ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಭಾರತಿ: 6 ರೇಪಿಸ್ಟ್ ವಿರುದ್ಧ ಗೂಂಡಾ ಕಾಯ್ದೆ ಜಾರಿ

By Srinath
|
Google Oneindia Kannada News

jnanabharathi-molest-case-bng-police-file-goonda-act
ಬೆಂಗಳೂರು, ಜ.8: ಜ್ಞಾನಭಾರತಿ ಕ್ಯಾಂಪಸ್ಸಿನಲ್ಲಿ ರಾತ್ರಿ 10 ಗಂಟೆ ವೇಳೆ ಟೆಕ್ಕಿ ಗೆಳೆಯನ ಜತೆಯಿದ್ದ ನೇಪಾಳ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ವಿರುದ್ಧ ಭುಗಿಲೆದ್ದಿರುವ ಆಕ್ರೋಶದ ಬಿಸಿಯಲ್ಲಿ ಧೈರ್ಯ ತಂದುಕೊಂಡಿರುವ ಬೆಂಗಳೂರು ಪೊಲೀಸರು ಎಲ್ಲ ಏಳೂ ಆರೋಪಿಗಳ ವಿರುದ್ಧ (ಒಬ್ಬ ಬಾಲ ಅತ್ಯಾಚಾರಿಯ ಹೊರತುಪಡಿಸಿ) ಗೂಂಡಾ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ Goonda Act ಅಂದರೆ Karnataka Prevention of Dangerous Activities of Bootleggers, Drug Offenders, Gamblers, Goondas, Immoral Traffic Offenders and Slum Grabbers Act, 1985 ಅನುಸಾರ ರೇಪಿಸ್ಟುಗಳ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸುವಂತಿಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ರೇಪಿಸ್ಟುಗಳ ವಿರುದ್ಧದ ಈ ಗೂಂಡಾ ಪ್ರಕರಣ ಊರ್ಜಿತವಾಗದು. ಆದರೂ ಯಾವ ಪುರುಷಾರ್ಥಕ್ಕೆ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಕುತೂಹಲಕಾರಿಯಾಗಿದೆ.

ಆದರೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗೂಂಡಾ ಕಾಯ್ದೆಯನ್ನು ಅನ್ಚಯಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿಜೆ ಜ್ಯೋತಿಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ಯಳಯಯ್ಯ, ರಾಜ (ತಲೆಮರೆಸಿಕೊಂಡಿರುವವ), ಮದ್ದೂರಯ್ಯ, ಶಿವಣ್ಣ, ದೊಡ್ಡ ಈರಯ್ಯ ಹಾಗೂ ರಾಮನಗರ ತಾಲೂಕಿನ ರಾಮ ವಿರುದ್ಧ ಗೂಂಡಾ ಕಾಯ್ದೆ ಬಳಸಲು ಮಿರ್ಜಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ರಾಜನ ಮೇಲೂ ಗೂಂಡಾ ಕಾಯ್ದೆ ಜಾರಿಗೊಳಿಸಿರುವುದಾಗಿ ಮಿರ್ಜಿ ಹೇಳಿದ್ದಾರೆ. ರಾಜನ ಬಂಧನಕ್ಕೆ ಪೊಲೀಸರ ತನಿಖೆ ಮುಂದುವರೆದಿದೆ.

ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಸಬೇಕೊ, ಬೇಡವೋ ಎಂಬುದು ಇನ್ನೂ ಚರ್ಚೆಯ ಹಂತದಲ್ಲೇ ಇರುವಾಗ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡಲು ಗೂಂಡಾ ಕಾಯ್ದೆ ಬಳಕೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಯ್ದೆ ಪ್ರಕಾರ ಆರೋಪಿಗಳು ಒಂದು ವರ್ಷಗಳ ಜಾಮೀನು ರಹಿತ ಜೈಲು ವಾಸ ಅನುಭವಿಸಲಿದ್ದಾರೆ.

English summary
Jnanabharathi Law student molestation case Bangalore police file goonda act. City Police Commissioner B G Jyothiprakash Mirji on Monday issued orders to book six men accused in the recent Jnana Bharathi gang-rape case under the Karnataka Prevention of Dangerous Activities of Bootleggers, Drug Offenders, Gamblers, Goondas, Immoral Traffic Offenders and Slum Grabbers Act, 1985, commonly known as the Goonda Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X