ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಗೌಡ್ರ ತಾಕತ್ತು ಹಾಸನ ಜನಕ್ಕಿನ್ನೂ ಗೊತ್ತಾಗಿಲ್ಲ

By Srinath
|
Google Oneindia Kannada News

hassan-people-not-yet-discovered-devegowda-strength-hdr
ಹೊಳೆನರಸೀಪುರ, ಜ.8: ನಮ್ಮ ತಂದೆಯವರ ಶಕ್ತಿ ಸಾಮರ್ಥ್ಯ ಏನೆಂಬುದು ಹಾಸನ ಜನಕ್ಕೆ ಇನ್ನೂ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ, ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ (ದಾವಣಗೆರೆ) ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡ ಅವರು ಮಾತನಾಡಿ 'ರಾಜ್ಯದ ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ ಹೊಂದಿರುವ ಭವ್ಯ ಕನಸನ್ನು ಸಾಕಾರಗೊಳ್ಳಲು ಕೈ ಜೋಡಿಸಿ. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕನಿಷ್ಠ 115 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿರಿ' ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ದೇವೇ ಗೌಡರ ಮಗ ಎಂಬ ಕಾರಣಕ್ಕೆ ನಾನು ಕುಮಾರಸ್ವಾಮಿ ಅವರನ್ನು ಮೆಚ್ಚಿ ಮಾತನಾಡುತ್ತಿಲ್ಲ. ಅವರಿಗೆ ನಿಜವಾಗಲೂ ಬಡವರ, ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ. 20 ತಿಂಗಳ ಮುಖ್ಯಮಂತ್ರಿಯಾಗಿದ್ದಾಗ ಅವರು ಅದನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವಂತೆ ಮಾಡಿ ಎಂದು ದೊಡ್ಡ ಗೌಡರು ಅಲವತ್ತುಕೊಂಡರು.

ಜೆಡಿಎಸ್ ಕಾಲದಲ್ಲಿ ಜಿಲ್ಲೆ ಸುಭಿಕ್ಷವಾಗಿತ್ತು: 'ನಮ್ಮ ತಂದೆಯವರು ಮತ್ತು ನಮ್ಮ ಶಕ್ತಿ ಏನೆಂಬುದು ಜಿಲ್ಲೆಯ ಜನಕ್ಕೆ ಅರ್ಥವಾಗಿಲ್ಲ. ಗೌಡರ ಕುಟುಂಬದವರು ಅಲ್ಲದಿದ್ದರೆ ಬೇರೇ ಯಾರೂ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿರಲಿಲ್ಲ ಎಂಬುದನ್ನು ನಮ್ಮ ಜನ ಅರಿಯಬೇಕು' ಎಂದು ರೇವಣ್ಣ ಆಶಿಸಿದರು.

'ಜೆಡಿಎಸ್ ಅಧಿಕಾರದಲ್ಲಿದ್ದ ಕಾಲದಲ್ಲಿ ಜಿಲ್ಲೆ ಹಾಗೂ ರಾಜ್ಯದ ರೈತರು ಹಾಗೂ ಶ್ರೀಸಾಮಾನ್ಯರು ಸುಖೀ ಜೀವನ ನಡೆಸುತ್ತಿದ್ದರು. ತಾವು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ 24 ಗಂಟೆ ವಿದ್ಯುತ್ ಸರಬರಾಜು ಇತ್ತು. ಆದರೆ, ಇಂದು ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಬೆಳೆದಿರುವ ಬೆಳೆಗೆ ನೀರು ಹರಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ' ಎಂದು ರೇವಣ್ಣ ಹೇಳಿದರು.

'ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯಲ್ಲಿ 204 ಮಂದಿ ಸಿಬ್ಬಂದಿ ಇರಬೇಕು. ಆದರೇ, ಇಲ್ಲಿ ಸಹ ಕೃಷಿ ಇಲಾಖೆ ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ಏನು ಸಾಧನೆ ಮಾಡಲು ಸಾಧ್ಯ?' ಎಂದು ಅವರು ಕಿಡಿಕಾರಿದರು.

'ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ನೀತಿಯ ಫ‌ಲವಾಗಿ ರಾಜ್ಯದಲ್ಲಿ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಸರಕಾರ ಏನೇ ಯೋಜನೆ ರೂಪಿಸಿದರೂ, ಸಿಬ್ಬಂದಿ ಕೊರತೆ ಇದ್ದಲ್ಲಿ ಕಾರ್ಯಕ್ರಮಗಳ ಅನುಷ್ಠಾನ ಹೇಗೆ ಸಾಧ್ಯ?' ಎಂದು ಅವರು ಖಾರವಾಗಿ ಪ್ರಶ್ನಿಸಿದರು.

English summary
JDS leader HD Revanna said in Hassan yestreday that the dist people have not yet discovered HD Deve Gowda's strength and potential.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X