ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್ ಗೆ ಯತ್ನಿಸಿದರೆ ಸಾಯಿಸ್ಬಿಡಿ: ಪೊಲೀಸ್ ಆಯುಕ್ತ

By Srinath
|
Google Oneindia Kannada News

kill-molest-assaulter-hyderabad-dgp-dinesh-reddy
ಹೈದರಾಬಾದ್, ಜ.8: ರೇಪಿಸ್ಟುಗಳ ವಿರುದ್ಧ ಕಾನೂನಿನಲ್ಲೇ ಇಲ್ಲದ ಗೂಂಡಾ ಕಾಯಿದೆಯನ್ನು ಜಾರಿಗೊಳಿಸುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಮಿರ್ಜಿ ಬಾಲಿಶ ಹೇಳಿಕೆ ನೀಡಿದ್ದಾರೆ. ಆದರೆ ಅತ್ತ ಹೈದರಾಬಾದಿನ ಪೊಲೀಸ್ ಆಯುಕ್ತ ವಿ ದಿನೇಶ್ ರೆಡ್ಡಿ ಅವರು 'ಮಹಿಳೆಯರೇ, ನಿಮ್ಮ ಮೇಲೆ ಯಾರಾದರೂ ಆತ್ಯಾಚಾರಕ್ಕೆ ಯತ್ನಿಸಿದರೆ ನೇರವಾಗಿ ಗುಂಡಿಟ್ಟು ಸಾಯಿಸಿಬಿಡಿ' ಎಂದು ಹೇಳಿದ್ದಾರೆ.

'ಸ್ವಯಂ ರಕ್ಷಣೆಗಾಗಿ ಹಲ್ಲೆಕೋರನನ್ನು ಯಾವುದೇ ಮಹಿಳೆ ಸಾಯಿಸಬಹುದು. ಕೈಯಲ್ಲಿ ಗನ್ ಇದ್ದರೆ ಗುಂಡಿಟ್ಟು ಸಾಯಿಸಿ, ಇಲ್ಲಾಂದ್ರೆ ಬೇರೆ ಹೇಗಾದರೂ ಸಾಯಿಸಿ ಪರವಾಗಿಲ್ಲ. ನಾನಿದ್ದೇನೆ. ಅಂತಹ ಕೇಸುಗಳನ್ನು ಮನ್ನಾ ಮಾಡುತ್ತೇನೆ' ಎಂದು ಆಯುಕ್ತ ದಿನೇಶ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನಿನ್ನೆ ಸೋಮವಾರ ಮಾಧಪುರದಲ್ಲಿ ಮಹಿಳಾ ಟೆಕ್ಕಿಗಳ ಜತೆ ಮಾತನಾಡುತ್ತಾ ಆಯುಕ್ತ ದಿನೇಶ್ ಈ ಫರ್ಮಾನು ಹೊರಡಿಸಿದ್ದಾರೆ. ದೆಹಲಿ ಗ್ಯಾಂಗ್ ರೇಪ್- ಹತ್ಯೆ ಬಳಿಕ ದಿನೇಶ್ ಅವರ ಈ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಎಂದು ಅತ್ಯಾಚಾರ ವಿರೋಧಿಗಳು ಸ್ವಾಗತಿಸಬಹುದಾದರೂ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯಾ? ಎಂದು ಕರ್ನಾಟಕದ ಹೆಣ್ಣುಮಕ್ಕಳೂ ಇದೀಗ ಕೇಳತೊಡಗಿದ್ದಾರೆ.

ಮಹಿಳೆಯರ ವಿರುದ್ಧ ಅಪರಾಧಗಳಿಗೆ ಕಡಿವಾಣ ಹಾಕಲು ಸರಕಾರ ಟೊಂಕಕಟ್ಟಿ ನಿಂತಿದೆ ಎಂದು ಆಯುಕ್ತ ದಿನೇಶ್ ತಿಳಿಸಿದ್ದಾರೆ. ಏನೇ ಆಗಲಿ, ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲು ಕರ್ನಾಟಕ ಗೃಹ ಸಚಿವ ಅಶೋಕ್ ಮೀನ-ಮೇಷಗಳನ್ನು ಎಣಿಸುತ್ತಿರುವಾಗ ಪಕ್ಕದ ಹೈದರಾಬಾದಿನ ಪೊಲೀಸ್ ಆಯುಕ್ತ ದಿನೇಶ್ ರೆಡ್ಡಿ ಭರ್ತಿ ಭರವಸೆ ನೀಡಿರುವುದು ಅಲ್ಲಿನ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ.

English summary
Kill molest-assaulter: Hyderabad DGP Dinesh Reddy. Mr Reddy gave this advice to women while interacting with women IT employees at Madhapur, Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X