ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಗದೀಶ್ ಶೆಟ್ಟರ್ ಗೆ ಕ್ಯಾನ್ಸರ್, ಏಡ್ಸ್ ಬಂದಿದೆ'

By Mahesh
|
Google Oneindia Kannada News

Shettar suffering from Aids, Cancer govt will fall : G Parameshwar
ಕೊಪ್ಪಳ, ಜ.8: ಚುನಾವಣಾ ಪೂರ್ವ ತಯಾರಿ ಪಾದಯಾತ್ರೆಯ ಮೊದಲ ಹಂತದಲ್ಲೇ ಕಾಂಗ್ರೆಸ್ ನಾಯಕರು ತಮ್ಮ ವಾಗ್ಬಾಣಗಳ ಮೂಲಕ ಬಿಜೆಪಿಯನ್ನು ಚುಚ್ಚುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಮಂಗಳವಾರ(ಜ.8) ಬಹಿರಂಗ ಸಭೆಯಲ್ಲಿ ಶೆಟ್ಟರ್ ಗೆ ಕ್ಯಾನ್ಸರ್, ಏಡ್ಸ್ ತಗುಲಿದೆ. ಸರ್ಕಾರ ನಶಿಸಲಿದೆ ಎಂದು ಎಚ್ಚರತಪ್ಪಿ ನುಡಿದಿದ್ದಾರೆ.

ಸ್ವಚ್ಛ ನುಡಿಗೆ ಹೆಸರಾದ ಜಿ ಪರಮೇಶ್ವರ್ ಅವರು ಈ ರೀತಿ ಹೇಳಿಕೆ ನೀಡಿರುವುದು ಸ್ವತಃ ಕಾಂಗ್ರೆಸ್ಸಿಗರಿಗೇ ದಿಗ್ಭ್ರಮೆ ಉಂಟು ಮಾಡಿದ್ದು ಸುಳ್ಳಲ್ಲ.

ಶೆಟ್ಟರಿಗೆ ಕ್ಯಾನ್ಸರ್ ಏಡ್ಸ್ ಇದೆ: ಶೆಟ್ಟರ್ ಅವರೇ ನಿಮಗೆ ಕ್ಯಾನ್ಸರ್ ಇದೆ, ಏಡ್ಸ್ ಬಂದಿದೆ. ನಿಮಗೆ ವಾಸಿಯಾಗದ ಕಾಯಿಲೆ ಬಂದಿದೆ, ಯಾವ ಔಷಧಿ ಕೊಟ್ಟರೂ ನೀವು ಬದುಕೋದಿಲ್ಲ. ನೀವು ಇನ್ನು ಎರಡೋ ಮೂರೋ ತಿಂಗಳು ಉಳಿದರೆ ಹೆಚ್ಚು. ನಿಮ್ಮ ಆರೋಗ್ಯ ಕೆಟ್ಟಿದೆ. ನಮ್ಮ ಆರೋಗ್ಯ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಶೆಟ್ಟರ್ ಅವರನ್ನು ನೇರವಾಗಿ ಸಂಬೋಧಿಸುತ್ತಾ ಹೇಳಿದರು.

ತಮ್ಮ ಭಾಷಣದಲ್ಲಿ ನೇರವಾಗಿ ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿದ್ದರೂ, ಪರಮೇಶ್ವರ್ ಅವರ ಅಸಮಾಧಾನದ ಬಿಸಿ ಮುಟ್ಟಿಸಿದ್ದು ಬಿಜೆಪಿ ಸರ್ಕಾರ ಹಾಗೂ ಅದರ ಅಸ್ಥಿರ ಸ್ಥಿತಿಯ ಬಗ್ಗೆ, ಕಾಂಗ್ರೆಸ್ ಬಂದರೆ ನೆಮ್ಮದಿ ಸಿಗುತ್ತದೆ ಎಂದು ಜನರಿಗೆ ತಿಳಿಸಲು ರೂಪಕವಾಗಿ ಸಿಎಂಗೆ ಮಾರಣಾಂತಿಕ ಕಾಯಿಲೆ ತಗುಲಿದೆ ಎಂದು ಬಳಸಿದ್ದಾರೆ ಎನ್ನಬಹುದು.

ಕೆಪಿಸಿಸಿ ಮೊದಲ ಹಂತದ ಪಾದಯಾತ್ರೆಯಲ್ಲಿ ಬಳ್ಳಾರಿ, ಬಿಜಾಪುರ, ಬಾಗಲಕೋಟೆ, ಬಾಗೇವಾಡಿ, ಕೊಪ್ಪಳ ಹೀಗೆ ಒಟ್ಟು 4 ಜಿಲ್ಲೆಗಳ 140 ಕಿ.ಮೀ ದೂರ ಕ್ರಮಿಸಲಿದೆ. ಸಿದ್ದರಾಮಯ್ಯ, ಜಿ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದಾರೆ.

ಕಾಂಗ್ರೆಸ್ ನತ್ತ ಬಿಜೆಪಿ ಶಾಸಕರು: ಅರಣ್ಯ ಸಚಿವ ಯೋಗೀಶ್ವರ್ ಸೇರಿ 8 ಸಚಿವರು, ಒಟಾರೆ 20 ಜನ ಶಾಸಕರು, ಸಚಿವರು ಕಾಅಂಗ್ರೆಸ್ ಕದ ತಟ್ಟುತ್ತಿದ್ದಾರೆ.

ಬೊಮ್ಮಾಯಿ, ವಿ ಸೋಮಣ್ಣ, ಪುಟ್ಟೇಗೌಡ, ಶಿವರಾಜ್ ತಂಗಡಗಿ, ನಾರಾಯಣ ಸ್ವಾಮಿ ಅವರ ಹೆಸರನ್ನು ಕೆಪಿಸಿಸಿಯಿಂದ ಎಐಸಿಸಿಗೆ ರವಾನೆ ಮಾಡಲಾಗಿದೆ. ಜನವರಿ 15ರ ನಂತರ ಅಧಿಕೃತ ಪ್ರಕಟಣೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

English summary
KPCC President G Parameshwar allegedly said Jagadish Shettar Government is having AIDs, Cancer and will detorate soon, Congress will come to power. Parameshwar was speaking in Congress Padayatra held in Koppal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X