮ ಒಪ್ಪಂದ ಉಲ್ಲಂಘಿಸಿರುವುದು ಆಘಾತಕಾರಿ, ಪ್ರಚೋದನಕಾರಿ ಎಂದು ಸಚಿವ ಸಲ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

ಗಡಿ ದಾಟಿ ನಮ್ಮ ನೆಲಕ್ಕೆ ಕಾಲಿರಿಸಿದ ಪಾಕ್ ಯೋಧರು ಪೂಂಛ್ ಜಿಲ್ಲೆ ಗಡಿ ಪ್ರದೇಶದ ಛತ್ರಿ ಮತ್ತು ಆತ್ಮಾ ಸೇನಾ ಪೋಸ್ಟ್ ಬಳಿ ಇಬ್ಬರು ಯೋಧರನ್ನು ಗಂಟಲು ಸೀಳಿ ಹತ್ಯೆಗೈದಿರುವುದನ್ನು ಅಮೆರಿಕ ಸೇರಿದಂತೆ ಹಲವಾರು ದೇಶದ ರಾಯಭಾರಿಗಳು ಖಂಡಿಸಿದ್ದಾರೆ.

ಪಾಕಿಗಳ ಪೈಶಾಚಿಕ ಕೃತ್ಯ : ಒಬ್ಬ ಸೈನಿಕನ ರುಂಡ ಕತ್ತರಿಸಿ ಹೊತ್ತೊಯ್ದಿದ್ದಾರೆ. ಅಲ್ಲದೆ, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದ್ದಾರೆ. ಪಾಕಿಗಳು ಗಡಿ ಪ್ರದೇಶದ ಆರೇಳು ಕಡೆ ಗುಂಡಿನ ದಾಳಿ ನಡೆಸಿದ್ದಾರೆ.

ಮೃತ ಯೋಧರನ್ನು ಹೇಮರಾಜ್ ಮತ್ತು ಸುಧಾಕರ್ ಸಿಂಗ್ ಗುರುತಿಸಿಲಾಗಿದೆ. ಕದನ ವಿರಾಮ ಉಲ್ಲಂಘಿಸಿ ಗಡಿ ನುಸುಳಿ ಬಂದ ಪಾಕ್‌ನ ಬಲೂಚ್ 29ನೇ ರೆಜಿಮೆಂಟ್‌ನ ಯೋಧರು.

ನಮ್ಮ 13ನೇ ರಜಪೂತ್ ಪಠಾಣ್ ರೆಜಿಮೆಂಟ್‌ಗೆ ಸೇರಿದ ಹೇಮ್‌ರಾಜ್, ಸುಧಾಕರ್ ಸಿಂಗ್ ಅವರ ಕುತ್ತಿಗೆ ಸೀಳಿ ಹತ್ಯೆ, ಮತ್ತೆ ಮೂವರು ಯೋಧರಿಗೆ ಗಾಯ ಮಾಡಲಾಗಿದೆ. ಹಳೆ ದ್ವೇಷವನ್ನು ಸಾಧಿಸಿದ ಪಾಕಿಗಳ ಕೃತ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಟೀಕೆಗಳ ಸುರಿಮಳೆ ಹರಿದಿದೆ.

ಹಾಜಿ ಪಿರ್ ಗಡಿಯಲ್ಲಿ ಪಾಕ್ ಯೋಧರ ಕ್ಯಾತೆ ಖಂಡಿಸಿ ಇಸ್ಲಾಮಾಬಾದ್‌ಗೆ ಕರೆ ಮಾಡಿದ್ದ ಭಾರತೀಯ ಉಪ ಹೈಕಮೀಷನರ್ ಗೋಪಾಲ್ ಬಾಗ್ಲೈ ಸೋಮವಾರವಷ್ಟೇ ಪಾಕ್ ಯೋಧರ ಕೃತ್ಯ ಕುರಿತು ಚರ್ಚೆ ನಡೆಸಿದ್ದರು. ಆದರೆ, ಪಾಕಿಸ್ತಾನದ ಈ ಕೃತ್ಯದಿಂದ ಶಾಂತಿ ಮಾತುಕತೆ ಮುಂದುವರೆಸುವುದು ದುಸ್ತರವಾಗಲಿದೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು:
Tarek Fatah ‏@TarekFatah : Pakistan Army playing a dangerous game in attempt to thwart democratic process in Islamabad by a border war with India.

Smriti Z Irani ‏@smritiirani : Crossing of LOC, mutilation of Indian soldiers-- aman ki asha anyone???

MediaCrooks ‏@mediacrooks : Dear @ndtv @ibnlive @thenewshour @rahulkanwal .. Did you locate and check the feelings of the family whose men were killed at the #LOC??

Sunanda Vashisht ‏@sunandavashisht : 2 ArmyJawans killed on LOC in major cease fire violation.. GOI should immediately demand for more Indo-Pak cricket matches to be played

Avinash Bhat ‏@avinashbhat01 : Even jihadis infiltrating across LoC into J&K hav better night vision devices thn lavishly funded Indian Army..Shame!

Shiv Aroor ‏@ShivAroor : Thriller at Kotla. Killer at LoC. Good day for Indo-Pak confidence building.

ಈ ಹಿಂದಿನ ಕದನ ವಿರಾಮ ಉಲ್ಲಂಘನೆ:

* 1999ರಲ್ಲಿ ಕಾರ್ಗಿಲ್ ಯುದಟಛಿದ ವೇಳೆಯೂ ಪಾಕ್ ಸೈನಿಕರು ಮಾನವೀಯತೆಯನ್ನೇ ಮರೆತಿದ್ದರು. ಅಂದಿನ
ಘರ್ಷಣೆಯಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತವರ ತಂಡದ ಮೇಲೆ ಪಾಕ್‌ನ ಕಾಕ್ಸಾರ್ ವಿಭಾಗದ ಸೈನಿಕರು ಹೇಯ ದಾಳಿ ನಡೆಸಿದ್ದರು.

* 2009 ರಲ್ಲಿ 51 ಕದನ ವಿರಾಮ ಉಲ್ಲಂಘನೆ
* 2010ರಲ್ಲಿ 28 ಬಾರಿ ಪಾಕ್ ಸೈನಿಕರ ಉಪಟಳ
* 2011ರಲ್ಲಿ 44 ಬಾರಿ ಪಾಕಿಗಳು ಶಾಂತಿ ಕದಡಿದ್ದಾರೆ.
* 2012ರಲ್ಲಿ ಉತ್ತರ ಕಾಶ್ಮೀರದ ಚುರುಂಡಾ ಪ್ರದೇಶದ ಉರಿ ವಿಭಾಗದಲ್ಲಿ ಪಾಕಿಸ್ಥಾನ ಸೈನಿಕರ ಗುಂಡಿಗೆ
ಮೂವರು ನಾಗರಿಕರು ಬಲಿಯಾಗಿದ್ದರು.
* ಕಳೆದ ಒಂದು ವರ್ಷದಲ್ಲಿ ಪಾಕಿಸ್ಥಾನ 71 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಉಭಯ ಸೈನಿಕರ ಮಧ್ಯೆ
71 ಬಾರಿ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ನಾಲ್ವರು ಸೇನಾಧಿಕಾರಿಗಳು ಸೇರಿದಂತೆ 7 ಮಂದಿ
ಅಸುನೀಗಿದ್ದು, 15 ಮಂದಿ ಗಾಯಗೊಂಡಿದ್ದರು.

ಆದರೆ, ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಕದನ ವಿರಾಮ ಉಲ್ಲಂಘಿಸಿಲ್ಲ. ಗಡಿ ದಾಟಿಲ್ಲ. ನಾವುದೇ ಪ್ರಚೋದನಕಾರಿ ದಾಳಿ ನಡೆಸಿಲ್ಲ ಎಂದು ಪ್ರತಿಕ್ರಿಯಿಸಿದೆ.

English summary
Reacting sharply to the ceasefire violation and killing of two Indian soldiers by Pakistani troops, External Affairs Minister Salman Khurshid said the acts were 'inhuman' and 'ghastly'. Saying the action seemed like an effort to derail the peace talks, the minister added that New Delhi will take up the issue with Islamabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X